ನವದೆಹಲಿ: ಈ ಬಾರಿ ಚುನಾವಣೆ ನಡೆಯಲಿರುವ ಪಂಚ ರಾಜ್ಯಗಳಿಗೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಭರ್ಜರಿ ಕೊಡುಗೆ ನೀಡಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಪುದುಚೇರಿ ಮತ್ತು ಕೇರಳ ರಾಜ್ಯಗಳಿಗೆ ಕೇಂದ್ರ ಬಜೆಟ್ನಲ್ಲಿ ಹಲವು ಕೊಡುಗೆಗಳನ್ನು ನಿದಲಾಗಿದೆ.
ಒಡಿಶಾ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಮಿನರಲ್ ರಿಸರ್ವ್ ಪಾರ್ಕ್ಗಳನ್ನು ಘೋಷಣೆ ಮಾಡಲಾಗಿದೆ. ವಾರಣಾಸಿಯಿಂದ ಸಿಲಿಗುರಿಗೆ ರೈಲು ಕಾರಿಡಾರ್ , ಕೇರಳ ಮತ್ತು ತಮಿಳುನಾಡಿನಲ್ಲಿ ಅಪರೂಪದ ಅರ್ಥ್ ಕಾರಿಡಾರ್ ಅನ್ನೂ ಬಜೆಟ್ ನ್ನಲ್ಲಿ ಘೋಷಿಸಲಾಗಿದೆ.
ರೇರ್ ಅರ್ಥ್ ಖನಿಜಗಳ ವಿಚಾರದಲ್ಲಿ ಚೀನಾ ಮೇಲಿನ ಅವಲಂಬನೆ ತಪ್ಪಿಸುವುದಕ್ಕಾಗಿ ತಮಿಳುನಾಡು, ಕೇರಳ, ಒಡಿಶಾ ಮತ್ತು ಆಂಧ್ರಪ್ರದೇಶಗಳಲ್ಲಿ ಕಾರಿಡಾರ್ಗಳ ಸ್ಥಾಪನೆ ಘೋಷಣೆ ಮಾಡಲಾಗಿದೆ.
ವಾರಣಾಸಿಯಿಂದ ಸಿಲಿಗುರಿ ರೈಲು ಕಾರಿಡಾರ್:
ಭಾರತದ ಹೈಸ್ಪೀಡ್ ರೈಲು ಮಹತ್ವಾಕಾಂಕ್ಷೆಗಳನ್ನು ಹೆಚ್ಚಿಸುವ ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್, ಎರಡನೇ ಮತ್ತು ಮೂರನೇ ಶ್ರೇಣಿಯ ನಗರಗಳನ್ನು ಪ್ರಮುಖ ನಗರ ಕೇಂದ್ರಗಳಿಗೆ ಸಂಪರ್ಕಿಸುವ ಸಲುವಾಗಿ ಏಳು ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಘೋಷಿಸಿದ್ದಾರೆ.
ಪುಣೆ-ಮುಂಬೈ, ಪುಣೆ-ಹೈದರಾಬಾದ್, ಹೈದರಾಬಾದ್-ಬೆಂಗಳೂರು, ಬೆಂಗಳೂರು-ಚೆನ್ನೈ, ಹೈದರಾಬಾದ್-ಚೆನ್ನೈ, ದೆಹಲಿ-ವಾರಣಾಸಿ ಮತ್ತು ವಾರಣಾಸಿ-ಸಿಲಿಗುರಿ ಮಾರ್ಗಗಳಲ್ಲಿ ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ನಿರ್ಮಿಸಲಾಗುತ್ತಿದೆ.
ಈ ಕಾರಿಡಾರ್‌ಗಳು ಪಶ್ಚಿಮ, ದಕ್ಷಿಣ, ಉತ್ತರ ಮತ್ತು ಪೂರ್ವ ಪ್ರದೇಶಗಳನ್ನು ಸಂಪರ್ಕಿಸುತ್ತವೆ. ಕೈಗಾರಿಕಾ ಕೇಂದ್ರಗಳು, ತಂತ್ರಜ್ಞಾನ ಕೇಂದ್ರಗಳು, ಯಾತ್ರಾ ನಗರಗಳು ಮತ್ತು ಅಭಿವೃದ್ಧಿಹೊಂದುತ್ತಿರುವ ನಗರ ಸಮೂಹಗಳ ನಡುವೆ ವೇಗವಾಗಿ ಸಂಪರ್ಕ ಕಲ್ಪಿಸಲಿವೆ ಎಂದು ವಿರಿಸಲಾಗಿದೆ..
ಅಲ್ಪಾವಧಿಯ ಮಾಡ್ಯುಲರ್ ಕೋರ್ಸ್‌ಗಳನ್ನು ವಿನ್ಯಾಸಗೊಳಿಸುವಲ್ಲಿ ಐಸಿಎಐ ಮತ್ತು ಐಸಿಎಸ್‌ಐನಂತಹ ವೃತ್ತಿಪರ ಸಂಸ್ಥೆಗಳಿಗೆ ನೆರವಾಗಲು ಪೂರ್ವ ಭಾರತದಲ್ಲಿ ಡಿಸೈನಿಂಗ್ ಇನ್ಸ್ಟಿಟ್ಯೂಟ್ ಆರಂಭಿಸುವ ಬಗ್ಗೆ ಘೋಷಿಸಲಾಗಿದೆ. ಖಾಸಗಿ ಸಹಯೋಗದೊಂದಿಗೆ ಐದು ವೈದ್ಯಕೀಯ ಕೇಂದ್ರಗಳನ್ನು ರಚಿಸಲಾಗುವುದು ಎಂದು ವಿತ್ತ ಸಚಿವರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಪರಿಸರ ಸ್ನೇಹಿ ಸರಕು ಸಾಗಣೆ ಯೋಜನೆ ಘೋಷಣೆ, ಐದು ವರ್ಷಗಳಲ್ಲಿ 20 ಜಲ ಮಾರ್ಗಗಳ ಘೋಷಣೆ
3 ಆಯುರ್ವೇದ ಏಮ್ಸ್ ಸಂಸ್ಥೆ ಸ್ಥಾಪನೆ:
ಭಾರತದಲ್ಲಿ ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ವೈದ್ಯಕೀಯ ಪ್ರವಾಸೋದ್ಯಮಕ್ಕೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಮತ್ತಷ್ಟು ಹೆಚ್ಚಿಸಲು ಪ್ರತಿ ಜಿಲ್ಲೆಯಲ್ಲೂ ಮಹಿಳಾ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುವುದು ಎಂದು ಬಜೆಟ್ ನಲ್ಲಿ ಘೋಷಿಸಲಾಗಿದೆ.

