HomeLatest NewsBIG NEWS : ವೆನೆಜುವೆಲಾದಲ್ಲಿ ಪ್ರಬಲ ಭೂಕಂಪಕ್ಕೆ ಧರೆಗುರುಳಿದ ಕಟ್ಟಡಗಳು ; ಭಯಾನಕ ವೀಡಿಯೋ ವೈರಲ್...

BIG NEWS : ವೆನೆಜುವೆಲಾದಲ್ಲಿ ಪ್ರಬಲ ಭೂಕಂಪಕ್ಕೆ ಧರೆಗುರುಳಿದ ಕಟ್ಟಡಗಳು ; ಭಯಾನಕ ವೀಡಿಯೋ ವೈರಲ್ |WATCH VIDEOS

ವೆನೆಜುವೆಲಾದಲ್ಲಿ ಬುಧವಾರ ಸಂಭವಿಸಿದ ಎರಡು ಪ್ರಬಲ ಭೂಕಂಪಗಳು ಭಾರೀ ಆತಂಕ ಸೃಷ್ಟಿಸಿವೆ. ಕೇವಲ 39 ಸೆಕೆಂಡ್‌ಗಳ ಅಂತರದಲ್ಲಿ 7.2 ಮತ್ತು 7.5 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿದ್ದು, ರಾಜಧಾನಿ ಕಾರಕಾಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆಗಳಲ್ಲಿ ದೊಡ್ಡ ಬಿರುಕುಗಳು ಮೂಡಿವೆ ಹಾಗೂ ಅನೇಕ ಕಟ್ಟಡಗಳು ಹಾನಿಗೊಳಗಾಗಿವೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ರಸ್ತೆಗಳು ಮಧ್ಯೆ ಚೀರಿಕೊಂಡಿರುವುದು, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಆತಂಕದಿಂದ ಹೊರಗೆ ಓಡುತ್ತಿರುವುದು ಹಾಗೂ ಕಾರಕಾಸ್‌ನ ಎತ್ತರದ ಕಟ್ಟಡದ ಮೇಲ್ಭಾಗದ ಈಜುಕೊಳದಿಂದ ನೀರು ಧುಮ್ಮಿಕ್ಕಿ ಹರಿಯುತ್ತಿರುವ ದೃಶ್ಯಗಳು ಕಂಡುಬಂದಿವೆ. ಅಮೆರಿಕದ ಭೂಗರ್ಭ ಸಮೀಕ್ಷಾ ಸಂಸ್ಥೆ (USGS) ಪ್ರಕಾರ, ಮೊದಲ ಭೂಕಂಪವು ಸ್ಯಾನ್ ಫೆಲಿಪೆ ಸಮೀಪ 7.2 ತೀವ್ರತೆಯಲ್ಲಿ ಸಂಭವಿಸಿದ್ದು, ಅದರ 39 ಸೆಕೆಂಡ್‌ಗಳ ಬಳಿಕ ಯುಮಾರೆ ಪ್ರದೇಶದ ಬಳಿ 7.5 ತೀವ್ರತೆಯ ಮತ್ತೊಂದು ಭೂಕಂಪ ದಾಖಲಾಗಿದೆ. ಎರಡೂ ಕೇಂದ್ರಬಿಂದುಗಳು ಕಾರಕಾಸ್‌ನಿಂದ ಸುಮಾರು 280–290 ಕಿ.ಮೀ ದೂರದಲ್ಲಿದ್ದವು.

ಭೂಕಂಪದ ಪರಿಣಾಮ ಕಾರಕಾಸ್‌ನಲ್ಲಿ ಕೆಲವು ಕಟ್ಟಡಗಳು ಕುಸಿದಿದ್ದು, ಹಲವಾರು ಮನೆಗಳಿಗೆ ಹಾನಿಯಾಗಿದೆ ಎಂದು ವೆನೆಜುವೆಲಾದ ಆಂತರಿಕ ಸಚಿವ ಡಿಯೊಸ್ಡಾಡೊ ಕಬೆಲ್ಲೊ ತಿಳಿಸಿದ್ದಾರೆ. ಸಾವುನೋವುಗಳ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ USGS ಪ್ರಾಥಮಿಕ ಅಂದಾಜಿನ ಪ್ರಕಾರ, ಭಾರೀ ಜೀವಹಾನಿ ಮತ್ತು ವ್ಯಾಪಕ ಹಾನಿಯ ಸಾಧ್ಯತೆ ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭೂಕಂಪದ ಸಮಯದಲ್ಲಿ ಮನೆಗಳಲ್ಲಿದ್ದ ವಸ್ತುಗಳು ಕೆಳಗೆ ಬಿದ್ದಿದ್ದು, ಗೋಡೆಗಳಲ್ಲಿ ಬಿರುಕುಗಳು ಮೂಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಕ್ಷಣಾ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳಗಳು ತುರ್ತು ಕಾರ್ಯಾಚರಣೆಯಲ್ಲಿ ತೊಡಗಿದ್ದು, ಹಾನಿಯ ಮೌಲ್ಯಮಾಪನ ಮುಂದುವರಿದಿದೆ. ಅಧಿಕಾರಿಗಳು ಇನ್ನಷ್ಟು ನಂತರದ ಕಂಪನಗಳ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular