HomeKarnatakaವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಕನ್ನಡ ಮಾಧ್ಯಮ ಇಂಗ್ಲೀಷ್ ಮಾಧ್ಯಮ ಕಲಿಕೆ ವಿಚಾರ: ಶಾಸಕ ಶಿವಲಿಂಗೇಗೌಡ-ಬಸವರಾಜ್ ರಾಯರೆಡ್ಡಿ ನಡುವೆ...

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಕನ್ನಡ ಮಾಧ್ಯಮ ಇಂಗ್ಲೀಷ್ ಮಾಧ್ಯಮ ಕಲಿಕೆ ವಿಚಾರ: ಶಾಸಕ ಶಿವಲಿಂಗೇಗೌಡ-ಬಸವರಾಜ್ ರಾಯರೆಡ್ಡಿ ನಡುವೆ ಜಟಾಪಟಿ

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಕನ್ನಡ ಮಾಧ್ಯಮ ಹಾಗೂ ಇಂಗ್ಲೀಷ್ ಮಾಧ್ಯಮ ಕಲಿಕೆ ವಿಚಾರ ಪ್ರತಿಧ್ವನಿಸಿದ್ದು, ಶಾಸಕರಾದ ಶಿವಲಿಂಗೇಗೌಡ ಹಾಗೂ ಬಸವರಾಜ್ ರಾಯರೆಡ್ದಿ ನಡುವೆ ಜಟಾಪಟಿಗೆ ಕಾರಣವಾಯಿತು.

ವಿಧಾನಸಭೆಯಲ್ಲಿ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕ ಪರ್ಯಾಲೋಚನೆ ವೇಳೆ ಶಾಲೆಯಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಕಲಿಕೆ ವಿಚಾರ ಪ್ರಸ್ತಾಪಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಇರಬೇಕು ಎಂದು ಒತ್ತಾಯಿಸಿದರು‌‌. ನಮ್ಮ‌ ಮಕ್ಕಳು ಇಂಗ್ಲಿಷ್ ಕಲಿಯಬೇಕು. ಅವರು ಕೂಡ ಅಮೆರಿಕಾಗೆ ಹೋಗಬೇಕು. ನಮ್ಮ ಮಕ್ಕಳು ಇಲ್ಲಿಯೇ ಇರಬೇಕಾ ಅವರು ದೇಶ ಸುತ್ತಿ ಬರಲಿ. ಕನ್ನಡ ಮಾಧ್ಯಮ ಬೇಡ ಅಂತ ಹೇಳಲ್ಲ. ಆದರೆ ಆಂಗ್ಲ ಮಾಧ್ಯಮ ಬೇಕು. ಹಳ್ಳಿ ಮಕ್ಕಳು, ಆರ್ಥಿಕ ಶಕ್ತಿ ಇಲ್ಲದ ಮಕ್ಕಳು ಇಂಗ್ಲಿಷ್ ಓದಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಬಸವರಾಜ ರಾಯರೆಡ್ಡಿ, ಮಕ್ಕಳು ಕನ್ನಡದಲ್ಲಿಯೇ ಓದಲಿ. ಕನ್ನಡದಲ್ಲಿಯೂ ಒಳ್ಳೆಯ ಅವಕಾಶಗಳಿವೆ. ಕನ್ನಡದ ಜೊತೆ ಇಂಗ್ಲಿಷ್ ಕಲಿಯಲಿ. ಇದಕ್ಕೆ ಯಾರ ಅಭ್ಯಂತರವೂ ಇಲ್ಲ ಎಂದರು.

ಮುಂದುವರೆದು ನಾವು ಬೇರೆಯವರಿಗೆ ಗುಲಾಮರಾಗಬೇಕಿಲ್ಲ, ಇಂಗ್ಲಿಷ್ ಗುಲಾಮರಾಗಬೇಕಿಲ್ಲ. ಕನ್ನಡದಲ್ಲಿ ಓದಿದರೆ ಸಮಸ್ಯೆಯೇನು? ಎಂದು ಶಿವಲಿಂಗೇಗೌಡ ಅವರ ಮಾತಿಗೆ ಪ್ರಶ್ನಿಸಿದರು.

ಈ ವೇಳೆ ನೀವು ಯಾಕೆ ಇಂಗ್ಲಿಷ್ ಓದಿದ್ರಿ? ಎಂದು ಪ್ರಶ್ನಿಸಿದ ಶಿವಲಿಂಗೇಗೌಡ, ನೀವು ಸರ್ಕಾರದ ಪರವಾಗಿ ಮಾತನಾಡುತ್ತಿಲ್ಲ. ಸರ್ಕಾರದ ವಿರುದ್ಧ ಮಾತನಾಡುತ್ತಿದ್ದೀರಿ. ಇಂಗ್ಲಿಷ್ ಅವಶ್ಯಕತೆ ಇಲ್ಲ ಅಂತ ಹೇಗೆ ಹೇಳ್ತೀರಾ? ನಮ್ಮ ಮಕ್ಕಳು ಇಂಗ್ಲಿಷ್ ಕಲಿಯಬೇಕು. ಇಂಗ್ಲಿಷ್ ಬೇಕೇಬೇಕು. ಸರ್ಕಾರಿ ಶಾಲೆ ಮಕ್ಕಳು ಸಹ ಇಂಗ್ಲಿಷ್ ಓದಬೇಕು ಎಂದು ಹೇಳಿದರು.

ಈ ವೇಳೆ ರಾಯರೆಡ್ಡಿ ಮತ್ತು ಶಿವಲಿಂಗೇಗೌಡರ ನಡುವೆ ವಾಗ್ವಾದ ನಡೆಯಿತು‌. ಇಂಗ್ಲಿಷ್ ಬರೋರು ಮಾತ್ರ ಮೇಧಾವಿ ಅಲ್ಲ. ನಾವೆಲ್ಲಾ ಪಿಯುಸಿ ತನಕ ಕನ್ನಡ ಓದಿದ್ದೇವೆ. ಬೇರೆ ದೇಶಗಳಲ್ಲಿ ಸ್ಥಳೀಯ ಭಾಷೆಯನ್ನೇ ಕಲಿಯುತ್ತಾರೆ. ಆಂಗ್ಲ ಮಾಧ್ಯಮಕ್ಕೆ ಆದ್ಯತೆ ನೀಡುವುದಿಲ್ಲ ಎಂದು ಪ್ರತಿಪಾದಿಸಿದರು.

ಇದೇ ವೇಳೆ ಆಡಳಿತ ಪಕ್ಷದ ಇಬ್ಬರು ಶಾಸಕರ ಮಾತಿನ ಚಕಮಕಿಗೆ ಬಿಜೆಪಿ ಸದಸ್ಯರು ಹಾಸ್ಯ ಚಟಾಕಿ ಹಾರಿಸಿದರು. ಅವರಿಬ್ಬರಿಗೆ ಯಾವ ಮಾಧ್ಯಮ ಬೇಕು ಎಂಬುದನ್ನು ಮೊದಲು ಮುಗಿಸಿ ಎಂದು ಕಾಲೆಳೆದರು.

ಇದೇ ವೇಳೆ ಸ್ಪೀಕರ್ ಯು.ಟಿ. ಖಾದರ್, ಕರ್ನಾಟಕದ ಶಾಲೆಗಳಲ್ಲಿ ಲಾಂಗ್ವೇಜ್ ಲ್ಯಾಬ್ ತೆರೆಯಿರಿ. ಕನ್ನಡದ ಜೊತೆಗೆ ಎಲ್ಲ ಭಾಷೆಗಳನ್ನು ಕಲಿಯುವಂತಾಗಬೇಕು. ಲಾಂಗ್ವೇಜ್ ಲ್ಯಾಬ್ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ.‌ ಬೇರೆ ದೇಶಗಳ ಭಾಷೆಯನ್ನೂ ಕಲಿಸಲು ಮುಂದಾಗಿ ಎಂದು ಸಲಹೆ ನೀಡಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular