ಶೌಚಾಲಯ ಗೋಡೆ ಮೇಲಿದ್ದ ಮೊಬೈಲ್ ನೋಡಿದ ಮಹಿಳೆಗೆ ಶಾಕ್

ಬೆಂಗಳೂರು: ಆಸ್ಪತ್ರೆಯ ಮಹಿಳಾ ಶೌಚಾಲಯದ ಗೋಡೆಯ ಮೇಲೆ ರಹಸ್ಯವಾಗಿ ಮೊಬೈಲ್ ಇಟ್ಟು ಕ್ಯಾಮರಾ ಆನ್ ಮಾಡಿ ವಿಡಿಯೋ ಸೆರೆ ಹಿಡಿಯುತ್ತಿದ್ದ ಆರೋಪಿಯನ್ನು ತಿಲಕ್ ನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ.

ಕಲಬುರಗಿ ಮೂಲದ ಯಲ್ಲಾಲಿಂಗ(28) ಬಂಧಿತ ಆರೋಪಿ. ಅ. 31 ರಂದು ಬನ್ನೇರುಘಟ್ಟ ಮುಖ್ಯ ರಸ್ತೆಯ ಜಯದೇವ ಆಸ್ಪತ್ರೆಯ ನೆಲಮಹಡಿಯ ಮಹಿಳಾ ಶೌಚಾಲಯದ ಗೋಡೆಯ ಮೇಲೆ ರಹಸ್ಯವಾಗಿ ಮೊಬೈಲ್ ಇಟ್ಟು ಕ್ಯಾಮರಾ ಆನ್ ಮಾಡಿ ಮಹಿಳೆಯ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ. ಶೌಚಾಲಯಕ್ಕೆ ಬಂದಿದ್ದ ಮಹಿಳಾ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವಾರ್ಡ್ ಹೆಲ್ಪರ್ ಆಗಿ ಕೆಲಸ ಮಾಡುತ್ತಿರುವ ಮಹಿಳೆ ಶೌಚಾಲಯಕ್ಕೆ ತೆರಳಿ ವಾಪಸ್ ಬರುವಾಗ ಗೋಡೆಯ ಮೇಲೆ ಮೊಬೈಲ್ ಕಾಣಿಸಿದೆ. ಅದನ್ನು ಪರಿಶೀಲಿಸಿದಾಗ ತನ್ನದೇ ವಿಡಿಯೋ ಸೆರೆಯಾಗಿರುವುದು ಕಂಡು ಬಂದಿದೆ. ಅದನ್ನು ತೆಗೆದುಕೊಂಡು ಹೊರಗೆ ಬಂದಾಗ ನನ್ನ ಮೊಬೈಲ್ ಕೊಡು ಎಂದು ಆರೋಪಿ ಕೇಳಿದ್ದಾನೆ. ಮೊಬೈಲ್ ಕೊಡುವುದಿಲ್ಲ ಎಂದು ಮಹಿಳಾ ಸಿಬ್ಬಂದಿ ಜೋರಾಗಿ ಕಿರುಚಿದ್ದು, ಅಲ್ಲಿದ್ದ ಜನ ಓಡಿ ಬಂದು ಆತನನ್ನು ಹಿಡಿದುಕೊಂಡು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read