HomeLatest NewsGood News: ಬೆಂಗಳೂರಿನ ಈ ಅಂಡರ್‌ ಪಾಸ್ ಕಾಮಗಾರಿ ಮುಕ್ತಾಯ, ವಾಹನ ಸವಾರರಿಗೆ ಗುಡ್‌ ನ್ಯೂಸ್

Good News: ಬೆಂಗಳೂರಿನ ಈ ಅಂಡರ್‌ ಪಾಸ್ ಕಾಮಗಾರಿ ಮುಕ್ತಾಯ, ವಾಹನ ಸವಾರರಿಗೆ ಗುಡ್‌ ನ್ಯೂಸ್

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೊಂಡಿದ್ದ ಮಹತ್ವದ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದೆ. ಇದರಿಂದಾಗಿ ಮೈಸೂರು ರಸ್ತೆ ಮತ್ತು ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಸಂಪರ್ಕ ಸುಲಭವಾಗಲಿದ್ದು, ವಾಹನ ಸವಾರರು ನಿಟ್ಟುಸಿರು ಬಿಡಲಿದ್ದಾರೆ.

ಬಿಡಿಎ ಚಲ್ಲಘಟ್ಟ ರೈಲ್ವೆ ಅಂಡರ್‌ಪಾಸ್ ಕಾಮಗಾರಿಯ ಅಪ್‌ಡೇಟ್‌ ನೀಡಿದೆ. ಚಲ್ಲಘಟ್ಟದಲ್ಲಿ ನಿರ್ಮಾಣವಾಗುತ್ತಿರುವ ಹೊಸ ರೈಲ್ವೆ ಅಂಡರ್‌ಪಾಸ್ ಕಾಮಗಾರಿ ಭರದಿಂದ ಸಾಗುತ್ತಿದೆ. ಅತ್ಯಾಧುನಿಕ ಬಾಕ್ಸ್‌-ಪುಷಿಂಗ್ ತಂತ್ರಜ್ಞಾನ ಬಳಸಿ ಬಿಡಿಎ ವೇಗವಾಗಿ ಹಾಗೂ ಸುರಕ್ಷಿತವಾಗಿ ಕಾಮಗಾರಿಯನ್ನು ಕೈಗೊಂಡಿದೆ.

ಅಧಿಕಾರಿಗಳ ಪ್ರಕಾರ ಈಗಾಗಲೇ 32.86 ಮೀಟರ್ ಬಾಕ್ಸ್ ಪುಷಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇನ್ನೂ ಕೇವಲ 9.14 ಮೀಟರ್ ಕಾಮಗಾರಿ ಬಾಕಿಯಿದೆ. ಮುಂದಿನ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿರುವ ಈ ಮಹತ್ವದ ಯೋಜನೆ ಸಾವಿರಾರು ಜನರಿಗೆ ಅನುಕೂಲ ಕಲ್ಪಿಸಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಯೋಜನಗಳು

* ನಾಡಪ್ರಭು ಕೆಂಪೇಗೌಡ ಲೇಔಟ್ ಮತ್ತು ಮೈಸೂರು ರಸ್ತೆ ನಡುವಿನ ಸಂಪರ್ಕವನ್ನು ಸುಗಮಗೊಳಿಸುತ್ತದೆ.

* ಪ್ರಯಾಣಿಕರಿಗೆ ಅಡೆತಡೆಯಿಲ್ಲದ, ಸುಗಮ ಹಾಗೂ ಪರಿಣಾಮಕಾರಿ ಸಂಚಾರವನ್ನು ಒದಗಿಸುತ್ತದೆ.

* ಬೆಂಗಳೂರು ನಗರದ ಸಂಪರ್ಕವನ್ನು ಬಲಪಡಿಸಿ, ವಾಹನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ.

*  ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ ಮನೆ ನಿರ್ಮಾಣಕ್ಕೆ ಸಂಚಾರ ಸುಲಭವಾಗಲಿದ್ದು, ಸೈಟು ಪಡೆದವರು ಮನೆ ನಿರ್ಮಾಣಕ್ಕೆ ಚಾಲನೆ ನೀಡಬಹುದು.

ಬೆಂಗಳೂರು-ಮೈಸೂರು ರೈಲು ಮಾರ್ಗದಲ್ಲಿ ಚಲ್ಲಘಟ್ಟ ಬಳಿ ಈ ಅಂಡರ್‌ ಪಾಸ್ ನಿರ್ಮಾಣ ಮಾಡಲಾಗುತ್ತಿದೆ. ಇದು ಬೆಂಗಳೂರು-ಮೈಸೂರು ರಸ್ತೆಯಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮಹತ್ವದ ಪಾತ್ರ ವಹಿಸಲಿದೆ. ಯೋಜನೆಯನ್ನು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಪೂರ್ಣಗೊಳಿಸಲಾಗುತ್ತಿದೆ.

ಅತ್ಯಾಧುನಿಕ ಬಾಕ್ಸ್‌-ಪುಷಿಂಗ್ ತಂತ್ರಜ್ಞಾನ ಬಳಸಿ ಬಿಡಿಎ ವೇಗವಾಗಿ ಅಂಡರ್ ಪಾಸ್ ನಿರ್ಮಾಣ ಮಾಡಿದೆ. ಸಂಪ್ರದಾಯಿಕ ಮಾದರಿಯನ್ನು ಕಾಮಗಾರಿ ಕೈಗೊಂಡರೆ ರೈಲು ಸಂಚಾರಕ್ಕೆ ತೊಂದರೆ ಆಗುತ್ತಿತ್ತು. ಕಾಮಗಾರಿಯೂ ವಿಳಂಬವಾಗುತ್ತಿತ್ತು.

ಸ್ಥಳೀಯರು ಈ ಅಂಡರ್‌ ಪಾಸ್ ಕಾಮಗಾರಿಗಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದೆವು. ಇದು ಪೂರ್ಣಗೊಂಡ ಬಳಿಕ ಸಂಚಾರದ ಅವಧಿ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ.

ಈಗ ಮೈಸೂರು ರಸ್ತೆ ಸಂಪರ್ಕಕ್ಕೆ ವಾಹನ ಸವಾರರು 7 ಕಿ.ಮೀ. ದೂರ ಸಾಗಬೇಕು. ಆದರೆ ಹೆದ್ದಾರಿಯಲ್ಲಿ ಲಾರಿಗಳು ಹೆಚ್ಚಿರುವ ಕಾರಣ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಅಂಡರ್ ಪಾಸ್ ಲೋಕಾರ್ಪಣೆಯಾದರೆ ಬೆಂಗಳೂರು ನಗರಕ್ಕೆ ಸಂಚಾರದ ಅವಧಿ 20 ನಿಮಿಷ ಕಡಿಮೆಯಾಗಲಿದೆ.

ಈಗಾಗಲೇ ಮಾಗಡಿ ರಸ್ತೆ-ಮೈಸೂರು ರಸ್ತೆ ಸಂಪರ್ಕಿಸಲು ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ರಸ್ತೆಯನ್ನು ಕೆಂಪೇಗೌಡ ಬಡಾವಣೆಯ ಜನರು ತಲುಪಲು ಚಲ್ಲಘಟ್ಟ ಅಂಡರ್‌ಪಾಸ್ ಸಹಾಯಕವಾಗಿದೆ.

ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ ಬಳಿಕ ಚಲ್ಲಘಟ್ಟದ ಬಳಿ ಜನರು ಹೆಚ್ಚಾಗಿ ಮನೆ ನಿರ್ಮಾಣ, ಫ್ಲಾಟ್‌ ಖರೀದಿಯಲ್ಲಿ ತೊಡಗಿದ್ದಾರೆ. ಅಲ್ಲಿ ವಾಸಿಸುವ ಜನರು ಸುಲಭವಾಗಿ ಬೆಂಗಳೂರು ನಗರಕ್ಕೆ ಬರಲು, ಮೈಸೂರು ರಸ್ತೆಗೆ ಸಾಗಲು ಈ ಯೋಜನೆ ಸಹಾಯಕವಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular