HomeInternationalBIG NEWS: ವಿಶ್ವದ 70 ಲಕ್ಷ ಜನರ ಬಲಿ ಪಡೆದ ಕೋವಿಡ್ ಗೆ ಚೀನಾ ನೇರ...

BIG NEWS: ವಿಶ್ವದ 70 ಲಕ್ಷ ಜನರ ಬಲಿ ಪಡೆದ ಕೋವಿಡ್ ಗೆ ಚೀನಾ ನೇರ ಹೊಣೆ: ಅಮೆರಿಕ ಕೋರ್ಟ್ ಮಹತ್ವದ ತೀರ್ಪು: 2.09 ಲಕ್ಷ ಕೋಟಿ ರೂ. ದಂಡ ವಿಧಿಸಿ ಆದೇಶ

ವಾಷಿಂಗ್ಟನ್: ಜಾಗತಿಕವಾಗಿ 70 ಲಕ್ಷ ಜನರನ್ನು ಬಲಿ ಪಡೆದ ಕೋವಿಡ್ -19 ಸಾಂಕ್ರಾಮಿಕ ಹರಡಲು ಚೀನಾ ಸರ್ಕಾರ ನೇರ ಹೊಣೆಯಾಗಿದೆ ಎಂದು ಅಮೆರಿಕದ ಮಿಸ್ಸೌರಿ ಫೆಡರಲ್ ನ್ಯಾಯಾಲಯ ಹೇಳಿದ್ದು, 2.09 ಲಕ್ಷ ಕೋಟಿ ದಂಡ ವಿಧಿಸಿ ತೀರ್ಪು ನೀಡಿದೆ.

ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುವ ಸಮಯದಲ್ಲಿ ಪಿಪಿಇ ಕಿಟ್ ಗಳ ಮೇಲೆ ಏಕಸ್ವಾಮ್ಯ ಸಾಧಿಸಲು ಮುಂದಾಗುವ ಮೂಲಕ ಜನರ ಮಾರಣಹೋಮಕ್ಕೆ ಚೀನಾ ಸರ್ಕಾರ ಕಾರಣವಾಗಿದೆ ಎಂದು ಅಮೆರಿಕದ ಮಿಸ್ಸೌರಿ ಫೆಡರಲ್ ನ್ಯಾಯಾಧೀಶ ಸ್ಟೀಫನ್ ಎನ್. ಲಿಂಬೌಫ್ ಆದೇಶದಲ್ಲಿ ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗದ ಬಗ್ಗೆ ಮಾಹಿತಿ ಮುಚ್ಚಿಟ್ಟ ಆರೋಪ, ಜನರ ಸಾವಿನ ನಡುವೆ ಚಿಕಿತ್ಸಾ ಉಪಕರಣಗಳ ಮೇಲೆ ಹಕ್ಕು ಸ್ವಾಮ್ಯ ಸ್ಥಾಪಿಸಲು ಪ್ರಯತ್ನ, ಬೇರೆ ದೇಶಗಳಿಗೆ ದುಪ್ಪಟ್ಟು ಬೆಲೆಗೆ ಪಿಪಿಇ ಕಿಟ್ ಮಾರಾಟ ಮಾಡಿದ ಆರೋಪದ ಮೇಲೆ ಚೀನಾಗೆ 24 ಬಿಲಿಯನ್ ಅಮೆರಿಕನ್ ಡಾಲರ್ ದಂಡ ವಿಧಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚೀನಾದ ವುಹಾನ್ ಲ್ಯಾಬ್ ನಲ್ಲಿ ಕೋವಿಡ್ ಸಾಂಕ್ರಾಮಿಕ ವೈರಸ್ ಸೃಷ್ಟಿಸಲಾಗಿದೆ. ಪಿಪಿಇ ಕಿಟ್ ಗಳ ಉತ್ಪಾದನೆ, ರಫ್ತು ತಡೆಯುವ ಮೂಲಕ ರೋಗ ಉಲ್ಬಣಕ್ಕೆ ಚೀನಾ ಕಾರಣವಾಗಿದೆ ಎಂದು ಆರೋಪಿಸಿ ಮಿಸ್ಸೌರಿ ಫೆಡರಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular