HomeLatest NewsBIG NEWS : ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಬಿಗ್ ಶಾಕ್ : ಶೀಘ್ರವೇ ಟಿಕೆಟ್ ದರ...

BIG NEWS : ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಬಿಗ್ ಶಾಕ್ : ಶೀಘ್ರವೇ ಟಿಕೆಟ್ ದರ 5 % ಏರಿಕೆ |Namma Metro


ಬೆಂಗಳೂರು : ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಬಿಗ್ ಶಾಕ್ ಎದುರಾಗಿದ್ದು, ನಮ್ಮ ಮೆಟ್ರೋ ದರ ಏರಿಕೆ ಮಾಡಲು ‘BMRCL’ ಮುಂದಾಗಿದೆ ಎನ್ನಲಾಗಿದೆ.

ಹೌದು, ಈಗಾಗಲೇ ದಿನನಿತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಜನರು ಹೈರಾಣಾಗಿದ್ದು, ಇದರ ನಡುವೆ ಬಿಎಂಆರ್ ಸಿಎಲ್ ಟಿಕೆಟ್ ದರ ಹೆಚ್ಚಳದ ಶಾಕ್ ನೀಡಲಿದೆ.

ಮತ್ತೆ ಟಿಕೆಟ್ ದರ ಏರಿಕೆಗೆ ಬಿಎಂಆರ್ ಸಿಎಲ್ ನಿರ್ಧರಿಸಿದ್ದು, ಈಈಗ 5 % ದರ ಏರಿಕೆಗೆ ಬಿಎಂಆರ್ ಸಿಲ್ ಸಿದ್ದತೆ ನಡೆಸುತ್ತಿದೆ. ಶುಲ್ಕ ನಿಗದಿ ಸಮತಿ ಪ್ರತಿ ವರ್ಷ ಟಿಕೆಟ್ ಶುಲ್ಕದಲ್ಲಿ 5 % ರಷ್ಟು ಹೆಚ್ಚಳವನ್ನು ಸೂಚಿಸಿದ ಕಾರಣ ಟಿಕೆಟ್ ಏರಿಕೆಯಾಗಲಿದೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫೆಬ್ರವರಿಯಲ್ಲಿ ಶೇ 5ರಷ್ಟು ಟಿಕೆಟ್ ದರ ಹೆಚ್ಚಳವಾಗುವ ಸಾಧ್ಯತೆಯಿದೆ. ದರ ಪರಿಷ್ಕರಣೆ ಸಮಿತಿ ವರದಿಯ ಪ್ರಕಾರ, ಕಾರ್ಯಾಚರಣೆ ವೆಚ್ಚ ಹೆಚ್ಚಳದಿಂದ ಈ ಕ್ರಮ ಅನಿವಾರ್ಯ ಎನ್ನಲಾಗಿದೆ. ದರ ಏರಿಕೆ ಮಾಡದಿದ್ದರೆ ಬಿಎಂಆರ್ಸಿಎಲ್ ನಷ್ಟ ಅನುಭವಿಸುವ ಸಾಧ್ಯತೆಯಿದ್ದು, ಆರ್ಥಿಕ ಸ್ಥಿರತೆ ಕಾಪಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ.

7.5 ವರ್ಷಗಳ ಬಳಿಕ ಬಿಎಂಆರ್ಸಿಎಲ್ 2025 ಫೆಬ್ರವರಿಯಲ್ಲಿ ದರವನ್ನು ಶೇ 71.43 ರಷ್ಟು ಹೆಚ್ಚಿಸಿತ್ತು. ಇದರಿಂದ ಬೆಂಗಳೂರು ಮೆಟ್ರೋ ದುಬಾರಿ ಎನಿಸಿಕೊಂಡಿತ್ತು. ಮತ್ತೆ ದರ ಏರಿಕೆಯಾಗುವುದರಿಂದ ಪ್ರಯಾಣಿಕರು ಮೆಟ್ರೋ ಹತ್ತಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಎದುರಾಗುವುದಂತು ನಿಶ್ಚಿತ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular