HomeKarnatakaಮಾದಕ ಲುಕ್‌ನಲ್ಲಿ ನಟಿ 'ಮೌನ ಗುಡ್ಡೇಮನೆ' : ಫೋಟೋ ನೋಡಿ ಫಿದಾ ಆದ ಪಡ್ಡೆ ಹೈಕಳು...

ಮಾದಕ ಲುಕ್‌ನಲ್ಲಿ ನಟಿ ‘ಮೌನ ಗುಡ್ಡೇಮನೆ’ : ಫೋಟೋ ನೋಡಿ ಫಿದಾ ಆದ ಪಡ್ಡೆ ಹೈಕಳು |WATCH VIDEO

ಬೆಂಗಳೂರು: ಕಿರುತೆರೆಯ ಜನಪ್ರಿಯ ನಟಿ ಮೌನ ಗುಡ್ಡೇಮನೆ ತಮ್ಮ ಸದಾ ಸೀದಾ ಮತ್ತು ಸಾಂಪ್ರದಾಯಿಕ ಇಮೇಜ್ ಬಿಟ್ಟು, ಇದೀಗ ‘ಲವ್ ಪಂಚ್’ (Love Punch) ಎಂಬ ಹೊಸ ಮೈಕ್ರೋ ಸರಣಿಯಲ್ಲಿ ನಟಿಸಿದ್ದು, ಅದರಲ್ಲಿ ಯಾರೂ ಊಹಿಸದಂತಹ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಭಾರಿ ಅಚ್ಚರಿ ಮೂಡಿಸಿದ್ದಾರೆ.

ಸಾಂಪ್ರದಾಯಿಕ ಇಮೇಜ್ ಮೀರಿ ನಟನೆ:

‘ರಾಮಾಚಾರಿ’ ಧಾರಾವಾಹಿಯ ‘ಚಾರು’ ಪಾತ್ರದ ಮೂಲಕ ಮತ್ತು ‘ಕೃಷ್ಣ ರುಕ್ಕು’ ಸೀರಿಯಲ್ ಮೂಲಕ ಮನೆಮಾತಾಗಿದ್ದ ಮೌನ ಗುಡ್ಡೇಮನೆ, ಸದಾ ಸೀರೆ ಅಥವಾ ಸಾಂಪ್ರದಾಯಿಕ ಉಡುಪುಗಳಲ್ಲಿ ವೀಕ್ಷಕರಿಗೆ ಹತ್ತಿರವಾಗಿದ್ದರು. ಆದರೆ, ಈ ಹೊಸ ‘ಲವ್ ಪಂಚ್’ ವೆಬ್ ಸರಣಿಯ ವೈರಲ್ ಕ್ಲಿಪ್‌ಗಳು ಮತ್ತು ಟೀಸರ್‌ನಲ್ಲಿ ಅವರು ಬಿಕಿನಿ ಹಾಗೂ ಅತ್ಯಂತ ಮಾದಕ ಉಡುಪುಗಳನ್ನು ಧರಿಸಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶರತ್ ಪದ್ಮನಾಭ್ ಜೊತೆ ಹೊಸ ಕೆಮಿಸ್ಟ್ರಿ:

ಈ ಸರಣಿಯಲ್ಲಿ ಮೌನ ಗುಡ್ಡೇಮನೆಗೆ ಜೋಡಿಯಾಗಿ ಕಿರುತೆರೆ ನಟ ಶರತ್ ಪದ್ಮನಾಭ್ ನಟಿಸಿದ್ದು, ಪ್ರೀತಂ ಮತ್ತು ನಂದಿನಿ ಎಂಬ ಪಾತ್ರಗಳಲ್ಲಿ ಇವರಿಬ್ಬರು ಬಣ್ಣ ಹಚ್ಚಿದ್ದಾರೆ. ಟೀಸರ್‌ನಲ್ಲಿ ಇವರಿಬ್ಬರ ನಡುವಿನ ರೊಮ್ಯಾಂಟಿಕ್ ಕೆಮಿಸ್ಟ್ರಿ ಮತ್ತು ಬೋಲ್ಡ್ ದೃಶ್ಯಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಪಡ್ಡೆ ಹೈಕಳ ನಿದ್ದೆ ಗೆಡಿಸಿವೆ.

ಅಭಿಮಾನಿಗಳ ಮಿಶ್ರ ಪ್ರತಿಕ್ರಿಯೆ:

ಯಾವಾಗಲೂ ಹಳ್ಳಿ ಹುಡುಗಿ ಅಥವಾ ಸೌಮ್ಯ ಸ್ವಭಾವದ ಪಾತ್ರಗಳಲ್ಲಿ ಮೌನ ಅವರನ್ನು ನೋಡಿದ್ದ ಅಭಿಮಾನಿಗಳು, ಈ ಹೊಸ ಬೋಲ್ಡ್ ಅವತಾರ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲವರು ನಟಿಯ ಈ ಹೊಸ ಪ್ರಯತ್ನ ಹಾಗೂ ಗ್ಲಾಮರಸ್ ಲುಕ್‌ಗೆ ಫಿದಾ ಆಗಿದ್ದರೆ, ಇನ್ನೂ ಕೆಲವರು ಈ ಮಟ್ಟಿಗಿನ ಬೋಲ್ಡ್ ಲುಕ್ ಬೇಕಿರಲಿಲ್ಲ ಎಂದು ಕಮೆಂಟ್ ಮಾಡುವ ಮೂಲಕ ಟ್ರೋಲ್ ಕೂಡ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಮೌನ ಅವರ ಈ ‘ಲವ್ ಪಂಚ್’ ಹೊಸ ಲುಕ್ ಮಾತ್ರ ಸದ್ಯ ಇಂಟರ್ನೆಟ್‌ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

View this post on Instagram

A post shared by Bullet Micro Drama (@bulletmicrodrama)

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular