HomeKarnatakaಪದವಿ ಕೋರ್ಸ್ ಎರಡು ವಿಷಯಗಳಲ್ಲಿ ಫೇಲಾಗಿದ್ದರೂ ಪಾಸಾದ ವಿದ್ಯಾರ್ಥಿ: ಎಫ್ಐಆರ್ ದಾಖಲು

ಪದವಿ ಕೋರ್ಸ್ ಎರಡು ವಿಷಯಗಳಲ್ಲಿ ಫೇಲಾಗಿದ್ದರೂ ಪಾಸಾದ ವಿದ್ಯಾರ್ಥಿ: ಎಫ್ಐಆರ್ ದಾಖಲು

ಶಿವಮೊಗ್ಗ: ಪದವಿ ಕೋರ್ಸ್ ಎರಡು ವಿಷಯಗಳಲ್ಲಿ ವಿದ್ಯಾರ್ಥಿಯೊಬ್ಬ ಅನುತ್ತೀರ್ಣನಾಗಿದ್ದರೂ ಪಾಸ್ ಆಗಿರುವುದಾಗಿ ಫಲಿತಾಂಶ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುವೆಂಪು ವಿಶ್ವವಿದ್ಯಾಲಯದ ಯೂನಿಫೈಡ್ ಯೂನಿವರ್ಸಿಟಿ ಅಂಡ್ ಕಾಲೇಜ್ ಮ್ಯಾನೇಜ್ಮೆಂಟ್ ಸಿಸ್ಟಮ್(UUCMS) ಸಾಫ್ಟ್ವೇರ್ ವಿಭಾಗದ ನಿರ್ವಹಣಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಯ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಯುಯುಸಿಎಂಎಸ್ ನಿರ್ವಹಣಾ ಸಿಬ್ಬಂದಿ ಅನುಷಾ ಮತ್ತು ಶಿವಮೊಗ್ಗದ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಐದನೇ ಸೆಮಿಸ್ಟರ್ ಓದುತ್ತಿರುವ ವಿದ್ಯಾರ್ಥಿ ವರ್ಷಿತ್ ಎನ್. ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡು ವಿಷಯಗಳಲ್ಲಿ ಅನುತ್ತೀರ್ಣನಾಗಿರುವ ಬಿಎಸ್ಸಿ ಐದನೇ ಸೆಮಿಸ್ಟರ್ ನಲ್ಲಿ ಓದುತ್ತಿರುವ ವಿದ್ಯಾರ್ಥಿ ವರ್ಷಿತ್ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸದಿದ್ದರೂ ಯುಯುಸಿಎಂಎಸ್ ನಲ್ಲಿ ಆತ ಉತ್ತೀರ್ಣನಾಗಿರುವುದಾಗಿ ಫಲಿತಾಂಶ ಪ್ರಕಟಿಸಲಾಗಿದೆ.

ಈ ಕುರಿತಾಗಿ ಎಂಬಿಎ ವಿಭಾಗದ ಅತಿಥಿ ಉಪನ್ಯಾಸಕಿ ಟೀನಾಕುಮಾರಿ ಅವರು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗಕ್ಕೆ ದೂರು ನೀಡಿದ್ದರು. ದೂರಿನಲ್ಲಿ ಕುವೆಂಪು ವಿವಿ ಯುಯುಸಿಎಂಎಸ್ ಅಡ್ಮಿನ್ ಆಗಿ ಕಾರ್ಯನಿರ್ವಹಿಸುತ್ತಿರುವ ಅನುಷಾ ಕೆಲವು ಫೇಲಾದ ವಿದ್ಯಾರ್ಥಿಗಳಿಗೆ ಪ್ರತಿ ವಿಷಯಕ್ಕೆ ಹತ್ತು ಸಾವಿರ ರೂಪಾಯಿ ಪಡೆದು ಪಾಸ್ ಎಂದು ನಮೂದಿಸುತ್ತಿರುತ್ತಾರೆ ಎಂದು ದೂರು ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಮಾಹಿತಿ ಆಧರಿಸಿ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ. ಆರ್. ತಿಮ್ಮರಾಯಪ್ಪ ಭದ್ರಾವತಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. 2026ರ ಏಪ್ರಿಲ್ 20ರಂದು ಯುಯುಸಿಎಂಎಸ್ ನಲ್ಲಿ ಫಲಿತಾಂಶ ಪ್ರಕಟಿಸಲಾಗಿತ್ತು. ಖಾಸಗಿ ಕಾಲೇಜಿನ ವಿದ್ಯಾರ್ಥಿ ವರ್ಷಿತ್ ಅನುತ್ತೀರ್ಣರಾಗಿದ್ದರು. ಮರು ಮೌಲ್ಯಮಾಪನಕ್ಕೆ ಅವರು ಅರ್ಜಿ ಸಲ್ಲಿಸದಿದ್ದರೂ ಜೂನ್ 22ರಂದು ಪೋರ್ಟಲ್ ನಲ್ಲಿ ಪ್ರಕಟವಾದ ಫಲಿತಾಂಶದಲ್ಲಿ ಅವರು ಅನುತ್ತೀರ್ಣರಾಗಿದ್ದ ಎರಡು ವಿಷಯಗಳಲ್ಲೂ ಉತ್ತೀರ್ಣ ಎಂದು ಪ್ರಕಟಿಸಲಾಗಿತ್ತು. ಈ ವಿಷಯಗಳ ಫಲಿತಾಂಶದ ಅಂಕಗಳನ್ನು ಅನುಷಾ ಅವರು ಹಿರಿಯ ಸಿಬ್ಬಂದಿಯ ಪೂರ್ವಾನುಮತಿ ಪಡೆಯದೆ ಮತ್ತು ಅವರ ಗಮನಕ್ಕೆ ತರದೆ ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ ಪಾಸ್ವರ್ಡ್ ಬಳಸಿ ಬದಲಾವಣೆ ಮಾಡಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇಬ್ಬರು ಆರೋಪಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.

ಚಂದನ ಪಾರ್ಕ್ ನಲ್ಲಿ ಅದ್ದೂರಿ ಗಣೇಶೋತ್ಸವ

ಶಿವಮೊಗ್ಗ: ನಗರದ ಗೋಪಾಲಗೌಡ ಬಡಾವಣೆಯ ಚಂದನ ಆರೋಗ್ಯ ಪಾರ್ಕ್ ಗೆಳೆಯರ ಬಳಗದ ವತಿಯಿಂದ 9ನೇ ವರ್ಷದ ಭವ್ಯ ಗಣೇಶೋತ್ಸವವನ್ನು ಸೆ.14 ಸೋಮವಾರ ಹಮ್ಮಿಕೊಳ್ಳಲಾಗಿದೆ ಎಂದು ಪಾರ್ಕಿನ ಆಡಳಿತ ಮಂಡಳಿ ತಿಳಿಸಿದೆ

 ಈ ಬಾರಿಯ ವಿಶೇಷ ಆಕರ್ಷಣೆಯಾಗಿ “ಪರಿಸರ ಸ್ನೇಹಿ ಗಣಪತಿ” ಅಲಂಕಾರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಕಾರ್ಯಕ್ರಮದ ವಿವರ: ಬೆಳಿಗ್ಗೆ 9 ಗಂಟೆಗೆ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದ ನಂತರ ಪ್ರಸಾದ ವಿನಿಯೋಗ ನಡೆಯಲಿದೆ. ಅಂದೇ ಸಂಜೆ 5.30 ರಿಂದ ರಾಜಬೀದಿ ಉತ್ಸವ ಪ್ರಾರಂಭಗೊಳ್ಳಲಿದ್ದು, ಭವ್ಯ ಮಹಾ ಮೆರವಣಿಗೆಗೆ ವಿಶೇಷ ಆಕರ್ಷಣೆಯಾಗಿ ಎ.ಪಿ.ಎಂ.ಸಿ ಡೊಳ್ಳು ಕಲಾತಂಡ ಹಾಗೂ ಕುಂದಾಪುರದ ಚಂಡೆ ಇವರಿಂದ ಮಂಗಳವಾದ್ಯ ಕಲಾತಂಡಗಳು ಭಾಗವಹಿಸಿ ಮೆರವಣಿಗೆಗೆ ಕಳೆ ತುಂಬಲಿವೆ.

ಮೆರವಣಿಗೆಯ ಮಾರ್ಗ: ರಾಜಬೀದಿ ಉತ್ಸವವು ಚಂದನ ಆರೋಗ್ಯ ಪಾರ್ಕ್ ನಿಂದ ಹೊರಟು ವೃದ್ದಾಶ್ರಮದ ಹತ್ತಿರ ಇರುವ ಗಣಪತಿ ದೇವಸ್ಥಾನದಿಂದ ಎಸ್. ಬಂಗಾರಪ್ಪ ರಸ್ತೆಯ ಮೂಲಕ ಡಿ.ವಿ.ಜಿ. ಪಾರ್ಕ್ ನಲ್ಲಿ ವಿಸರ್ಜನೆ ಮಾಡಲಾಗುವುದು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular