HomeBusinessವರ್ಸೆ ಇನ್ನೋವೇಶನ್ ಸ್ವತಂತ್ರ ನಿರ್ದೇಶಕರಾಗಿ ಪಿಆರ್ ರಮೇಶ್ ನೇಮಕ

ವರ್ಸೆ ಇನ್ನೋವೇಶನ್ ಸ್ವತಂತ್ರ ನಿರ್ದೇಶಕರಾಗಿ ಪಿಆರ್ ರಮೇಶ್ ನೇಮಕ

ವರ್ಸೆ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್ (VerSe Innovation) ಮಹತ್ವದ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ. ತನ್ನ ಆಡಳಿತ ಮಂಡಳಿಯ ನೂತನ ಸ್ವತಂತ್ರ ನಿರ್ದೇಶಕರಾಗಿ ಡೆಲಾಯ್ಟ್ ಇಂಡಿಯಾದ ಮಾಜಿ ಅಧ್ಯಕ್ಷ ಪಿ.ಆರ್.ರಮೇಶ್ ನೇಮಕ ಮಾಡಲಾಗಿದೆ ಎಂದು ಹೇಳಿದೆ. ಅವರು ಕಂಪನಿಯ ಲೆಕ್ಕಪರಿಶೋಧನಾ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ.

ವರ್ಸೆ ಇನ್ನೋವೇಶನ್ ದೇಶದ ಪ್ರಮುಖ ಎಐ-ಚಾಲಿತ ಸ್ಥಳೀಯ ಭಾಷಾ ತಂತ್ರಜ್ಞಾನ ಪ್ಲಾಟ್‌ಫಾರ್ಮ್ ಮತ್ತು ಜನಪ್ರಿಯ ಆ್ಯಪ್‌ಗಳಾದ ಡೈಲಿಹಂಟ್, ಜೋಶ್, ಮ್ಯಾಗ್‌ಝ್ಟರ್  ಹಾಗೂ ನೆಕ್ಸವರ್ಸ್.ಎಐನ ಮಾತೃಸಂಸ್ಥೆ.

ಇದು ವರ್ಸೆ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್ ಆಡಳಿತದಲ್ಲಿ ಬಹುದೊಡ್ಡ ಬದಲಾವಣೆ ಎಂದು ಅಂದಾಜಿಸಲಾಗಿದೆ. ಈ ಕಾರ್ಯತಂತ್ರದ ಮೂಲಕ ದೇಶದ ಬಹುದೊಡ್ಡ ಸಂಸ್ಥೆಯೊಂದು ಮುಂದಿನ ಹಂತದತ್ತ ಹೆಜ್ಜೆ ಹಾಕಿದೆ. ಈ ನಿರ್ಣಯ ಕಂಪನಿಯ ಕಾರ್ಪೊರೇಟ್ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಿ.ಆರ್.ರಮೇಶ್ ಪರಿಚಯ: ಪಿ.ಆರ್.ರಮೇಶ್ ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ಹಣಕಾಸು ಮೇಲ್ವಿಚಾರಣೆ, ಕಾರ್ಪೊರೇಟ್ ಆಡಳಿತ, ನಿಯಂತ್ರಕ ಸಲಹೆ ಮತ್ತು ಬೋರ್ಡ್ ನಾಯಕತ್ವದಲ್ಲಿ 40 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ.

ಪ್ರತಿಷ್ಠಿತ ಡೆಲಾಯ್ಟ್ ಇಂಡಿಯಾ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿ ಹಾಗೂ ಡೆಲಾಯ್ಟ್ ಗ್ಲೋಬಲ್ ಬೋರ್ಡ್‌ನ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತದ ಪ್ರಮುಖ ದೇಶೀಯ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಆಡಳಿತ, ಹಣಕಾಸು ವರದಿ ಮಾನದಂಡಗಳ ಕುರಿತು ಮಾರ್ಗದರ್ಶನ ಮಾಡಿದ್ದಾರೆ.

ಪಿ.ಆರ್.ರಮೇಶ್ ಏರ್ ಇಂಡಿಯಾ, ಸಿಪ್ಲಾ, ನೆಸ್ಲೆ ಇಂಡಿಯಾ, ಲಾರ್ಸೆನ್ ಅಂಡ್ ಟರ್ಬೊ, ಕ್ರಾಮ್ಟನ್ ಗ್ರೀವ್ಸ್, ಐಟಿಸಿ ಹೋಟೆಲ್ಸ್, ಸೈಂಟ್, ತೇಜಸ್ ನೆಟ್‌ವರ್ಕ್ಸ್ ಮತ್ತು ಎಚ್‌ಡಿಎಫ್‌ಸಿ ಸೇರಿದಂತೆ ಹಲವು ಪ್ರಮುಖ ಪಟ್ಟಿಮಾಡಲಾದ ಮತ್ತು ಪಟ್ಟಿಮಾಡದ ಕಂಪನಿಗಳ ಆಡಳಿತ ಮಂಡಳಿಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅತ್ಯುತ್ತಮ ಸೇವೆಯನ್ನು ಗುರುತಿಸಿ ಏಷ್ಯನ್ ಸೆಂಟರ್ ಫಾರ್ ಕಾರ್ಪೊರೇಟ್ ಗವರ್ನೆನ್ಸ್ ಅಂಡ್ ಸಸ್ಟೈನಬಿಲಿಟಿ ಸಂಸ್ಥೆಯು 2022-23ನೇ ಸಾಲಿನ ಅತ್ಯುತ್ತಮ ಸ್ವತಂತ್ರ ನಿರ್ದೇಶಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಇದಲ್ಲದೆ, ಸೆಬಿ ಆರ್‌ಬಿಐ ಮತ್ತು ಐಆರ್‌ಡಿಎ ನಂತಹ ಪ್ರಮುಖ ನಿಯಂತ್ರಣ ಸಂಸ್ಥೆಗಳ ಸಲಹಾ ಸಮಿತಿಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಭಾರತದಲ್ಲಿ ಆಡಳಿತ ಮತ್ತು ಹಣಕಾಸು ಮಾನದಂಡಗಳ ವಿಕಸನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಈ ನೇಮಕಾತಿ ಕುರಿತು ವರ್ಸೆ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್ ಸಹ-ಸಂಸ್ಥಾಪಕ ಉಮಂಗ್ ಬೇಡಿ ಮಾತನಾಡಿ, ಯಾವುದೇ ಒಂದು ಕಂಪೆನಿಯು ದೀರ್ಘಕಾಲದವರೆಗೆ ಯಶಸ್ವಿಯಾಗಿ ಮುನ್ನಡೆಸಲು ಬಲವಾದ ಆಡಳಿತ ಮತ್ತು ಹಣಕಾಸಿನ ಶಿಸ್ತು ಅತ್ಯಂತ ಮೂಲಭೂತ ಅಂಶಗಳಾಗಿವೆ ಎಂದು ಹೇಳಿದ್ದಾರೆ.

ಪಿ.ಆರ್‌ ರಮೇಶ್‌ ಬೋರ್ಡ್‌ ಉಸ್ತುವಾರಿ, ನಿಯಂತ್ರಣ ಚೌಕಟ್ಟುಗಳು ಮತ್ತು ಜಾಗತಿಕ ಲೆಕ್ಕಪರಿಶೋಧನಾ ನಾಯಕತ್ವದಲ್ಲಿ ಸಾಟಿಯಿಲ್ಲದ ಅನುಭವವನ್ನು ಹೊಂದಿದ್ದಾರೆ. ವರ್ಸೆ ಇನ್ನೋವೇಶನ್ ಬೆಳವಣಿಗೆಯತ್ತ ಗಮನಹರಿಸುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಆಡಳಿತದ ಮಾನದಂಡಗಳನ್ನು ಬಲಪಡಿಸಲು ಮತ್ತು ಪಾಲುದಾರರ ವಿಶ್ವಾಸವನ್ನು ಹೆಚ್ಚಿಸಲು ಅವರ ಮಾರ್ಗದರ್ಶನವು ಪ್ರಮುಖ ಸಾಧನವಾಗಲಿದೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular