HomeInternationalBREAKING: ತಾರಕಕ್ಕೇರಿದ ಅಮೆರಿಕ -ಚೀನಾ ಸುಂಕ ಸಮರ: ಚೀನಾ ಸರಕುಗಳ ಮೇಲೆ ಶೇ. 104ರಷ್ಟು ಸುಂಕ...

BREAKING: ತಾರಕಕ್ಕೇರಿದ ಅಮೆರಿಕ -ಚೀನಾ ಸುಂಕ ಸಮರ: ಚೀನಾ ಸರಕುಗಳ ಮೇಲೆ ಶೇ. 104ರಷ್ಟು ಸುಂಕ ಘೋಷಿಸಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಚೀನಾ ಮತ್ತು ಅಮೆರಿಕ ನಡುವೆ ಸುಂಕ ಸಮರ ತಾರಕಕ್ಕೇರಿದೆ. ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಚೀನಾದ ಸರಕು ಮೇಲೆ ಭಾರಿ ಸುಂಕ ವಿಧಿಸಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಸರಕುಗಳ ಮೇಲೆ ಶೇಕಡ 104 ರಷ್ಟು ಸುಂಕ ವಿಧಿಸಿದ್ದಾರೆ. ಕೆಲವು ದಿನಗಳ ಹಿಂದೆ ಟ್ರಂಪ್ ಹೆಚ್ಚುವರಿಯಾಗಿ ಶೇ. 34ರಷ್ಟು ಸುಂಕ ಘೋಷಿಸಿದ್ದರು. ಇದಕ್ಕೆ ಪ್ರತಿಯಾಗಿ ಚೀನಾ ಕೂಡ ಅಮೆರಿಕ ಮೇಲೆ ಶೇಕಡ 34 ರಷ್ಟು ಸುಂಕ ವಿಧಿಸಿತ್ತು. ಇದೀಗ ಚೀನಾದ ಮೇಲೆ ಅಮೆರಿಕ ಶೇ. 104 ರಷ್ಟು ಸುಂಕ ವಿಧಿಸಿದೆ.

ಚೀನಾದ ಸರಕುಗಳ ಮೇಲೆ ಅಮೆರಿಕ ತಕ್ಷಣದಿಂದಲೇ 104% ಸುಂಕ ವಿಧಿಸಿದೆ ಎಂದು ಶ್ವೇತಭವನ ದೃಢಪಡಿಸಿದೆ. ವ್ಯಾಪಾರ ಯುದ್ಧದ ನಾಟಕೀಯ ಉಲ್ಬಣದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏಪ್ರಿಲ್ 8 ರ ಮಂಗಳವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಎಲ್ಲಾ ಚೀನೀ ಸರಕುಗಳ ಮೇಲೆ ಅಮೆರಿಕವು 104% ವ್ಯಾಪಕ ಸುಂಕವನ್ನು ವಿಧಿಸುವುದಾಗಿ ಘೋಷಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular