HomeEntertainment62ನೇ ವಸಂತಕ್ಕೆ ಕಾಲಿಟ್ಟ ಹಿರಿಯ ನಟಿ ಗೀತಾ

62ನೇ ವಸಂತಕ್ಕೆ ಕಾಲಿಟ್ಟ ಹಿರಿಯ ನಟಿ ಗೀತಾ

 

 

ಹಿರಿಯ ಬಹುಭಾಷಾ ನಟಿ ಗೀತಾ ಇಂದು 62ನೇ ವಸಂತಕ್ಕೆ ಕಾಲಿಟ್ಟಿದ್ದು, ಹಿರಿಯ ಕಲಾವಿದರು ಸೇರಿದಂತೆ ಯುವ ನಟ ನಟಿಯರು ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1978 ರಲ್ಲಿ ತೆರೆ ಕಂಡ ತಮಿಳಿನ ‘ಬೈರವಿ’ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಇವರು ಅದೇ ವರ್ಷದಲ್ಲಿ ತೆಲುಗಿನ ‘ಮನ ವೂರಿ ಪಾಂಡವುಲು’ ದಲ್ಲಿ ತೆರೆ ಹಂಚಿಕೊಂಡಿರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಜನಪ್ರಿಯ ನಟಿಯಾಗಿ ಹೊರಹೊಮ್ಮಿದರು. ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಏಕ ಕಾಲಕ್ಕೆ ಬಿಡುಗಡೆಯಾದ ರಜನಿಕಾಂತ್ ಅವರ ‘ಘರ್ಜನೆ’ ಚಿತ್ರದಲ್ಲಿ ಮಾದವಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರು.

ನಟಿ ಗೀತಾ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲಿ ತೆರೆ ಹಂಚಿಕೊಳ್ಳುವ ಮೂಲಕ ಪಂಚಭಾಷಾ ತಾರೆ ಎಂದೇ ಖ್ಯಾತಿ ಪಡೆದರು. ಕನ್ನಡದಲ್ಲಿ ‘ಹೆಣ್ಣಿನ ಸೌಭಾಗ್ಯ’ ‘ಆಶಾಕಿರಣ’ ‘ದೇವತೆ’ ಸೇರಿದಂತೆ ಒಂದರ ಮೇಲೊಂದು ಸೂಪರ್ ಡೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದರು. 2021 ರಲ್ಲಿ ಕೊನೆಯದಾಗಿ ಮಲಯಾಳಂ ನ ‘ಜಿಬೌಟಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಇವರು ಇತ್ತೀಚಿಗೆ ಚಿತ್ರರಂಗದಿಂದ ದೂರ ಉಳಿದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular