ಮುಂಬೈ: ವಿಯೆಟ್ನಾಮ್‌ನ ಫು ಕ್ವಾಕ್ ದ್ವೀಪದ ಸಮೀಪ ಜುಲೈ 11ರಂದು ಸಂಭವಿಸಿದ ಭೀಕರ ಸ್ಪೀಡ್‌ಬೋಟ್ ಅಪಘಾತದಲ್ಲಿ ಮೃತಪಟ್ಟ 15 ಭಾರತೀಯ ಪ್ರವಾಸಿಗರ ಮೃತದೇಹಗಳ ತಡರಾತ್ರಿ ಭಾರತಕ್ಕೆ ತಲುಪಿವೆ.
ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಹಾಗೂ ಇಮಿಗ್ರೇಷನ್‌ನ ಎಲ್ಲಾ ಅಧಿಕೃತ ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ಎಲ್ಲಾ 15 ಮೃತದೇಹಗಳನ್ನು ಬಿಗಿ ಸರ್ಕಾರಿ ಬಂದೋಬಸ್ತ್‌ನೊಂದಿಗೆ ಅವರವರ ಮೂಲ ರಾಜ್ಯಗಳಿಗೆ ರವಾನಿಸಲಾಗಿದೆ.
ಮೃತದೇಹಗಳ ಆಗಮನ ಮತ್ತು ರವಾನೆ ವಿವರವಿಯೆಟ್ನಾಮ್ ಏರ್‌ಲೈನ್ಸ್‌ನ ವಿಶೇಷ ವಿಮಾನ (VN 979) ಮೂಲಕ ಸೋಮವಾರ ರಾತ್ರಿ 9:19ಕ್ಕೆ ಮೃತದೇಹಗಳನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ತದನಂತರ ದಕ್ಷಿಣದ ಮೂರು ರಾಜ್ಯಗಳಿಗೆ ವಿಮಾನ ಹಾಗೂ ಆಂಬ್ಯುಲೆನ್ಸ್ ಮೂಲಕ ಕಳುಹಿಸಿಕೊಡಲಾಗಿದೆ.
ಚೆನ್ನೈ ಮತ್ತು ಕೊಯಂಬತ್ತೂರಿಗೆ ವಿಮಾನದ ಮೂಲಕ 10, ಆಂಧ್ರಪ್ರದೇಶ 3 ಏರ್ ಇಂಡಿಯಾ ವಿಮಾನದಲ್ಲಿ ಹೈದರಾಬಾದ್‌ಗೆ ರವಾನಿಸಲಾಗಿದೆ. ಅಲ್ಲಿಂದ ಆಂಬ್ಯುಲೆನ್ಸ್ ಮೂಲಕ ಮೂಲ ಗ್ರಾಮಗಳಿಗೆ ಸಾಗಣೆ.ಕೇರಳ02ಕೊಟ್ಟಾರಕ್ಕರ ಮೂಲದ ದಂಪತಿಗಳಾದ ಎ.ಸಿ. ಥಾಮಸ್ (57) ಮತ್ತು ಲೋವಿನಿ ಥಾಮಸ್ (56) ಅವರ ಮೃತದೇಹಗಳನ್ನು ಬೆಳಗ್ಗೆ 6:30ರ ಏರ್ ಇಂಡಿಯಾ (AI 2650) ವಿಮಾನದಲ್ಲಿ ತಿರುವನಂತಪುರಂಗೆ 2 ಮೃತದೇಹಗಳನ್ನು ರವಾನಿಸಲಾಗಿದೆ.
ಘಟನೆಯ ಹಿನ್ನೆಲೆ
ವಿಯೆಟ್ನಾಮ್‌ನ ಫು ಕ್ವಾಕ್ ದ್ವೀಪದ ಸಮೀಪ.ಪ್ರವಾಸಿಗರ ವಿವರ: ಅಪಘಾತಕ್ಕೀಡಾದ ಸ್ಪೀಡ್‌ಬೋಟ್‌ನಲ್ಲಿ ಒಟ್ಟು 32 ಭಾರತೀಯ ಪ್ರವಾಸಿಗರು ಮತ್ತು 4 ಸ್ಥಳೀಯ ಸಿಬ್ಬಂದಿ ಇದ್ದರು.
ದುರಂತ ಸಂಭವಿಸಿದ ತಕ್ಷಣವೇ 16 ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಅವರು ಅಗತ್ಯ ವೈದ್ಯಕೀಯ ಚಿಕಿತ್ಸೆ ಪಡೆದು ಈಗಾಗಲೇ ಭಾರತಕ್ಕೆ ಮರಳಿದ್ದಾರೆ. ಪ್ರಸ್ತುತ ಮತ್ತೊಬ್ಬ ಪ್ರವಾಸಿಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ತನಿಖೆ ಮತ್ತು ಪರಿಹಾರ ಕ್ರಮ
ಭಾರತ ಸರ್ಕಾರ ಮತ್ತು ವಿಯೆಟ್ನಾಮ್‌ನಲ್ಲಿರುವ ಭಾರತೀಯ ದೂತಾವಾಸವು (Embassy) ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ, ದಾಖಲೆಗಳ ಪ್ರಕ್ರಿಯೆಯನ್ನು ಬೇಗ ಮುಗಿಸಿ ಮೃತದೇಹಗಳನ್ನು ತಾಯ್ನಾಡಿಗೆ ತರಲು ನೆರವಾಗಿವೆ.
ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ವಿಯೆಟ್ನಾಂ ಪೊಲೀಸರು ಸ್ಪೀಡ್‌ಬೋಟ್ ಚಾಲಕನನ್ನು ಬಂಧಿಸಿದ್ದು, ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ಪ್ರಗತಿಯಲ್ಲಿದೆ.ಆರ್ಥಿಕ ನೆರವು: ಪ್ರವಾಸಿಗರು ತೆರಳಿದ್ದ ಸಂಸ್ಥೆಯಾದ ‘ಲಾವಾ ಇಂಟರ್‌ನ್ಯಾಷನಲ್’ ಕಂಪನಿಯು ಮಾನವೀಯತೆಯ ಆಧಾರದ ಮೇಲೆ ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಆರ್ಥಿಕ ಪರಿಹಾರವನ್ನು ಘೋಷಿಸಿದೆ.

