HomeEntertainmentಕಾರು ಅಪಘಾತದ ವಾರಗಳ ನಂತರ ದುರಂತ ಅಂತ್ಯ ಕಂಡ ಮಿಸ್ ವೆನೆಜುವೆಲಾ

ಕಾರು ಅಪಘಾತದ ವಾರಗಳ ನಂತರ ದುರಂತ ಅಂತ್ಯ ಕಂಡ ಮಿಸ್ ವೆನೆಜುವೆಲಾ

ಒರ್ಲ್ಯಾಂಡೊದಲ್ಲಿ ಕಾರು ಅಪಘಾತಕ್ಕೊಳಗಾದ ಮಿಸ್ ವೆನೆಜುವೆಲಾ ಅರಿಯಾನಾ ವೈರಾ ಆಗಸ್ಟ್ 3 ರಂದು ನಿಧನರಾದ್ರು. ಅವರಿಗೆ 26 ವರ್ಷ ವಯಸ್ಸಾಗಿತ್ತು.

ಅರಿಯಾನಾ ಅವರಿದ್ದ ಕಾರು ಜುಲೈ 13 ರಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಭೀಕರ ಕಾರು ಅಪಘಾತದಲ್ಲಿ ಅರಿಯಾನಾ ವೈರಾ ಕಾರಿನ ಚಕ್ರದ ಬಳಿ ಸಿಲುಕಿದ್ದರು.

ಮಾಡೆಲ್ ಮತ್ತು ಮಿಸ್ ವೆನೆಜುವೆಲಾ ಅವರು ಅಪಘಾತದಿಂದ ಚೇತರಿಸಿಕೊಂಡ ನಂತರ ಹೃದಯಾಘಾತದಿಂದ ಬಳಲುತ್ತಿದ್ದರು ಎಂದು ಅರಿಯಾನಾ ಅವರ ತಾಯಿ ಹೇಳಿದ್ದಾರೆ. ಅಪಘಾತದ ಎರಡು ತಿಂಗಳ ಮೊದಲು, ಅರಿಯಾನಾ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದರು. ಆ ವಿಡಿಯೋ ನೋಡಿದ್ರೆ ಬಹುಶಃ ಅವರು ಶೀಘ್ರದಲ್ಲೇ ತಾನು ಸಾಯಬಹುದು ಎಂದು ಊಹಿಸಿದ್ದರೇನೋ ಎಂದೆನಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ ಆಕೆ, ನನ್ನ ಭವಿಷ್ಯದ ಅಂತ್ಯಕ್ರಿಯೆಗಾಗಿ ನನ್ನನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದೇನೆ. ಏಕೆಂದರೆ ಯಾವಾಗಲೂ ನಾನು ವಿಡಿಯೋಗಳನ್ನು ತೆಗೆದುಕೊಳ್ಳುತ್ತೇನೆ ಎಂದು ತಮ್ಮ ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದರು.

ಅಕ್ಟೋಬರ್‌ನಲ್ಲಿ ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ನಡೆಯಲಿರುವ ಮಿಸ್ ಲ್ಯಾಟಿನ್ ಅಮೆರಿಕಾ ಆಫ್ ವರ್ಲ್ಡ್-2023 ಸ್ಪರ್ಧೆಯಲ್ಲಿ ವೆನೆಜುವೆಲಾವನ್ನು ಪ್ರತಿನಿಧಿಸಲು ಅರಿಯಾನಾ ಸಜ್ಜಾಗಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular