HomeKarnatakaBREAKING : ರಾಜ್ಯದಲ್ಲಿ ನಿಲ್ಲದ 'ಮೈಕ್ರೊ ಫೈನಾನ್ಸ್' ಕಿರುಕುಳ : ವಿಜಯನಗರದಲ್ಲಿ ಮಹಿಳೆ ಆತ್ಮಹತ್ಯೆ.!

BREAKING : ರಾಜ್ಯದಲ್ಲಿ ನಿಲ್ಲದ ‘ಮೈಕ್ರೊ ಫೈನಾನ್ಸ್’ ಕಿರುಕುಳ : ವಿಜಯನಗರದಲ್ಲಿ ಮಹಿಳೆ ಆತ್ಮಹತ್ಯೆ.!

ವಿಜಯನಗರ : ರಾಜ್ಯದಲ್ಲಿ ‘ಮೈಕ್ರೊ ಫೈನಾನ್ಸ್’ ಕಿರುಕುಳ ನಿಲ್ಲುವಂತೆ ಕಾಣುತ್ತಿಲ್ಲ, ಮೈಕ್ರೊ ಫೈನಾನ್ಸ್ ಕಿರುಕುಳಕ್ಕೆ ಮನನೊಂದು ವಿಜಯನಗರದಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರತ್ನಮ್ಮ ಎಂಬ ಮಹಿಳೆ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.

ರತ್ನಮ್ಮ ಫೈನಾನ್ಸ್ ನಿಂದ ಲಕ್ಷಾಂತರ ರೂ ಸಾಲ ಪಡೆದಿದ್ದರು ಎನ್ನಲಾಗಿದೆ. 2 ದಿನದ ಹಿಂದೆ ರತ್ನಮ್ಮ ಮನೆ ಮುಂದೆ ಫೈನಾನ್ಸ್ ಸಿಬ್ಬಂದಿಗಳು ಗಲಾಟೆ ಮಾಡಿ ಹೋಗಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ರತ್ನಮ್ಮ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular