HomeIPL 2026'ನಿಮ್ ಥರ ನಾವು 49ಕ್ಕೆ ಆಲ್‌ಔಟ್ ಆಗಿಲ್ಲ' ಎಂದು ಆರ್‌ಸಿಬಿ ಟ್ರೋಲ್ ಮಾಡಿದ್ದೇ ಕೊನೆ ಬಳಿಕ...

‘ನಿಮ್ ಥರ ನಾವು 49ಕ್ಕೆ ಆಲ್‌ಔಟ್ ಆಗಿಲ್ಲ’ ಎಂದು ಆರ್‌ಸಿಬಿ ಟ್ರೋಲ್ ಮಾಡಿದ್ದೇ ಕೊನೆ ಬಳಿಕ ಒಂದೇ ಒಂದು ಪಂದ್ಯವನ್ನೂ ಗೆಲ್ಲದೇ ಲತ್ತೆಯಾದ ಪಂಜಾಬ್!

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು, ಸದ್ಯ ಅಂತಿಮವಾಗಿ ಟಾಪ್ 4 ಸ್ಥಾನ ಗಿಟ್ಟಿಸಿಕೊಂಡು ಯಾವ ತಂಡಗಳು ಪ್ಲೇಆಫ್ ಸುತ್ತಿಗೆ ಪ್ರವೇಶ ಪಡೆದುಕೊಳ್ಳಲಿವೆ ಎಂಬ ಪ್ರಶ್ನೆ ಎದ್ದಿದೆ.

ಲೀಗ್ ಹಂತದ ಮೊದಲಾರ್ಧದಲ್ಲಿ ಯಾವ ತಂಡಗಳು ಸುಲಭವಾಗಿ ಪ್ಲೇಆಫ್ ಪ್ರವೇಶಸಲಿವೆ ಎನ್ನಲಾಗುತ್ತಿತ್ತೋ ಆ ತಂಡಗಳು ದ್ವಿತೀಯಾರ್ಧದಲ್ಲಿ ಮಕಾಡೆ ಮಲಗಿದ್ದು ಫ್ಲಾಪ್ ಶೋ ತೋರಿವೆ. ಅದರಲ್ಲೂ ಮುಖ್ಯವಾಗಿ ಪಂಜಾಬ್ ಕಿಂಗ್ಸ್ ತಂಡದ ಹಿನ್ನಡೆ ಅನಿರೀಕ್ಷಿತ ಹಾಗೂ ನಂಬಲಸಾಧ್ಯ ಎಂಬಂತಿದೆ.

ಏಕೆಂದರೆ ಈ ತಂಡ ತನ್ನ ಮೊದಲ ಏಳು ಪಂದ್ಯಗಳನ್ನಾಡಿ ಮುಗಿಸಿದ್ದ ಸಂದರ್ಭದಲ್ಲಿ ಒಂದೇ ಒಂದು ಸೋಲನ್ನೂ ಕಂಡಿರಲಿಲ್ಲ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯವೊದು ಮಳೆಯ ಕಾರಣದಿಂದಾಗಿ ರದ್ದಾಗಿದ್ದ ಕಾರಣ ಒಂದು ಅಂಕ ಪಡೆದಿದ್ದ ಪಂಜಾಬ್ ಆರು ಗೆಲುವುಗಳೊಂದಿಗೆ ಒಟ್ಟು 13 ಅಂಕಗಳನ್ನು ಹೊಂದಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸಂದರ್ಭದಲ್ಲಿ ಇನ್ನೆರಡು ಪಂದ್ಯ ಗೆದ್ದರೂ ಸಾಕು ಪಂಜಾಬ್ ಆರಾಮಾಗಿ ಪ್ಲೇಆಫ್ ತಲುಪಲಿದೆ ಬಿಡ್ರಿ ಎಂದು ಎಲ್ಲ ಕ್ರಿಕೆಟ್ ಅಭಿಮಾನಿಗಳು ಭವಿಷ್ಯ ನುಡಿಡಿದ್ದರು. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡ ಆಡಿದ ತನ್ನ ಎಂಟನೇ ಪಂದ್ಯದಿಂದ ನಡೆದದ್ದೇ ಬೇರೆ.

ಸುಮ್ಮನಿರಲಾರದೇ ಇರುವೆ ಬಿಟ್ಟುಕೊಟ್ಟರು ಎಂಬಂತೆ ಪಂಜಾಬ್ ಕಿಂಗ್ಸ್ ತಂಡದ ಸಾಮಾಜಿಕ ಜಾಲತಾಣದ ಅಡ್ಮಿನ್ ರಾಜಸ್ತಾನ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಜಪ ಮಾಡಿದ್ದ. ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ 4.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 49 ರನ್ ದಾಟಿತು. ಇದನ್ನು ಟ್ವೀಟ್ ಮಾಡಿ ಆರ್‌ಸಿಬಿ ಐಪಿಎಲ್‌ನಲ್ಲಿ ಗಳಿಸಿದ ಅತಿ ಕಡಿಮೆ ಮೊತ್ತವನ್ನು ಅಗತ್ಯವಿಲ್ಲದಿದ್ದರೂ ಟ್ರೋಲ್ ಮಾಡಿದ್ದ.

ರಾಜಸ್ತಾನ್ ವಿರುದ್ಧದ ಪಂದ್ಯದ ವೇಳೆ ಆರ್‌ಸಿಬಿಯನ್ನು ಈ ಮಟ್ಟಕ್ಕೆ ಟ್ರೋಲ್ ಮಾಡುವ ಅಗತ್ಯವಾದರೂ ಏನಿತ್ತು ಎಂದು ಆರ್‌ಸಿಬಿ ಫ್ಯಾನ್ಸ್ ಪಂಜಾಬ್ ಅಡ್ಮಿನ್‌ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡರು. ಅಂದಿನ ಪಂದ್ಯದಲ್ಲಿ ಪಂಜಾಬ್ 222 ರನ್ ಕಲೆಹಾಕಿತಾದರೂ ರಾಜಸ್ತಾನ್ ರಾಯಲ್ಸ್ ಆ ಮೊತ್ತವನ್ನು ಚೇಸ್ ಮಾಡಿ ಗೆದ್ದುಬೀಗಿತು. ಈ ಮೂಲಕ ಅಲ್ಲಿಯವರೆಗೂ ಸೋಲನ್ನೇ ಕಾಣದಿದ್ದ ಪಂಜಾಬ್ ಮೊದಲ ಬಾರಿಗೆ ನೆಲಕಚ್ಚಿತ್ತು.

ಅಂದು ಬಿದ್ದ ಪಂಜಾಬ್ ಇನ್ನೂ ಸಹ ಎದ್ದಿಲ್ಲ. ಆ ಸೋಲಿನ ಬಳಿಕ ಗುಜರಾತ್ ವಿರುದ್ಧ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ, ಮುಂಬೈ ಇಂಡಿಯನ್ಸ್ ವಿರುದ್ಧ ಹಾಗೂ ನಿನ್ನೆ ( ಮೇ 17 ) ಆರ್‌ಸಿಬಿ ವಿರುದ್ಧ 23 ರನ್‌ಗಳ ವಿರುದ್ಧ ಸೋಲನ್ನು ಕಂಡು ಸತತವಾಗಿ 6 ಪಂದ್ಯಗಳಲ್ಲಿ ಸೋತಿದೆ.

ಈ ಮೂಲಕ ಆರ್‌ಸಿಬಿಯ 49 ರನ್ ಕಡಿಮೆ ಮೊತ್ತವನ್ನು ಟ್ರೋಲ್ ಮಾಡಲು ಮುಂದಾಗಿದ್ದ ಪಂಜಾಬ್ ಕಿಂಗ್ಸ್ ಆ ಬಳಿಕ ಲತ್ತೆಯಾಗಿದ್ದು, ಗೆಲುವನ್ನೇ ಕಾಣದೇ ಸೋತು ಸುಣ್ಣವಾಗಿದೆ. ಸದ್ಯ ಉಳಿದೊಂದು ಪಂದ್ಯ ಬಾಕಿ ಇದ್ದು ಅದನ್ನು ಗೆದ್ದರೂ ಪ್ಲೇಆಫ್ ಪ್ರವೇಶ ಪಕ್ಕಾ ಎಂದು ಹೇಳಲಾಗುವುದಿಲ್ಲ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular