HomeKarnatakaಆಟೋ ಚಾಲಕನ ಮೇಲೆ ಲಾರಿ ಹರಿಸಿ ಬರ್ಬರ ಹತ್ಯೆ; ಆರೋಪಿ ಎಸ್ಕೇಪ್

ಆಟೋ ಚಾಲಕನ ಮೇಲೆ ಲಾರಿ ಹರಿಸಿ ಬರ್ಬರ ಹತ್ಯೆ; ಆರೋಪಿ ಎಸ್ಕೇಪ್

ಹೊನ್ನಾವರ: ಹಣಕಾಸಿನ ವಿಚಾರವಾಗಿ ಮೂವರ ನಡುವಿನ ಜಗಳ ಸಂಬಂಧವೇ ಇಲ್ಲದ ಮತ್ತೋರ್ವ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅರೇಅಂಗಡಿಯ ಜನತಾ ಕಾಲೋನಿಯಲ್ಲಿ ನಡೆದಿದೆ.

ಓಲ್ವಿನ್ ರವಿ ಲೋಬೋ (31) ಕೊಲೆಯಾದ ಆಟೋ ಚಾಲಕ. ವಿನಾಯಕ ನಾರಾಯಣ ಭಟ್ಟ (40) ಕೊಲೆ ಮಾಡಿರುವ ಆರೋಪಿ. ಕೊಲೆ ಬಳಿಕ ಆರೋಪಿ ಪರಾರಿಯಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೊಸಾಕುಳಿಯ ವಸಂತ ಈಶ್ವರ್ ನಾಯ್ಕ್ ಹಾಗೂ ಸಾಲ್ಕೊಡದ ಜನಾರ್ಧನ ಕೇಶವ ನಾಯ್ಕ್ ಜೊತೆ ವಿನಾಯಕ ನಾರಾಯಣ ಭಟ್ಟ ಹಣಕಾಸಿನ ವಿಚಾರವಾಗಿ ಜಗಳ ಮಾಡಿಕೊಂಡಿದ್ದ. ಜಗಳ ವಿಕೋಪಕ್ಕೆ ತಿರುಗಿದ್ದು, ಇಬ್ಬರನ್ನು ಹತ್ಯೆ ಮಾಡುವ ನಿರ್ಧಾರಕ್ಕೆ ಬಂದಿದ್ದ.

ಇದೇ ವೇಳೆ ಜನತಾ ಕಾಲೋನಿ ಬಳಿ ವಸಂತ ನಾಯ್ಕ್, ಜನಾರ್ಧನ ನಾಯ್ಕ್ ಹಾಗೂ ಆಟೋ ಚಾಲಕ ಓಲ್ವಿನ್ ರವಿ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಟಿಪ್ಪರ್ ಲಾರಿಯನ್ನು ವೇಗವಾಗಿ ಚಲಾಯಿಸಿಕೊಂಡು ಬಂದ ಆರೋಪಿ, ಮೂವರ ಮೇಲೆ ಲಾರಿ ಹರಿಸಿದ್ದಾನೆ. ತಲೆಯ ಭಾಗದಲ್ಲಿ ಗಂಭೀರವಾಗಿ ಗಾಯಗೊಂಡ ಓಲ್ವಿನ್ ರವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಸಂತ್ ನಾಯ್ಕ್, ಜನಾರ್ಧನ ನಾಯ್ಕ್ ನನ್ನು ಕೊಲೆ ಮಾಡಲು ಬಂದ ಆರೋಪಿ ವಿನಾಯಕ ನಾರಾಯಣ ಭಟ್ಟ ಜಗಳದಲ್ಲಿ ಸಂಬಂಧವೇ ಇಲ್ಲದ ವ್ಯಕ್ತಿಯನ್ನು ಕೊಲೆ ಮಾಡಿದ್ದಾನೆ. ಕೃತ್ಯದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular