ನ್ಯೂಯಾರ್ಕ್: ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ನಾನೇ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ತಮ್ಮದೇ ಒಡೆತನದ ಟ್ರುತ್ ಸೋಷಿಯಲ್ ನಲ್ಲಿ ಈ ಕುರಿತು ಭಾವಚಿತ್ರವನ್ನು ಪ್ರಕಟಿಸಿದ್ದಾರೆ.
ಟ್ರುತ್ ಸೋಷಿಯಲ್ ಟ್ರಪ್ ಒಡೆತನದ್ದಾಗಿದ್ದು, ಇದರಲ್ಲಿ ಪ್ರಕಟವಾದ ಪೋಸ್ಟ್ ತೀವ್ರ ಕುತೂಹಲ ಮೂಡಿಸಿದೆ. ವೆನುಜುವೆಲಾದ ಹಂಗಾಮಿ ಅಧ್ಯಕ್ಷ ನಾನೇ. 2026ರ ಜನವರಿಯಲ್ಲಿ ಡೊನಾಲ್ಡ್ ಟ್ರಂ ವೆನುಜುವೆಲಾದ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು ಎಂದು ಬರೆಯಲಾಗಿದೆ.
ಇತ್ತೀಚೆಗೆ ಅಮೆರಿಕಾ ಸೇನಾಪಡೆಗಳು ವೆನೆಜುವೆಲಾದ ರಾಜಧಾನಿ ಕರಾಕಸ್ ಮೇಲೆ ವಾಯುದಾಳಿ ನಡೆಸುವ ಮೂಲಕ ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಹಾಗೂ ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದವು. ಬಳಿಕ ಅವರನ್ನು ಅಮೆರಿಕಾದ ನ್ಯೂಯಾರ್ಕ್ ಗೆ ಸ್ಥಳಾಂತರಿಸಲಾಗಿದೆ. ದಂಪತಿ ವಿರುದ್ಧ ಮಾದಕ ವಸ್ತು ಕಳ್ಳ ಸಾಗಾಣೆ, ಭಯೋತ್ಪಾದನಾ ಪಿತೂರಿ ಆರೋಪಗಳನ್ನು ಹೊರಿಸಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಅಮೆರಿಕ ಅಧ್ಯಕ್ಷ ಟ್ರಂಪ್ ತನ್ನನ್ನು ವೆನೆಜುವೆಲಾ ಹಂಗಾಮಿ ಅಧ್ಯಕ್ಷ ಎಂಬ ರೀತಿಯಲ್ಲಿ ಬಿಂಬಿಸುವ ಪೋಸ್ಟ್ ಪ್ರಕಟಿಸಿದ್ದು ಚರ್ಚೆಗೆ ಕಾರಣವಾಗಿದೆ.

