HomeEntertainmentಅಕ್ಟೋಬರ್ 13ಕ್ಕೆ ತೆರೆ ಕಾಣಲಿದೆ ʼವೇಷʼ ಸಿನಿಮಾ

ಅಕ್ಟೋಬರ್ 13ಕ್ಕೆ ತೆರೆ ಕಾಣಲಿದೆ ʼವೇಷʼ ಸಿನಿಮಾ

ಕೃಷ್ಣ ನಡಪಾಲ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ‘ವೇಷ’ ಚಿತ್ರ ಅಕ್ಟೋಬರ್ 13 ರಂದು ರಾಜ್ಯದ್ಯಂತ ತೆರೆ ಕಾಣಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ.

ಇತ್ತೀಚಿಗಷ್ಟೇ ಈ ಸಿನಿಮಾದ ಟ್ರೈಲರನ್ನು ಮರಿ ಟೈಗರ್ ವಿನೋದ್ ಪ್ರಭಾಕರ್ ಲಾಂಚ್ ಮಾಡಿದ್ದರು. ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದ್ದ ಈ ಟ್ರೈಲರ್ ಗೆ ಸಿನಿ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸಿನಿಮಾದಲ್ಲಿ ರಾಘು ಸೇರಿದಂತೆ ನಿಧಿ, ಮಂಜು ಪಾವಗಡ, ಜೈ ಶೆಟ್ಟಿ, ವಾಣಿಶ್ರೀ, ಪ್ರಿಯಾಂಕ ಕಾಮತ್, ಶಿಲ್ಪ ಕುಮ್ಟ ತೆರೆ ಹಂಚಿಕೊಂಡಿದ್ದಾರೆ. ಹಂಸಿನಿ ಕ್ರಿಯೇಶನ್ ಬ್ಯಾನರ್ ನಡಿ ರಾಘವೇಂದ್ರ ಡಿಜಿ ನಿರ್ಮಾಣ ಮಾಡಿದ್ದು, ಉತ್ತಮ್ ಸಾರಂಗ್ ಸಂಗೀತ ಸಂಯೋಜನೆ ನೀಡಿದ್ದಾರೆ. ಸುರೇಂದ್ರ ಅವರ ಛಾಯಾಗ್ರಾಹಣ ಹಾಗೂ ಸಂಕಲನವಿದೆ.

 

For Latest News Updates, Join Our Whatsapp Community🚩
RELATED ARTICLES

Most Popular