HomeInternationalರಷ್ಯಾ-ಇರಾನ್ ತೈಲ ವಿನಾಯಿತಿ ಅಂತ್ಯ: ಮೋದಿ ಸರ್ಕಾರದ ಮುಂದಿನ ಹೆಜ್ಜೆ ಏನು?

ರಷ್ಯಾ-ಇರಾನ್ ತೈಲ ವಿನಾಯಿತಿ ಅಂತ್ಯ: ಮೋದಿ ಸರ್ಕಾರದ ಮುಂದಿನ ಹೆಜ್ಜೆ ಏನು?

ನವದೆಹಲಿ: ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಈಗ ಅಮೆರಿಕದ ದಿಗ್ಬಂಧನದ್ದೇ ಸದ್ದು ರಷ್ಯಾ ಮತ್ತು ಇರಾನ್‌ನಿಂದ ಕಚ್ಚಾ ತೈಲ ಖರೀದಿಸಲು ನೀಡಲಾಗಿದ್ದ ತಾತ್ಕಾಲಿಕ ರಿಯಾಯಿತಿಯನ್ನು (Waivers) ವಿಸ್ತರಿಸದಿರಲು ಅಮೆರಿಕದ ಶ್ವೇತಭವನ ಕಠಿಣ ನಿರ್ಧಾರ ಕೈಗೊಂಡಿದೆ. ಆದರೆ, ಈ ಬಿಕ್ಕಟ್ಟಿನ ನಡುವೆಯೂ ಭಾರತದ ಚಾಣಾಕ್ಷ ನಡೆ ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ಅಮೆರಿಕದ ಗರಿಷ್ಠ ಒತ್ತಡದ ನೀತಿ:

ಬುಧವಾರ ವಾಷಿಂಗ್ಟನ್‌ನಲ್ಲಿ ಮಾತನಾಡಿದ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ರಷ್ಯಾ ಮತ್ತು ಇರಾನ್ ತೈಲ ಖರೀದಿಗೆ ಸಂಬಂಧಿಸಿದ ಸಾಮಾನ್ಯ ಪರವಾನಗಿಯನ್ನು ಯಾವುದೇ ಕಾರಣಕ್ಕೂ ನವೀಕರಿಸುವುದಿಲ್ಲ. ಮಾರ್ಚ್ 11ಕ್ಕೂ ಮೊದಲು ಸಾಗಾಟದಲ್ಲಿದ್ದ ತೈಲಕ್ಕೆ ಮಾತ್ರ ರಿಯಾಯಿತಿ ಇತ್ತು, ಆ ಕೋಟಾ ಈಗ ಸಂಪೂರ್ಣ ಖಾಲಿಯಾಗಿದೆ ಎಂದು ಗುಡುಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಡುವು ಯಾವಾಗ ಅಂತ್ಯ?

ರಷ್ಯಾ ತೈಲ: ಏಪ್ರಿಲ್ 11ಕ್ಕೆ ರಿಯಾಯಿತಿ ಮುಕ್ತಾಯ.

ಇರಾನ್ ತೈಲ: ಏಪ್ರಿಲ್ 19ಕ್ಕೆ ವಿನಾಯಿತಿ ಅಂತ್ಯ.

ಭಾರತದ ಜಾಣ್ಮೆಯ ನಡೆ: 60 ಮಿಲಿಯನ್ ಬ್ಯಾರೆಲ್ ಸಂಗ್ರಹ

ಅಮೆರಿಕ ನೀಡಿದ್ದ ಈ ಸಣ್ಣ ಅವಧಿಯನ್ನು ಭಾರತ ಸುವರ್ಣಾವಕಾಶವಾಗಿ ಬಳಸಿಕೊಂಡಿದೆ:

ರಷ್ಯಾ ತೈಲ: ಗಡುವು ಮುಗಿಯುವ ಮುನ್ನವೇ ಭಾರತೀಯ ರಿಫೈನರಿಗಳು ಬರೋಬ್ಬರಿ 60 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ತರಿಸಿಕೊಂಡು ಭಂಡಾರ ತುಂಬಿಸಿಕೊಂಡಿವೆ

ಇರಾನ್ ತೈಲ: ಕಳೆದ 7 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸುಮಾರು 4 ಮಿಲಿಯನ್ ಬ್ಯಾರೆಲ್ ಇರಾನ್ ತೈಲವನ್ನೂ ಭಾರತ ಆಮದು ಮಾಡಿಕೊಂಡಿದೆ.

ನಮ್ಮ ಜೇಬಿಗೆ ಕತ್ತರಿ ಬೀಳುತ್ತಾ?

ಸದ್ಯಕ್ಕೆ ಭಾರತ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಭಾರಿ ಪ್ರಮಾಣದ ತೈಲ ಸಂಗ್ರಹಿಸಿರುವುದರಿಂದ, ತಕ್ಷಣಕ್ಕೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯ ಭೀತಿ ಇಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಇಂಧನ ಬಿಕ್ಕಟ್ಟನ್ನು ನಿಭಾಯಿಸಲು ಭಾರತ ಈಗಾಗಲೇ ಹಸಿರು ಇಂಧನ ಮತ್ತು ಸ್ವಾವಲಂಬನೆಯತ್ತಲೂ ಹೆಜ್ಜೆ ಇಟ್ಟಿದೆ.

ಮೋದಿ-ಟ್ರಂಪ್ 40 ನಿಮಿಷಗಳ ರಹಸ್ಯ ಚರ್ಚೆ

ಈ ಗಂಭೀರ ಪರಿಸ್ಥಿತಿಯ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋನ್ ಮೂಲಕ 40 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಪಶ್ಚಿಮ ಏಷ್ಯಾದ ಬಿಕ್ಕಟ್ಟು ಮತ್ತು ಇಂಧನ ಭದ್ರತೆಯ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಭಾರತಕ್ಕೆ ವಿಶೇಷ ರಿಯಾಯಿತಿ ಸಿಗುವ ಬಗ್ಗೆ ಕೇಂದ್ರ ಸರ್ಕಾರ ಆಶಾವಾದ ಹೊಂದಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular