HomeAstroಹಳೆ ರೊಟ್ಟಿನಾ ಕಸಕ್ಕೆ ಹಾಕ್ದೆ ಹೀಗೆ ಮಾಡಿದ್ರೆ ಶನಿ ಕೃಪೆ – ಲಕ್ಷ್ಮಿ ವಾಸ ನಿಶ್ಚಿತ

ಹಳೆ ರೊಟ್ಟಿನಾ ಕಸಕ್ಕೆ ಹಾಕ್ದೆ ಹೀಗೆ ಮಾಡಿದ್ರೆ ಶನಿ ಕೃಪೆ – ಲಕ್ಷ್ಮಿ ವಾಸ ನಿಶ್ಚಿತ

ಮನೆಯಲ್ಲಿ ಚಪಾತಿ, ರೊಟ್ಟಿ ತಯಾರಿಸಿದಾಗ ಒಂದೋ ಎರಡೋ ಹೆಚ್ಚಾಗೇ ಹೆಚ್ಚಾಗುತ್ತೆ. ಅದನ್ನು ಏನು ಮಾಡ್ಬೇಕು ಅನ್ನೋದು ತಿಳಿಯೋದಿಲ್ಲ. ಅದನ್ನು ಮತ್ತೆ ಬಿಸಿ ಮಾಡಿ ತಿನ್ನೋದು ಅನೇಕರಿಗೆ ಇಷ್ಟವಾಗೋದಿಲ್ಲ. ಹಾಗಾಗಿ ಇಂಥ ರೊಟ್ಟಿಯನ್ನು ಕಸಕ್ಕೆ ಹಾಕ್ತಾರೆ. ನೀವೂ ಇವರಲ್ಲಿ ಒಬ್ಬರಾಗಿದ್ದರೆ ಇನ್ಮುಂದೆ ಈ ಅಭ್ಯಾಸ ಬಿಡಿ. ಮನೆಯಲ್ಲಿ ರೊಟ್ಟಿ ಹೆಚ್ಚಿದ್ರೆ, ಒಂದು ದಿನದ ಹಿಂದಿನ ಹಳೆ ರೊಟ್ಟಿ ಮನೆಯಲ್ಲಿದ್ದರೆ ಕೆಲ ಜ್ಯೋತಿಷ್ಯ ಉಪಾಯವನ್ನು ಪಾಲನೆ ಮಾಡಿ. ಇದ್ರಿಂದ ನಿಮ್ಮ ಸುಖ, ಸಂತೋಷ ಹೆಚ್ಚಾಗುವುದಲ್ಲದೆ ರಾಹು, ಕೇತುವಿನ ಕಾಟ ದೂರವಾಗುತ್ತದೆ. ಶನಿಯ ಕೃಪೆಗೂ ನೀವು ಪಾತ್ರರಾಗಬಹುದು.

ಧನ ಪ್ರಾಪ್ತಿ ಹಾಗೂ ಸುಖಕ್ಕಾಗಿ ಶನಿವಾರ ಹಳೆಯ ರೊಟ್ಟಿ ಹಾಗೂ ಖೀರನ್ನು ಆಕಳಿಗೆ ನೀಡಿ. ಇದು ಸಾಡೇ ಸಾಥ್‌ ಶನಿಯ ಪ್ರಭಾವವನ್ನು ಕಡಿಮೆ ಮಾಡುತ್ತದೆ.

ಹಳೆ ರೊಟ್ಟಿಗೆ ಸಾಸಿವೆ ಎಣ್ಣೆಯನ್ನು ಹಚ್ಚಿ, ಕಪ್ಪು ಕಾಗೆಗೆ ನೀಡಿ. ಹೀಗೆ ಮಾಡೋದ್ರಿಂದ ರಾಹುವಿಗೆ ಸಂಬಂಧಿಸಿದ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೊಟ್ಟಿಗೆ ಹಾಲನ್ನು ಸೇರಿಸಿ ಅದನ್ನು ನಾಯಿಗೆ ನೀಡಿದ್ರೆ ನೀವು ಕೇತು ದೋಷದಿಂದ ಹೊರಬರಬಹುದು.

ಸಾಲ, ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವವರು ರೊಟ್ಟಿಗೆ ಸಕ್ಕರೆ ಬೆರೆಸಿ ಅದನ್ನು ಇರುವೆಗಳಿಗೆ ನೀಡಬೇಕು. ಇದ್ರಿಂದ ಈಶ್ವರ ಸಂತೋಷಗೊಂಡು ನಿಮ್ಮ ಕಷ್ಟ ಬಗೆಹರಿಸುತ್ತಾನೆ.

ಮನೆಯಲ್ಲಿ ಆನಂದ ಸದಾ ನೆಲೆಸಿರಬೇಕು ಎನ್ನುವವರು ಮನೆಯಲ್ಲಿ ತಯಾರಿಸಿದ ಮೊದಲ ರೊಟ್ಟಿಯನ್ನು ಬೆಲ್ಲದ ಜೊತೆ ಬೆರೆಸಿ ಆಕಳಿಗೆ ನೀಡಿ.

For Latest News Updates, Join Our Whatsapp Community🚩
RELATED ARTICLES

Most Popular