HomeLatest NewsIPL 2026: ವೈಭವ್ ಸೂರ್ಯವಂಶಿ ಇನ್ನೂ ಮಗು, ಪ್ರೊಫೆಷನಲ್ ಕ್ರಿಕೆಟರ್ ಅಲ್ಲ ಎಂದ ಆರ್‌ಸಿಬಿ ಆಟಗಾರ!

IPL 2026: ವೈಭವ್ ಸೂರ್ಯವಂಶಿ ಇನ್ನೂ ಮಗು, ಪ್ರೊಫೆಷನಲ್ ಕ್ರಿಕೆಟರ್ ಅಲ್ಲ ಎಂದ ಆರ್‌ಸಿಬಿ ಆಟಗಾರ!

ಇದೇ ಶನಿವಾರ ( ಮಾರ್ಚ್ 28 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದ ಮೂಲಕ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಲಿದೆ.

ಇನ್ನು ಕಳೆದ ಬಾರಿಯ ಟೂರ್ನಿಯಲ್ಲಿ ಟ್ರೋಫಿ ಎತ್ತಿಹಿಡಿಯುವ ಮೂಲಕ 18 ಆವೃತ್ತಿಗಳ ಬಳಿಕ ಚಾಂಪಿಯನ್ ಆಗಿ ಹೊರಹೊಮ್ಮಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯೂ ಸಹ ಉತ್ತಮ ಪ್ರದರ್ಶನ ನೀಡುವತ್ತ ಚಿತ್ತ ನೆಟ್ಟಿದ್ದು, ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ.

ಕಳೆದ ಬಾರಿ ತನ್ನ ಚಾಣಾಕ್ಷತೆಯ ವಿಕೆಟ್ ಕೀಪಿಂಗ್ ಹಾಗೂ ಅಬ್ಬರದ ಬ್ಯಾಟಿಂಗ್ ಮೂಲಕ ತಂಡಕ್ಕೆ ಹಲವು ಕಠಿಣ ಸಂದರ್ಭಗಳಲ್ಲಿ ಆಸರೆಯಾಗಿದ್ದ ಜಿತೇಶ್ ಶರ್ಮಾ ಕೂಡ ಅಭ್ಯಾಸ ಆರಂಭಿಸಿದ್ದು, ಈ ನಡುವೆಯೇ ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೇಳೆ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ ಬಗ್ಗೆ ಸಹ ಜಿತೇಶ್ ಶರ್ಮಾ ಮಾತನಾಡಿದ್ದು, ಆತನೊಬ್ಬ ಪ್ರೊಫೆಷನಲ್ ಕ್ರಿಕೆಟರ್ ಅಲ್ಲ ಎಂದಿದ್ದಾರೆ. ‘ವೈಭವ್ ಸೂರ್ಯವಂಶಿ ಪ್ರೊಫೆಷನಲ್ ಕ್ರಿಕೆಟರ್ ಅಲ್ಲ. ಎಲ್ಲರೂ ಸಹ ಆತನನ್ನು ಪ್ರೊಫೆಷನಲ್ ಕ್ರಿಕೆಟರ್ ಮಾಡಲು ಯತ್ನಿಸುತ್ತಿದ್ದಾರೆ, ಆದರೆ ಆತ ಪ್ರೊಫೆಷನಲ್ ಕ್ರಿಕೆಟರ್ ಎಂದಿಗೂ ಆಗಲಾರ. ಮೈದಾನದಲ್ಲಿ ಆತ ಪ್ರೊಫೆಷನಲ್ ಕ್ರಿಕೆಟರ್ ಆಗಬಹುದು, ಆದರೆ ಮೈದಾನದಿಂದಾಚೆ ಆತ ಪ್ರೊಫೆಷನಲ್ ಕ್ರಿಕೆಟರ್ ಆಗಲಾರ. ರಾತ್ರಿ ಸಮಯದಲ್ಲಿ ಐಸ್‌ಕ್ರೀಂ ತಿನ್ನಬೇಡ ಎಂದು ಹಲವು ಬಾರಿ ಹೇಳಿದ್ದೇನೆ. ಆದರೆ ಆತ ನನ್ನ ಮಾತನ್ನು ಕೇಳುವುದೇ ಇಲ್ಲ’ ಎಂದು ತಮಾಷೆ ಮಾಡಿ ಫಿಟ್‌ನೆಸ್ ಕಡೆ ಹೆಚ್ಚು ತಲೆ ಕೆಡಿಸಿಕೊಳ್ಳದ ವೈಭವ್ ಸೂರ್ಯವಂಶಿ ಕಾಲೆಳೆದಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular