HomeLatest NewsBREAKING: ತಮಿಳು ನಟ ವಿಜಯ್ ಮನೆಗೆ ನುಗ್ಗಿದ ಅಪರಿಚಿತ ಯುವಕ ಪೊಲೀಸ್ ವಶಕ್ಕೆ

BREAKING: ತಮಿಳು ನಟ ವಿಜಯ್ ಮನೆಗೆ ನುಗ್ಗಿದ ಅಪರಿಚಿತ ಯುವಕ ಪೊಲೀಸ್ ವಶಕ್ಕೆ

ಚೆನ್ನೈ: ಟಾಲಿವುಡ್ ಖ್ಯಾತ ನಟ, ತಮಿಳಗ ವೆಟ್ರಿ ಕಳಗಂ ಸಂಸ್ಥಾಪಕ ಅಧ್ಯಕ್ಷ ವಿಜಯ್ ಮನೆಯಲ್ಲಿ ಭದ್ರತಾ ಲೋಪ ಸಂಭವಿಸಿದೆ. ನಟ ವಿಜಯ್ ಮನೆಗೆ ಅಪರಿಚಿತ ಯುವಕನೊಬ್ಬ ನುಗ್ಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಅಪರಿಚಿತ ಯುವಕನೊಬ್ಬ ವಿಜಯ್ ಮನೆಗೆ ನುಗ್ಗಿದ್ದಾನೆ. ಚೆನ್ನೈನ ಪೂರ್ವ ಕರಾವಳಿ ರಸ್ತೆಯಲ್ಲಿರುವ ನೀಲಂಕರೆಯಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಗೆ ನುಗ್ಗಿರುವ ಯುವಕ ವಿಜಯ್ ಮನೆಯ ಟೆರೇಸ್ ಮೇಲೆ ಹತ್ತಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆ ಬಳಿಕ ಪೊಲೀಸರು 24 ವರ್ಷದ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ವಿಜಯ್ ಮನೆಗೆ ನುಗ್ಗಿದ ಯುವಕ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular