HomeEntertainmentವಸುದೇವ ಕುಟುಂಬ ಧಾರಾವಾಹಿ ನಟಿಯರಿಗೆ ಸಂಬಳ ನೀಡದೇ ನಿರ್ಮಾಪಕರಿಂದ ವಂಚನೆ: ದೂರು ದಾಖಲಿಸಿದ ಸೀರಿಯಲ್ ಟೀಮ್

ವಸುದೇವ ಕುಟುಂಬ ಧಾರಾವಾಹಿ ನಟಿಯರಿಗೆ ಸಂಬಳ ನೀಡದೇ ನಿರ್ಮಾಪಕರಿಂದ ವಂಚನೆ: ದೂರು ದಾಖಲಿಸಿದ ಸೀರಿಯಲ್ ಟೀಮ್

ಬೆಂಗಳೂರು: ಕನ್ನಡದ ಖ್ಯಾತ ಧಾರಾವಾಹಿ ನಟಿಯರಿಗೆ ನಿರ್ಮಾಪಕರು ಸಂಬಳ ನೀಡದೇ ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಇದರಿಂದ ನೊಂದ ನಟಿಯರು ಹಾಗೂ ತಂತ್ರಜ್ಞರ ತಂಡ ನಿರ್ಮಾಪಕರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಂಗಳೂರಿನ ನಾಗರಬಾವಿಯಲ್ಲಿ ನಡೆದಿದೆ.

‘ವಸುದೇವ ಕುಟುಂಬ’ ಧಾರಾವಾಹಿಯ ನಟ, ನಟಿಯರು ಮತ್ತು ತಂತ್ರಜ್ಞರು ಧಾರಾವಾಹಿಯ ನಿರ್ಮಾಪಕ ಅನಿಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕರು ಕಳೆದ ಮೂರು ತಿಂಗಳಿಂದ ಪೇಮೆಂಟ್ ಮಾಡಿಲ್ಲ. ಒಬ್ಬೊಬ್ಬರಿಗೆ 3 ಲಕ್ಷ ರೂಪಾಯಿನಷ್ಟು ಸಂಬಳ ನೀಡಬೇಕು. ಸಂಬಳವನ್ನೇ ನೀಡದೇ ಓಡಾಡುತ್ತಿದ್ದಾರೆ. ಅಲ್ಲದೇ ನಾವು ಫೇಮೆಂಟ್ ಕೇಳಿದ್ದಕ್ಕೆ ನಮ್ಮನ್ನು ಸಿರಿಯಲ್ ಟೀಂ ನಿಂದ ತೆಗೆದು ಬೇರೆ ಕಲಾವಿದರನ್ನು ಕರೆಸಿಕೊಳ್ಳುತ್ತಿದಾರೆ ಎಂದು ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಸುದೇವ ಕುಟುಂಬ ಧಾರಾವಾಹಿಯಲ್ಲಿ ಹಿರಿಯ ನಟ ಅವಿನಾಶ್, ಅಂಜಲಿ, ಬಿಗ್​​ಬಾಸ್ ಮಾಜಿ ಸ್ಪರ್ಧಿ ಹಂಸ, ನಟಿ ಚೈತ್ರಾ ಸೇರಿದಂತೆ ಹಲವು ಕಲಾವಿದರಿದ್ದಾರೆ. ಈ ಧಾರಾವಾಹಿ ಸ್ಟಾರ್ ಸುವರ್ಣ ಚಾನೆಲ್​​ನಲ್ಲಿ ಪ್ರಸಾರವಾಗುತ್ತಿದೆ. ಕಳೆದ ಮುರ್ನಾಲ್ಕು ತಿಂಗಳಿಂದ ಧಾರಾವಾಹಿಯ ನಿರ್ಮಾಪಕರು ಕಲಾವಿದರಿಗೆ ಸಂಭಾವನೆಯನ್ನೇ ನೀಡಿಲ್ಲ ಮಾತ್ರವಲ್ಲದೆ, ಆಹಾರ, ಇನ್ನಿತರೆ ವ್ಯವಸ್ಥೆಯನ್ನೂ ಸರಿಯಾಗಿ ಮಾಡಿಲ್ಲ ಎಂದು ಕಲಾವಿದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಿಂದ ರೊಚ್ಚಿಗೆದ್ದ ನಟಿ ಹಂಸಾ, ಚೈತ್ರಾ ಹಾಗೂ ಯೂನಿಟ್ ಸದಸ್ಯರು ಇಂದು ನಿರ್ಮಾಪಕರನ್ನು ಹೋಟೆಲ್ ವೊಂದರಲ್ಲಿ ಅಡ್ಡಗಟ್ಟಿ ಪೇಮೆಂಟ್ ಕೊಡುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ನಿರ್ಮಾಪಕರು ಹಾಗೂ ನಟಿಯರ ನಡುವೆ ವಾಗ್ವಾದ ನಡೆದಿದೆ.

ಕೋರಮಂಗಲ ಅನಿಲ್ ಎಂಬುವರು, ಕೋರಮಂಗಲ ಟಾಕೀಸ್ ಹೆಸರಲ್ಲಿ ‘ವಸುದೇವ ಕುಟುಂಬ’ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದು, ನಾಗರಬಾವಿಯಲ್ಲಿ ಅವರು ನಡೆಸುತ್ತಿರುವ ‘ತತ್ಸವಿ ಹೋಟೆಲ್’ ಬಳಿ ಇಂದು ಮಧ್ಯಾಹ್ನ ಆಗಮಿಸಿದ ಹಂಸ, ಚೈತ್ರಾ ಹಾಗೂ ಯೂನಿಟ್​​ನ ಇತರೆ ಕೆಲವು ಮಂದಿ ನಿರ್ಮಾಪಕರನ್ನು ಸಂಭಾವನೆಗಾಗಿ ಒತ್ತಾಯಿಸಿದ್ದಾರೆ. ಆದರೆ ನಿರ್ಮಾಪಕ ಅನಿಲ್ ಮತ್ತು ಅವರ ಪತ್ನಿ ಕೂಡಲೇ ಸ್ಥಳದಿಂದ ಪಲಾಯನ ಮಾಡಿದ್ದಾರೆ.

ನಟಿ ಹಂಸ ಅವರಿಗೆ 3 ಲಕ್ಷ ರೂಪಾಯಿ, ಚೈತ್ರಾ ಅವರಿಗೂ ಸಹ ದೊಡ್ಡ ಮೊತ್ತದ ಹಣವನ್ನು ನಿರ್ಮಾಪಕರು ಬಾಕಿ ಉಳಿಸಿಕೊಂಡಿದ್ದಾರಂತೆ. ಸಂಬಳ ಕೇಳಿದ್ದಕ್ಕೆ ಹಂಸಾ ಅವರಿಗೆ ರೌಡಿಸಂ ಮಾಡುತ್ತೀರಾ ಎಂದು ನಿರ್ಮಾಪಕರ ಪತ್ನಿ ಗದರಿ ಜಗಳಕ್ಕೆ ನಿಂತಿದ್ದು, ಕೆಲ ಕಾಲ ವಾಗ್ವಾದ ನಡೆದಿದೆ. ಮಾಧ್ಯಮದವರು ಬರುತ್ತಿದ್ದಂತೆ ನಿರ್ಮಾಪಕ ಅನಿಲ್ ಹಾಗೂ ಅವರ ಪತ್ನಿ ಎಸ್ಕೇಪ್ ಆಗಿದ್ದಾರೆ.

ಧಾರಾವಾಹಿ ನಟ-ನಟಿಯರು ನಿರ್ಮಾಪಕ ಕೋರಮಂಗಲ ಅನಿಲ್ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular