HomeLatest Newsಯಾರಿಗೂ ತಿಳಿಯದ ಈ ವ್ಯಕ್ತಿಯೇ ವಿಶ್ವದ ನಂ.1 ಸಿಇಒ! ಕೇವಲ ಷೇರುಗಳಿಂದಲೇ ಹೂಡಿಕೆದಾರರನ್ನು ಕೋಟ್ಯಾಧಿಪತಿ ಮಾಡಿದ...

ಯಾರಿಗೂ ತಿಳಿಯದ ಈ ವ್ಯಕ್ತಿಯೇ ವಿಶ್ವದ ನಂ.1 ಸಿಇಒ! ಕೇವಲ ಷೇರುಗಳಿಂದಲೇ ಹೂಡಿಕೆದಾರರನ್ನು ಕೋಟ್ಯಾಧಿಪತಿ ಮಾಡಿದ ಸಾಧಕ

ವಿಶ್ವದ ಯಶಸ್ವಿ ಸಿಇಒಗಳ ಬಗ್ಗೆ ಚರ್ಚೆ ಬಂದಾಗ ಸಾಮಾನ್ಯವಾಗಿ ಸುಂದರ್ ಪಿಚೈ ಅಥವಾ ಸತ್ಯ ನಾದೆಲ್ಲಾ ಅವರ ಹೆಸರುಗಳು ಮುಂಚೂಣಿಗೆ ಬರುತ್ತವೆ. ಆದರೆ ಯಾವುದೇ ಪ್ರಚಾರವಿಲ್ಲದೆ, ಅಬ್ಬರದ ಸಂದರ್ಶನಗಳಿಲ್ಲದೆ ಬರೋಬ್ಬರಿ 9 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕಂಪನಿಯನ್ನು ಕಟ್ಟಿ ಬೆಳೆಸಿದ ವ್ಯಕ್ತಿಯೊಬ್ಬರಿದ್ದಾರೆ. ಅವರೇ ಮಾರ್ಕ್ ಲಿಯೊನಾರ್ಡ್. ಇವರ ಸಾಧನೆ ಜಾಗತಿಕ ಮಟ್ಟದ ಉದ್ಯಮ ದಿಗ್ಗಜರಿಗಿಂತಲೂ ಮಿಗಿಲಾಗಿದ್ದರೂ, ಇವರ ಹೆಸರು ಮಾತ್ರ ಸಾರ್ವಜನಿಕರಿಗೆ ಅಷ್ಟಾಗಿ ತಿಳಿದಿಲ್ಲ.

ಕೆನಡಾ ಮೂಲದ ‘ಕಾನ್ಸ್ಟೆಲೇಷನ್ ಸಾಫ್ಟ್‌ವೇರ್’ (Constellation Software) ಕಂಪನಿಯ ಸ್ಥಾಪಕ ಮತ್ತು ಸಿಇಒ ಆಗಿರುವ ಮಾರ್ಕ್ ಲಿಯೊನಾರ್ಡ್, ಪ್ರಚಾರದಿಂದ ದೂರವಿರಲು ಬಯಸುವ ಅಪರೂಪದ ಉದ್ಯಮಿ. ಕೇವಲ 30 ಉದ್ಯೋಗಿಗಳೊಂದಿಗೆ ಆರಂಭವಾದ ಈ ಕಂಪನಿ ಇಂದು ವಿಶ್ವದ 100ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿಕೊಂಡಿದೆ. 1.25 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ನೀಡುತ್ತಿರುವ ಈ ಸಂಸ್ಥೆಯ ಇಂದಿನ ಮೌಲ್ಯ ಸುಮಾರು 103 ಬಿಲಿಯನ್ ಡಾಲರ್, ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 9 ಲಕ್ಷ ಕೋಟಿಗೂ ಅಧಿಕ.

ಅಬ್ಬರವಿಲ್ಲದ ಅಸಾಧಾರಣ ಬೆಳವಣಿಗೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾರ್ಕ್ ಲಿಯೊನಾರ್ಡ್ ಅವರ ವ್ಯವಹಾರ ಶೈಲಿ ಉಳಿದವರಿಗಿಂತ ಭಿನ್ನ. ಇವರು ದೊಡ್ಡ ಬ್ರ್ಯಾಂಡ್‌ಗಳ ಹಿಂದೆ ಬೀಳುವ ಬದಲು, ಸಣ್ಣ ಮತ್ತು ವಿಶೇಷ ಸಾಫ್ಟ್‌ವೇರ್ ಕಂಪನಿಗಳನ್ನು ಖರೀದಿಸುವತ್ತ ಗಮನ ಹರಿಸುತ್ತಾರೆ. ಇಲ್ಲಿಯವರೆಗೆ ಅವರು ಸುಮಾರು 150 ನಗರಗಳಲ್ಲಿನ 600ಕ್ಕೂ ಹೆಚ್ಚು ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಲೈಬ್ರರಿ ಸಿಸ್ಟಮ್, ಯುಟಿಲಿಟಿ ಬಿಲ್ಲಿಂಗ್, ಮುನ್ಸಿಪಲ್ ಇಆರ್‌ಪಿ ಪ್ಲಾಟ್‌ಫಾರ್ಮ್‌ಗಳಂತಹ ನಿರ್ದಿಷ್ಟ ಮಾರುಕಟ್ಟೆಗಳಿಗೆ ಸಾಫ್ಟ್‌ವೇರ್ ಸಿದ್ಧಪಡಿಸುವ ಕಂಪನಿಗಳ ಮೇಲೆ ಇವರು ಹೂಡಿಕೆ ಮಾಡುತ್ತಾರೆ.

ಹೂಡಿಕೆದಾರರಿಗೆ ಬಂಪರ್ ಲಾಭ

2006ರಲ್ಲಿ ಈ ಕಂಪನಿ ಷೇರು ಮಾರುಕಟ್ಟೆ ಪ್ರವೇಶಿಸಿತು. ಅಂದಿನಿಂದ ಇಂದಿನವರೆಗೆ ಈ ಕಂಪನಿಯ ಷೇರುಗಳು ಶೇಕಡಾ 26,646 ರಷ್ಟು ಲಾಭವನ್ನು ನೀಡಿದೆ. ಅಂದರೆ ಕಳೆದ 19 ವರ್ಷಗಳಲ್ಲಿ ಹೂಡಿಕೆದಾರರ ಹಣ 266 ಪಟ್ಟು ಹೆಚ್ಚಾಗಿದೆ. 2024ರ ಸಾಲಿನಲ್ಲಿ ಕಂಪನಿಯ ಆದಾಯವು ಶೇಕಡಾ 20ರಷ್ಟು ಹೆಚ್ಚಳ ಕಂಡಿದ್ದು, 90,000 ಕೋಟಿ ರೂಪಾಯಿ ಲಾಭ ಗಳಿಸಿದೆ.

ಗೆಲುವಿನ ಸರಳ ಸೂತ್ರ

ಉತ್ತಮ ಕಂಪನಿಗಳನ್ನು ಖರೀದಿಸುವುದು ಮತ್ತು ಅವುಗಳನ್ನು ಎಂದಿಗೂ ಮಾರಾಟ ಮಾಡದೆ ದೀರ್ಘಕಾಲದವರೆಗೆ ಉಳಿಸಿಕೊಳ್ಳುವುದು ಮಾರ್ಕ್ ಅವರ ಯಶಸ್ಸಿನ ಗುಟ್ಟು. ಯಾವುದೇ ಕಂಪನಿಯನ್ನು ಖರೀದಿಸಿದ ನಂತರ ಅದರ ಸ್ವತಂತ್ರ ಕಾರ್ಯನಿರ್ವಹಣೆಗೆ ಅವರು ಅಡ್ಡಿಪಡಿಸುವುದಿಲ್ಲ. ಅಲ್ಲದೆ ಪ್ರತಿಯೊಂದು ಹೂಡಿಕೆಯಲ್ಲೂ ಕನಿಷ್ಠ ಶೇಕಡಾ 20ರಷ್ಟು ಲಾಭ ಬರುವಂತೆ ನೋಡಿಕೊಳ್ಳುವ ಅವರ ಶಿಸ್ತುಬದ್ಧ ಹೂಡಿಕೆ ತಂತ್ರ ಇಂದು ಅವರನ್ನು ವಿಶ್ವದ ಅತ್ಯಂತ ಯಶಸ್ವಿ ಸಿಇಒಗಳಲ್ಲಿ ಒಬ್ಬರನ್ನಾಗಿ ಮಾಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular