HomeEntertainmentಹುಟ್ಟು ಹಬ್ಬದ ಸಂಭ್ರಮದಲ್ಲಿ ಹಿರಿಯ ನಟ ಅವಿನಾಶ್

ಹುಟ್ಟು ಹಬ್ಬದ ಸಂಭ್ರಮದಲ್ಲಿ ಹಿರಿಯ ನಟ ಅವಿನಾಶ್

ಹಿರಿಯ ನಟ ಅವಿನಾಶ್ ಗೆ ಸಿಗ್ತು ಪಶ್ಚಿಮ ಘಟ್ಟದ ಸ್ಥಳೀಯ ಎಂಎಲ್ಎ ಪಟ್ಟ

ಸುಮಾರು 38 ವರ್ಷಗಳಿಂದ 200 ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿರುವ ಹಿರಿಯ ನಟ ಅವಿನಾಶ್ ಇಂದು 64ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವಿನಾಶ್ ನಟಿಸಿದ ಮೊದಲ ಸಿನಿಮಾ ‘ತ್ರಿಶೂಲ’ 1985ರಲ್ಲಿ ತೆರೆಕಂಡಿತ್ತು. ನಂತರ ’27 ಮಾವಳ್ಳಿ ಸರ್ಕಲ್’ ‘ಆಪತ್ಬಾಂಧವ’ ‘ಮಧ್ವಾಚಾರ್ಯ’ ಸೇರಿದಂತೆ  ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿದರು. ಕನ್ನಡ ಚಿತ್ರರಂಗದಲ್ಲಿ ಸಪೋರ್ಟಿಂಗ್ ಆಕ್ಟರ್ ಆಗಿ ಕಾಣಿಸಿಕೊಂಡಿರುವ ಇವರು ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಚಿತ್ರರಂಗದಲ್ಲಿ ಮಿಂಚಿರುವ ನಟ ಅವಿನಾಶ್ ಇತ್ತೀಚಿಗೆ ‘ಐರಾವನ್’ ಸೇರಿದಂತೆ ‘ಶೀಲಾ’ ‘ಡೇವಿಡ್’ ‘ಸಪ್ತ ಸಾಗರದಾಚೆ ಎಲ್ಲೋ’ ‘ವಾಮನ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಲವಾರು ಸಿನಿ ತಾರೆಯರು ಇಂದು ಅವಿನಾಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular