HomeLatest Newsಗಗನಕ್ಕೇರಿದ ಸೊಪ್ಪು-ತರಕಾರಿ ಬೆಲೆ: ಮಾರುಕಟ್ಟೆಗೆ ಬಂದ ಗ್ರಾಹಕರು ಕಂಗಾಲು: ಇತಿಹಾಸದಲ್ಲೇ ಮೊದಲ ಬಾರಿಗೆ 100ರ ಗಡಿ...

ಗಗನಕ್ಕೇರಿದ ಸೊಪ್ಪು-ತರಕಾರಿ ಬೆಲೆ: ಮಾರುಕಟ್ಟೆಗೆ ಬಂದ ಗ್ರಾಹಕರು ಕಂಗಾಲು: ಇತಿಹಾಸದಲ್ಲೇ ಮೊದಲ ಬಾರಿಗೆ 100ರ ಗಡಿ ದಾಟಿದ ಬದನೇಕಾಯಿ

ಬೆಂಗಳೂರು: ಹವಾಮಾನ ವೈಪರೀತ್ಯ ಹಾಗೂ ಮಳೆ ಕೊರತೆ, ಅನಾವೃಷ್ಟಿಯಿಂದಾಗಿ ತರಕಾರಿ, ಸೊಪ್ಪಿನ ಬೆಲೆಗಳು ದುಇನಂದ ದಿನಕ್ಕೆ ಗಗನಮುಖಿಯಾಗುತ್ತಿವೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತರಕಾರಿ ಬೆಲೆ ಜನಸಾಮಾಯರಲ್ಲಿ ಆಘಾತವುಂಟು ಮಾಡುತ್ತಿದೆ. ತರಕಾರಿ, ಹಣ್ಣು, ಸೊಪ್ಪು ಕೊಂಡುಕೊಳ್ಳಲು ಮಾರುಕಟ್ಟೆಗಳಿಗೆ ಆಗಮಿಸಿದ ಗ್ರಾಹಕರು ತರಕಾರಿ ಬೆಲೆ ಕೇಳಿ ದಂಗಾಗಿದ್ದಾರೆ.

ಬೀನ್ಸ್, ನುಗ್ಗೆಕಾಯಿ, ಬಿಳಿ ಬದನೆಕಾಯಿ ಸೇರಿದಂತೆ ಪ್ರಮುಖ ತರಕಾರಿಗಳ ಬೆಲೆ 100 ರೂ. ದಾಟಿದೆ. ಆದರೆ, ಟೊಮೆಟೊ ಮತ್ತು ಈರುಳ್ಳಿ ದರ ಇಳಿಕೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದಲ್ಲಿ ಎದುರಾಗಿರುವ ಅನಾವೃಷ್ಟಿ ಮತ್ತು ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಕೇರಳದಲ್ಲಿನ ಹವಾಮಾನ ಏರಿಳಿತದ ನೇರ ಪರಿಣಾಮ ತರಕಾರಿ ಮಾರುಕಟ್ಟೆಯ ಮೇಲೆ ಬೀರಿದೆ. ಕೆಆರ್ ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ಹೋಲ್‌ಸೇಲ್ ಬಜಾರ್‌ಗಳಲ್ಲೇ ತರಕಾರಿ ಮತ್ತು ಸೊಪ್ಪುಗಳ ದರ ಸೆಂಚುರಿ ಬಾರಿಸಿದ್ದು, ನಿತ್ಯದ ಅಡುಗೆಗೆ ತರಕಾರಿ ಕೊಳ್ಳಲು ಜನಸಾಮಾನ್ಯರು ಹಿಂದೇಟು ಹಾಕುವಂತಾಗಿದೆ.

ತರಕಾರಿ ದರಗಳ ಪಟ್ಟಿ (ಪ್ರತಿ ಕೆಜಿಗೆ)

ನುಗ್ಗೆಕಾಯಿ: 200 ರಿಂದ 220 ರೂ.
ಬೀನ್ಸ್: 115 ರಿಂದ 140 ರೂ.
ಮೆಂತ್ಯ ಸೊಪ್ಪು: 120 ರಿಂದ 130 ರೂ.
ಬಿಳಿ ಬದನೆಕಾಯಿ: 110 ರಿಂದ 120 ರೂ.
ಬಟಾಣಿ ಹಾಗೂ ಹಸಿಮೆಣಸಿನಕಾಯಿ: 100 ರಿಂದ 120 ರೂ.
ದಪ್ಪ ಮೆಣಸಿನಕಾಯಿ (ಕ್ಯಾಪ್ಸಿಕಂ) ಹಾಗೂ ಕ್ಯಾರೆಟ್: 80 ರಿಂದ 100 ರೂ.
ಬೆಳ್ಳುಳ್ಳಿ: 200 ರಿಂದ 220 ರೂ. ಆಗಿದೆ.

ಟೊಮೆಟೊ-ಈರುಳ್ಳಿ ಬೆಲೆ ಇಳಿಕೆಯಾಗಿದ್ದು, ಮೊಟ್ಟೆ ದುಬಾರಿಯಾಗಿದೆ. ತರಕಾರಿಗಳ ಬೆಲೆ ಏರಿಕೆಯ ನಡುವೆ ಸಮಾಧಾನಕರ ಸಂಗತಿಯೆಂದರೆ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಟೊಮೆಟೊ ದರ 10 ರಿಂದ 15 ರೂಪಾಯಿ ಇದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ 15-20 ರೂಪಾಯಿಗೆ ಸಿಗುತ್ತಿದೆ. ಈರುಳ್ಳಿ ಕೂಡ ಕೆಜಿಗೆ 20 ರಿಂದ 25 ರೂಪಾಯಿಗೆ ಲಭ್ಯವಿದೆ. ತರಕಾರಿ ಬೆಲೆ ಏರಿಕೆಯ ಬೆನ್ನಲ್ಲೇ ಈ ಹಿಂದೆ 6.50 ರೂಪಾಯಿ ಇದ್ದ ಒಂದು ಮೊಟ್ಟೆಯ ಬೆಲೆ ಈಗ ದಿಢೀರನೆ 8 ರೂಪಾಯಿಗೆ ಏರಿಕೆಯಾಗಿದೆ.

ಕಳೆದ ಕೆಲವು ವಾರಗಳಿಂದ ದೇಶದ ವಿವಿಧೆಡೆ ಕೆಲವೆಡೆ ಅತಿವೃಷ್ಟಿಯಾಗಿ ಬೆಳೆ ಕೊಳೆತಿದ್ದರೆ, ಇನ್ನು ಕೆಲವು ಭಾಗಗಳಲ್ಲಿ ಸಕಾಲಕ್ಕೆ ಮಳೆಯಾಗದೆ ಬೆಳೆಗಳು ಒಣಗಿ ನಿಂತಿವೆ. ಬಿಳಿ ಬದನೆಕಾಯಿ ಇತಿಹಾಸದಲ್ಲೇ ಮೊದಲ ಬಾರಿಗೆ 100ರ ಗಡಿ ದಾಟಿದ್ದು, ವಾಂಗಿಬಾತ್ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ತರಕಾರಿ ದರ ಏರಿಕೆಯಿಂದಾಗಿ ಗ್ರಾಹಕರು ಈಗ ಕಾಲು ಕೆಜಿ, ಅರ್ಧ ಕೆಜಿ ಮಾತ್ರ ತರಕಾರಿ ಕೊಳ್ಳುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಸರಿಯಾಗಿ ವ್ಯಾಪಾರವಾಗುತ್ತಿಲ್ಲ ಎಂದು ತರಕಾರಿ ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular