HomeLatest Newsನಿರ್ಮಲಾ ಬಜೆಟ್ ಲೆಕ್ಕಾಚಾರ: ನಿಮ್ಮ ಕೈ ಸೇರುವ ಮೊಬೈಲ್ ಅಗ್ಗ, ಆದರೆ ಸಂಜೆ ಹಾಕುವ ಪೆಗ್...

ನಿರ್ಮಲಾ ಬಜೆಟ್ ಲೆಕ್ಕಾಚಾರ: ನಿಮ್ಮ ಕೈ ಸೇರುವ ಮೊಬೈಲ್ ಅಗ್ಗ, ಆದರೆ ಸಂಜೆ ಹಾಕುವ ಪೆಗ್ ಇನ್ನು ದುಬಾರಿ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026-27ರ ಕೇಂದ್ರ ಬಜೆಟ್ ಸಾಮಾನ್ಯ ಜನರ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರಲಿದೆ. ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಲು ಮತ್ತು ಆಮದು ಅವಲಂಬನೆ ತಗ್ಗಿಸಲು ಸರ್ಕಾರ ಸುಂಕಗಳಲ್ಲಿ (Customs Duty) ಮಹತ್ವದ ಬದಲಾವಣೆ ಮಾಡಿದೆ. ಇದರಿಂದಾಗಿ ಕೆಲವು ವಸ್ತುಗಳ ಬೆಲೆ ಇಳಿಕೆಯಾದರೆ, ಇನ್ನು ಕೆಲವು ವಸ್ತುಗಳು ದುಬಾರಿಯಾಗಲಿವೆ.

ಅಗ್ಗವಾಗುವ ವಸ್ತುಗಳ ಪಟ್ಟಿ

ಆರೋಗ್ಯ, ಸ್ವಚ್ಛ ಇಂಧನ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್ ಭರ್ಜರಿ ಗಿಫ್ಟ್ ನೀಡಿದೆ.

ಕ್ಯಾನ್ಸರ್ ಔಷಧಗಳು: 17 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ಮೇಲಿನ ಸುಂಕ ಕಡಿತಗೊಳಿಸಲಾಗಿದೆ. ಇದು ರೋಗಿಗಳ ಚಿಕಿತ್ಸಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಧುಮೇಹ (Diabetes) ಔಷಧಗಳು: ಸಕ್ಕರೆ ಕಾಯಿಲೆಗೆ ಸಂಬಂಧಿಸಿದ ಔಷಧಗಳ ಬೆಲೆಯೂ ಇಳಿಕೆಯಾಗಲಿದೆ.

ಮೊಬೈಲ್ ಫೋನ್ ಮತ್ತು ಇವಿ ಬ್ಯಾಟರಿ: ಮೊಬೈಲ್ ಫೋನ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳ ಬೆಲೆ ತಗ್ಗಲಿದ್ದು, ಡಿಜಿಟಲ್ ಇಂಡಿಯಾ ಮತ್ತು ಪರಿಸರ ಸ್ನೇಹಿ ಸಂಚಾರಕ್ಕೆ ಬಲ ಸಿಗಲಿದೆ.

ಸೌರ ಫಲಕಗಳು (Solar Panels): ನವೀಕರಿಸಬಹುದಾದ ಇಂಧನಕ್ಕೆ ಒತ್ತು ನೀಡಲು ಸೋಲಾರ್ ಪ್ಯಾನಲ್‌ಗಳ ಬೆಲೆ ಇಳಿಸಲಾಗಿದೆ.

ಮೈಕ್ರೋವೇವ್ ಓವನ್: ಮಧ್ಯಮ ವರ್ಗದ ಗೃಹಿಣಿಯರಿಗೆ ಅನುಕೂಲವಾಗುವಂತೆ ಇದರ ಬೆಲೆ ಇಳಿಕೆಯಾಗಲಿದೆ.

ಕ್ರೀಡಾ ಸಾಮಗ್ರಿಗಳು ಮತ್ತು ಚರ್ಮದ ಉತ್ಪನ್ನಗಳು: ಕ್ರೀಡಾಪಟುಗಳಿಗೆ ಮತ್ತು ಫ್ಯಾಷನ್ ಪ್ರಿಯರಿಗೆ ಇದು ಸಿಹಿಸುದ್ದಿ.

ದುಬಾರಿಯಾಗಲಿವೆ ನಿಮ್ಮ ನೆಚ್ಚಿನ ವಸ್ತುಗಳು

ಸಿಗರೇಟ್‌ ಮತ್ತು ಪಾನ್‌ ಮಸಾಲ: ತಂಬಾಕು ಉತ್ಪನ್ನಗಳ ಮೇಲಿನ ಸುಂಕ ಹೆಚ್ಚಳದಿಂದ ಸಿಗರೇಟ್ ಮತ್ತು ಪಾನ್ ಮಸಾಲಾ ಬೆಲೆಗಳಲ್ಲಿ ಭಾರಿ ಏರಿಕೆ

ಆಲ್ಕೋಹಾಲ್‌: ಮದ್ಯದ ಮೇಲಿನ ತೆರಿಗೆ ಹೆಚ್ಚಿಸಲಾಗಿದ್ದು, ಇಂದಿನಿಂದಲೇ ಮದ್ಯದ ಬೆಲೆಗಳು ಗಗನಕ್ಕೇರಲಿವೆ

ಗೃಹಬಳಕೆ ಮತ್ತು ಐಷಾರಾಮಿ ವಸ್ತುಗಳ ಮೇಲೆ ಹೊರೆ

ನಿಮ್ಮ ಆದಾಯವನ್ನು ತಪ್ಪಾಗಿ ವರದಿ ಮಾಡಿದರೆ ಅಥವಾ ಮರೆಮಾಚಿದರೆ, ನೀವು ಪಾವತಿಸಬೇಕಾದ ತೆರಿಗೆಯ ಶೇ. 100 ರಷ್ಟು ದಂಡ ವಿಧಿಸಲಾಗುತ್ತದೆ.

ಹಣಕಾಸಿನ ಹೂಡಿಕೆ ಅಥವಾ ಚರಾಸ್ತಿಗಳನ್ನು ಬಹಿರಂಗಪಡಿಸದಿದ್ದರೆ ಈಗ ಕಡ್ಡಾಯವಾಗಿ ದಂಡ ಪಾವತಿಸಬೇಕಾಗುತ್ತದೆ.

ಫ್ಯೂಚರ್ಸ್‌ ಮತ್ತು ಆಪ್ಶನ್ಸ್‌ ವ್ಯವಹಾರದ ಮೇಲಿನ ಸೆಕ್ಯುರಿಟೀಸ್ ವಹಿವಾಟು ತೆರಿಗೆಯನ್ನು (STT) ಶೇ. 0.02 ರಿಂದ ಶೇ. 0.05 ಕ್ಕೆ ಏರಿಸಲಾಗಿದೆ. ಇದು ಸಣ್ಣ ಟ್ರೇಡರ್‌ಗಳ ಲಾಭದ ಮೇಲೆ ಪರಿಣಾಮ ಬೀರಲಿದೆ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular