ಪತಿ ಮಹಾಶಯ ಸಾಯಿ ಎಂದು ಹೇಳಿದ್ದಕ್ಕೆ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ನಡೆದಿದೆ.
ನಾಲ್ಕು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಅಮ್ರಿನ್ ಜಹಾನ್ ಆತ್ಮಹತ್ಯೆಗೆ ಶರಣಾದ ಮಹಿಳೆ. ಅಮ್ರಿನ್ ಪತಿ ಬೆಂಗಳೂರಿನಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ. ಆಕೆ ತನ್ನ ಕುಟುಂಬದ ಜೊತೆಗೆ ಮೊರಾದಾಬಾದ್ ನಲ್ಲಿ ವಾಸವಾಗಿದ್ದಳು. ಅತ್ತೆ-ಮಾವ ಹಾಗೂ ಅತ್ತಿಗೆ ಅಮ್ರಿನ್ ಜಹಾನ್ ಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರಂತೆ.
ಆತ್ಮಹತ್ಯೆಗೂ ಮುನ್ನ ಅಮ್ರಿನ್ ಜಹಾನ್ ವಿಡಿಯೋ ರೆಕಾರ್ಡ್ ಮಾಡಿಟ್ಟಿದ್ದು ಅತ್ತೆ-ಮಾವನ ಚಿತ್ರಹಿಂಸೆ, ಪತಿಯ ಕಿರುಕುಳದ ಬಗ್ಗೆ ವಿವರಿಸಿದ್ದಾರೆ. ಅತ್ತಿಗೆ ಖತೀಜಾ ನೀಡುವ ಹಿಂಸೆಯ ಬಗ್ಗೆಯೂ ತಿಳಿಸಿದ್ದಾರೆ. ಎಲ್ಲದಕ್ಕೂ ನನ್ನದೇ ತಪ್ಪು ಎಂದು ಆರೋಪಿಸುತ್ತಾರೆ. ನಾನು ಮಲಗುವ ಕೋಣೆಯ ವಿದ್ಯುತ್ ಸಂಪರ್ಕವನ್ನೂ ಅತ್ತಿಗೆ ಖತೀಜಾ ಕಡಿತಗೊಳೀಸಿದ್ದಾಳೆ. ನನ್ನ ಮಾವ ಶಾಹಿದ್ ಹಾಗೂ ಅತ್ತೆ ನನ್ನ ಸಾವಿಗೆ ಕಾರಣ. ಮಾತ್ರವಲ್ಲ ನನ್ನ ಪತಿ ಕೂಡ ಕಾರಣ. ಆತ ನನ್ನನ್ನು ಎಂದೂ ಅರ್ಥಮಡಿಕೊಳ್ಳುವುದಿಲ್ಲ. ಎಲ್ಲದಕ್ಕೂ ನನ್ನದೇ ತಪ್ಪು ಎಂದು ಹೇಳುತ್ತಾನೆ. ಆತನ ತಂದೆ- ಸಹೋದರಿ ಹೇಳುವ ಮಾತು ಮಾತ್ರ ಕೇಳುತ್ತಾನೆ. ಇದೆಲ್ಲವನ್ನೂ ಸಹಿಸಿಕೊಂಡು ಇರಲಾಗದು ಎಂದು ಕಣ್ಣೀರಿಟ್ಟಿದ್ದಾರೆ.
ಅತ್ತೆ-ಮಾವ ಎಲ್ಲರೂ ನನ್ನನ್ನು ಸಾಯಿ ಎನ್ನುತ್ತಿದಾರೆ. ಪತಿ ನನ್ನನ್ನು ನಿನ್ಯಾಕೆ ಸಾಯಬಾರದು? ಎಂದು ಕೇಳಿದ್ದಾನೆ. ನನಗೆ ಸಾಯುವಂತೆ ಒತ್ತಡ ಹೇರುತ್ತಿದ್ದಾರೆ. ಹುಷಾರಿಲ್ಲದಾಗ ಚಿಕಿತ್ಸೆಗೆ ಹಣಕೊಟ್ಟು ತಪ್ಪು ಮಾಡಿದ್ದೇವೆ. ಆ ಹಣವನ್ನು ವಾಪಾಸ್ ಕೊಡುವಂತೆ ಪೀಡಿಸುತ್ತಿದ್ದಾರೆ. ನನ್ನ ಬಳಿ ಹಣವಿಲ್ಲ, ಹಣ ಇದ್ದಿದ್ದರೆ ನಾನೇ ಚಿಕಿತ್ಸೆಗೆ ನೋಡಿಕೊಳ್ಳುತ್ತಿದ್ದೆ ಎಂದಿದ್ದಾರೆ. ವಿಡಿಯೋ ರೆಕಾರ್ಡ್ ಮಾಡಿಟ್ಟು ಅಮ್ರಿನ್ ಜಹಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಮ್ರೀನ್ ತಂದೆ ಸಲೀಂ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.