HomeLatest NewsBIG NEWS: ಬಾಲಕನನ್ನು ಹತ್ಯೆಗೈದು, ಮೃತದೇಹನ್ನು ಸುಟ್ಟು ಹಾಕಿ, ಹೊಲದಲ್ಲಿ ಹೂತು ಹಾಕಿದ್ದ ಸಲಿಂಗಕಾಮಿ ಅರೆಸ್ಟ್

BIG NEWS: ಬಾಲಕನನ್ನು ಹತ್ಯೆಗೈದು, ಮೃತದೇಹನ್ನು ಸುಟ್ಟು ಹಾಕಿ, ಹೊಲದಲ್ಲಿ ಹೂತು ಹಾಕಿದ್ದ ಸಲಿಂಗಕಾಮಿ ಅರೆಸ್ಟ್

ಅಲಿಗಢ: ಬಾಲಕನೊಬ್ಬನನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು ಪೆಟ್ರೋಲ್ ಸುರಿದು ಸುಟ್ಟುಹಾಕಿ, ಬಳಿಕ ಉಪ್ಪು ಸಿಂಪಡಿಸಿ ಹೊಲದಲ್ಲಿ ಹೂತು ಹಾಕಿದ್ದ ಸಲಿಂಗಕಾಮಿಯನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಇಗ್ಲಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. 11 ವರ್ಷದ ಬಾಲಕನೊಬ್ಬ ಜೂನ್ 17ರಂದು ನಾಪತ್ತೆಯಾಗಿದ್ದ. ಈ ಬಗ್ಗೆ ಕುಟುಂಬದವರು ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಯುವಕನೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ನೀಡಿದ ಮಾಹಿತಿ ಮೇರೆಗೆ ಬಾಲಕನ ಮೃತದೇಹವನ್ನು ಹೊಲದಿಂದ ಹೊರತೆಗೆಯಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಸಲಿಂಗಕಾಮಿಯಾಗಿದ್ದು, ಬಾಲಕನನ್ನು ಪುಸಲಾಯಿಸಿ ಹೊಲದ ಬಳಿ ಕರೆದೊಯ್ದಿದ್ದಾನೆ. ಬಳಿಕ ಬಾಲಕನಿಗೆ ಮಾದಕದ್ರವ್ಯ ನೀಡಿ ಪ್ರಜ್ಞಾಹೀನ ಸ್ಥಿತಿಗೆ ಬಾಲಕ ತಲುಪಿಪುವಂತೆ ಮಾಡಿದ್ದಾನೆ. ಬಳಿಕ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಬಳಿಕ ಕತ್ತು ಹಿಸುಕಿ ಕೊಂದು ಬಾಲಕನ ಗುರುತು ಸಿಗದಂತೆ ಪೆಟ್ರೋಲ್ ಸುರಿದು ಸುಟ್ಟುಹಾಕಿದ್ದಾನೆ. ಬಳಿಕ ಮೃತದೇಹದ ಮೇಲೆ ಉಪ್ಪು ಸಿಂಪಡಿಸಿ ಹೊಲದಲ್ಲಿ ಹೂತುಹಾಕಿದ್ದಾನೆ. ಇದರಿಂದ ಮೃತದೇಹ ಬೇಗನೇ ಕೊಳೆಯುತ್ತದೆ ಹಾಗೂ ವಾಸನೆ ಬರುವುದಿಲ್ಲ ಎಂದು ಹೀಗೆ ಮಾಡಿದ್ದಾನೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿ ಮೃತ ಬಾಲಕನ ಅಣ್ಣನ ಸ್ನೇಹಿತ. ಬಾಲಕನ ಕುಟುಂಬದವರಿಗೆ ಆತ ಸಲಿಂಗಕಾಮಿ ಎಂಬ ವಿಚಾರ ಗೊತ್ತಿತ್ತು. ಬಾಲಕ ಕೆಲ ದಿನಗಳ ಹಿಂದೆ ನೊಯ್ಡಾಗೆ ಹೋಗಿದ್ದ ಬಳಿಕ ಹಿಂತಿರುಗಿದ್ದ. ಬಾಲಕ ವಾಪಾಸ್ ಗ್ರಾಮಕ್ಕೆ ಬಂದಿದ್ದ ವೇಳೆ ಆತನನ್ನು ಪುಸಲಾಯಿಸಿ ಕರೆದೊಯ್ದು ಆರೋಪಿ ಈ ಕೃತ್ಯವೆಸಗಿದ್ದಾನ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular