HomeKarnatakaನಗರಾಭಿವೃದ್ಧಿ ಇಲಾಖೆ ಎಡವಟ್ಟು: 6 ತಿಂಗಳ ಹಿಂದೆ ಮೃತಪಟ್ಟಿದ್ದ ಎಂಜಿನಿಯರ್ ವರ್ಗಾವಣೆ ಮಾಡಿ ಆದೇಶ

ನಗರಾಭಿವೃದ್ಧಿ ಇಲಾಖೆ ಎಡವಟ್ಟು: 6 ತಿಂಗಳ ಹಿಂದೆ ಮೃತಪಟ್ಟಿದ್ದ ಎಂಜಿನಿಯರ್ ವರ್ಗಾವಣೆ ಮಾಡಿ ಆದೇಶ

ಕಲಬುರ್ಗಿ: ನಗರಾಭಿವೃದ್ಧಿ ಇಲಾಖೆ, ಮೃತಪಟ್ಟಿದ್ದ ಎಂಜಿನಿಯರ್ ಓರ್ವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸುವ ಮೂಲಕ ಎಡವಟ್ಟು ಮಡಿಕೊಂಡಿದೆ.

ಕಲಬುರ್ಗಿ ಜಿಲ್ಲೆಯ ಸೇಡಂ ಪಟ್ಟಣದ ನಗರಾಭಿವೃದ್ಧಿ ಇಲಾಖೆಯ ಕಿರಿಯ ಎಂಜಿನಿಯರ್ ಅಶೋಕ್ ಪುಟಪಾಕ್ 6 ತಿಂಗಳ ಹಿಂದೆಯೇ ಮೃತಪಟ್ಟಿದ್ದರು. ಆದರೆ ರಾಜ್ಯ ಸರ್ಕಾರ ಅಶೋಕ್ ಪುಟಪಾಕ್ ಸೇರಿದಂತೆ ಹಲವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಸೇಡಂ ನಗರಾಭಿವೃದ್ಧಿ ಇಲಾಖೆಯ ಕಿರಿಯ ಎಂಜಿನಿಯರ್ ಆಗಿದ್ದ ಅಶೋಕ್ ಅವರನ್ನು ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆಯ ಕಿರಿಯ ಎಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರ ಕ್ಷೇತ್ರದಲ್ಲಿಯೇ ಈ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಶೋಕ್ ಪುಟಪಾಕ ಜನವರಿ 12ರಂದು ಮೃತಪಟ್ಟಿದ್ದರು. ಇಲಾಖೆ ಎಂಜಿನಿಯರ್ ಓರ್ವರು ಸಾವನ್ನಪ್ಪಿ 6 ತಿಂಗಳು ಕಳೆದಿದ್ದರೂ ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಗೆ ಮಾಹಿತಿಯೇ ಇರಲಿಲ್ಲವೇ? ಎಂಬ ಅನುಮಾನ ವ್ಯಕ್ತವಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular