HomeAutoHSRP ಅಳವಡಿಸಿಕೊಳ್ಳದ 1.45 ಕೋಟಿ ವಾಹನಗಳು: ಡಿ. 31 ರವರೆಗೆ ಗಡುವು ವಿಸ್ತರಿಸಿದ ಸರ್ಕಾರ

HSRP ಅಳವಡಿಸಿಕೊಳ್ಳದ 1.45 ಕೋಟಿ ವಾಹನಗಳು: ಡಿ. 31 ರವರೆಗೆ ಗಡುವು ವಿಸ್ತರಿಸಿದ ಸರ್ಕಾರ

ಬೆಂಗಳೂರು: ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್(HSRP) ಅಳವಡಿಕೆ ಗಡುವನ್ನು ಸರ್ಕಾರ ಐದನೇ ಬಾರಿಗೆ ವಿಸ್ತರಿಸಿದ್ದು, ಡಿಸೆಂಬರ್ 31 ರವರೆಗೆ ಕಾಲಾವಕಾಶ ನೀಡಿದೆ.

ಹೆಚ್.ಎಸ್.ಆರ್.ಪಿ. ನಂಬರ್ ಪ್ಲೇಟ್ ಅಳವಡಿಕೆಗೆ ಈಗಾಗಲೇ ನಾಲ್ಕು ಬಾರಿ ಗಡುವು ಮುಂದೂಡಿದ್ದ ಸರ್ಕಾರ ಇದೀಗ ಐದನೇ ಬಾರಿಗೆ ಗಡುವು ವಿಸ್ತರಿಸಿದೆ. ಇತ್ತೀಚಿಗಷ್ಟೇ ಹೈಕೋರ್ಟ್ ಹೆಚ್.ಎಸ್.ಆರ್.ಪಿ. ಅಳವಡಿಸಿದ ಸವಾರರ ವಿರುದ್ಧ ಡಿಸೆಂಬರ್ 4ರ ವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶಿಸಿತ್ತು. ರಾಜ್ಯ ಸರ್ಕಾರ ಹೆಚ್.ಎಸ್.ಆರ್.ಪಿ. ಅಳವಡಿಕೆ ಗಡುವು ವಿಸ್ತರಿಸಿ ಆದೇಶ ಹೊರಡಿಸಿದೆ.

2019ರ ಏಪ್ರಿಲ್ 1ರ ಮೊದಲು ನೋಂದಣಿಯಾದ ವಾಹನಗಳಿಗೆ ಹೆಚ್.ಎಸ್.ಆರ್.ಪಿ. ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ ರಾಜ್ಯದಲ್ಲಿರುವ ಸುಮಾರು ಎರಡು ಕೋಟಿ ವಾಹನಗಳಲ್ಲಿ ಸದ್ಯ 55 ಲಕ್ಷ ವಾಹನಗಳು ಮಾತ್ರ ಹೆಚ್.ಎಸ್.ಆರ್.ಪಿ. ಅಳವಡಿಸಿಕೊಂಡಿವೆ. ಇನ್ನು 1.45 ಕೋಟಿ ವಾಹನ ಸವಾರರು ಹೆಚ್.ಎಸ್.ಆರ್.ಪಿ. ಅಳವಡಿಸಿಕೊಂಡಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular