HomeEntertainmentಆಟಿಕೆ ಕಾರು ಮಾದರಿ ಮೇಲುಡುಪು ಧರಿಸಿದ ಉರ್ಫಿ; ನಿಂಗೇನು ಹುಚ್ಚಾ ಎಂದು ಪ್ರಶ್ನಿಸಿದ ನೆಟ್ಟಿಗರು...!

ಆಟಿಕೆ ಕಾರು ಮಾದರಿ ಮೇಲುಡುಪು ಧರಿಸಿದ ಉರ್ಫಿ; ನಿಂಗೇನು ಹುಚ್ಚಾ ಎಂದು ಪ್ರಶ್ನಿಸಿದ ನೆಟ್ಟಿಗರು…!

ವಿಲಕ್ಷಣ ಉಡುಪಿನಿಂದಲೇ ಹೆಸರುವಾಸಿಯಾಗಿರುವ ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು, ಇತ್ತೀಚಿನ ವಿಡಿಯೋದಲ್ಲಿ ಅವರು, ಆಟಿಕೆ ಕಾರುಗಳಿಂದ ತನ್ನ ಎದೆಭಾಗವನ್ನು ಮುಚ್ಚಿಕೊಂಡಿದ್ದಾರೆ.

ಇದರ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅವರ ಅಭಿಮಾನಿಗಳು ನಿಬ್ಬೆರಗಾಗಿದ್ದಾರೆ. ಫ್ಯಾಷನ್‌ ವಿಚಾರಕ್ಕೆ ಬಂದಾಗ ಸೃಜನಶೀಲತೆಗೆ ಯಾವುದೇ ಮಿತಿಯಿಲ್ಲ ಎಂಬುದನ್ನು ಉರ್ಫಿ ಸಾಬೀತುಪಡಿಸಿದ್ದಾರೆ.

ಹಿಂದಿ ಬಿಗ್ ಬಾಸ್ ಒಟಿಟಿ ಸ್ಟಾರ್ ಉರ್ಫಿ ಜಾವೇದ್ ಹೆಮ್ಮೆಯಿಂದ ಈ ವಿಲಕ್ಷಣವಾದ ಉಡುಪನ್ನು ಧರಿಸಿದ್ದಾರೆ. ವರ್ಣರಂಜಿತ ಆಟಿಕೆ ಕಾರುಗಳನ್ನು ಬಳಸಿ ತನ್ನ ಎದೆಭಾಗವನ್ನು ಮುಚ್ಚಿಕೊಂಡಿದ್ದರೆ. ಕಾಲಿಗೆ ಕ್ಯಾಶುಯಲ್ ನೀಲಿ ಸ್ವೆಟ್‌ಪ್ಯಾಂಟ್‌ ತೊಟ್ಟಿದ್ದಾರೆ. ತಲೆಗೂದಲಿಗೆ ಬನ್‌ ಹಾಕಿದ್ದು, ಮುಖಕ್ಕೆ ಮೇಕ್-ಅಪ್ ಹಾಕಿ ಕಂಗೊಳಿಸಿದ್ದಾರೆ. ಆಟಿಕೆ ಕಾರು ಹಿಡಿದುಕೊಂಡಲ್ಲಿಂದ ವಿಡಿಯೋ ಶುರುವಾಗಿ, ಆತ್ಮವಿಶ್ವಾಸದಿಂದ ಕಾಫಿ ಹೀರುವಲ್ಲಿಗೆ ವಿಡಿಯೋ ಶೇರ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ವಿಡಿಯೋವನ್ನು ಉರ್ಫಿ ಪೋಸ್ಟ್ ಮಾಡಿದ್ದಾರೆ. ವ್ಯತಿರಿಕ್ತ ಪ್ರತಿಕ್ರಿಯೆಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ಬಿರುಗಾಳಿ ಎಬ್ಬಿಸಿದೆ. ಹೆಚ್ಚಿನ ಬಳಕೆದಾರರು ಆಕೆಯ ವಿಲಕ್ಷಣ ನೋಟವನ್ನು ಅಪಹಾಸ್ಯ ಮಾಡಿ, ಟ್ರೋಲ್ ಮಾಡಿದ್ದಾರೆ. ನಿಂಗೇನು ಹುಚ್ಚಾ ಅಂತೆಲ್ಲಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular