HomeEntertainmentBIG NEWS: ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜಾ' ಟ್ರೈಲರ್ ಇಂದು ರಿಲೀಸ್

BIG NEWS: ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜಾ’ ಟ್ರೈಲರ್ ಇಂದು ರಿಲೀಸ್

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪಾನ್ ಇಂಡಿಯಾ ಸಿನಿಮಾ ‘ಕಬ್ಜಾ’ ದ ಟ್ರೈಲರ್ ಇಂದು ರಿಲೀಸ್ ಆಗಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಂಜೆ 5:02 ಕ್ಕೆ ಸಾಮಾಜಿಕ ಜಾಲತಾಣ ಯೂಟ್ಯೂಬ್ ನಲ್ಲಿ ಟ್ರೈಲರ್ ಬಿಡುಗಡೆಯಾಗುತ್ತಿದೆ.

ಪುನೀತ್ ರಾಜಕುಮಾರ್ ಅವರ ಸ್ಮರಣೆಯಲ್ಲಿ ಮಾರ್ಚ್ 17ರಂದು ಈ ಚಿತ್ರ ವಿಶ್ವದಾದ್ಯಂತ ತೆರೆ ಕಾಣಲಿದ್ದು, ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ನಿರ್ಮಾಣಗೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1940 ರ ಮಾಫಿಯಾ ಜಗತ್ತಿನ ಕಥೆಯನ್ನು ಈ ಚಿತ್ರ ಒಳಗೊಂಡಿದೆ ಎನ್ನಲಾಗಿದ್ದು, ಉಪೇಂದ್ರ ಅವರೊಂದಿಗೆ ಕಿಚ್ಚ ಸುದೀಪ್ ಕೂಡಾ ನಟಿಸಿರುವುದು ವಿಶೇಷ. ಚಿತ್ರ ಪ್ರೇಮಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾದಲ್ಲಿ ಶ್ರೀಯಾ ಸರನ್ ನಾಯಕಿಯಾಗಿದ್ದು, ತಾನ್ಯಾ ಹೋಪ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.

ಇನ್ನುಳಿದಂತೆ ಜಗಪತಿ ಬಾಬು, ರಾಹುಲ್ ದೇವ್, ದಾನಿಶ್ ಅಕ್ತರ್ ಸೈಫಿ, ಕಬೀರ್ ದುಬಾನ್ ಸಿಂಗ್, ಅನುಪ್ ರೇವಣ್ಣ ಮತ್ತು ಕೋಟ ಶ್ರೀನಿವಾಸ್ ಸೇರಿದಂತೆ ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular