HomeInternational18,00,000 ರೂಪಾಯಿ ಡ್ರೋನ್ ಎದುರು ಹರಾಜು ಆಗುತ್ತಿದೆ ಅಮೆರಿಕ ಸೇನೆಯ ಮಾನ! Iran Drones

18,00,000 ರೂಪಾಯಿ ಡ್ರೋನ್ ಎದುರು ಹರಾಜು ಆಗುತ್ತಿದೆ ಅಮೆರಿಕ ಸೇನೆಯ ಮಾನ! Iran Drones

ಇರಾನ್ ವಿರುದ್ಧ ಅಮೆರಿಕ & ಅದರ ಪಟಾಲಂ ಮುಗಿಬಿದ್ದು ದಾಳಿ ಮಾಡಿದರೂ ಯುದ್ಧ ಗೆಲ್ಲಲು ಆಗ್ತಾನೇ ಇಲ್ಲ. ಒಂದೆಡೆ ಇರಾನ್ ದೇಶವನ್ನು ಕೆಲವೇ ಗಂಟೆಗಳಲ್ಲಿ ಸೋಲಿಸಿ, ಅಲ್ಲಿರುವ ಸಂಪತ್ತು ಹಾಗೂ ತೈಲವನ್ನ ವಶಕ್ಕೆ ಪಡೆಯಬಹುದು ಎಂಬ ಕೆಲವರ ಲೆಕ್ಕಾಚಾರಗಳು ಉಲ್ಟಾ ಆಗಿಬಿಟ್ಟಿವೆ. ಹೀಗಿದ್ದಾಗ ಇರಾನ್ ಕೊಡುತ್ತಿರುವ ಏಟಿಗೆ ಆ ಕಡೆ ಇಸ್ರೇಲ್ ಸುಸ್ತಾಗಿ ಹೋಗಿದ್ದರೆ ಇನ್ನೊಂದೆಡೆ ಅಮೆರಿಕ ಸಾಕಪ್ಪಾ ಇವರ ಸಹವಾಸ ಅಂತಿದೆ. ಈ ಪೈಕಿ ಇರಾನ್ ಸೇನೆಯ ಶಾಹೀದ್ ಡ್ರೋನ್‌ಗಳು ಕೊಡುತ್ತಿರುವ ಏಟಿಗೆ ಅರಬ್ ದೇಶಗಳು ಬದಕಲು ಆಗದಂತಹ ಸ್ಥಿತಿ ನಿರ್ಮಾಣ ಆಗಿದೆ. 18,00,000 ರೂಪಾಯಿ ಡ್ರೋನ್ ಎದುರು ಹರಾಜು ಆಗುತ್ತಿದೆ ಅಮೆರಿಕ ಸೇನೆಯ ಮಾನ. ಹೀಗಿದ್ದಾಗಲೇ ದಿಢೀರ್ ಎಂಟ್ರಿ ಕೊಟ್ಟಿರುವ ಉಕ್ರೇನ್ ಸೇನೆ ಸುಮ್ಮನೆ ಇರದೆ ಇರುವೆ ಬಿಟ್ಟುಕೊಂಡ ರೀತಿ ಕಾಣುತ್ತಿದೆ ಇದೀಗ…

ಒಂದು ತಿಂಗಳಿಂದ ಮಧ್ಯಪ್ರಾಚ್ಯದಲ್ಲಿ ಕೇಳಿಬರುತ್ತಿರುವ ವಿಚಿತ್ರ ಶಬ್ದ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. ಇರಾನ್‌ ಸೇನೆಯ ‘ಶಾಹೀದ್’ ಡ್ರೋನ್‌ಗಳ ಅಬ್ಬರಕ್ಕೆ ಇಡೀ ಮಧ್ಯಪ್ರಾಚ್ಯ ನಲುಗಿ ಹೋಗಿದೆ, ಸುಮ್ಮನೆ ಇರದೇ ಇರಾನ್ ದೇಶವನ್ನ ಅಮೆರಿಕ & ಇಸ್ರೇಲ್ ಸೇನೆಗಳು ಕೆಣಕಿದ ಪರಿಣಾಮ ದೊಡ್ಡ ಸಮಸ್ಯೆ ಸೃಷ್ಟಿಯಾಗಿದೆ ಎಂಬ ಆರೋಪದ ನಡುವೆ ಇದೀಗ ಮತ್ತೊಂದು ಸಂಚಲನ ಸೃಷ್ಟಿಯಾಗಿದೆ. ಕಡಿಮೆ ವೆಚ್ಚದಲ್ಲಿ ತಯಾರಾಗುವ ಇರಾನ್‌ನ ಶಾಹೀದ್ ಡ್ರೋನ್‌ಗಳು ಈಗ ಅಮೆರಿಕ ವಿರುದ್ಧ ಯುದ್ಧದಲ್ಲಿ ಪ್ರಮುಖ ಆಯುಧ ಆಗುತ್ತಿವೆ. ಅಮೆರಿಕ ತನ್ನ ಗಲ್ಫ್ ಪ್ರದೇಶದ ಸೇನಾ ನೆಲೆಗಳ ರಕ್ಷಣೆಗೆ ಕೋಟಿ ಕೋಟಿ ರೂಪಾಯಿ ಮೌಲ್ಯದ ಕ್ಷಿಪಣಿಗಳನ್ನು ಬಳಸಿ ಡ್ರೋನ್ ಹೊಡೆದುರುಳಿಸಲು ಒದ್ದಾಡುತ್ತಿದೆ. ಇಂತಹ ಸಮಯದಲ್ಲಿ ಸುಮಾರು 4,500 ಕಿಲೋ ಮೀಟರ್ ದೂರದಲ್ಲಿರುವ ಉಕ್ರೇನ್ ಸೇನೆ ಇದೀಗ ಅಮೆರಿಕ ಹಾಗೂ ಅರಬ್ ದೇಶಗಳ ನೆರವಿಗೆ ಬಂದಿದೆ.

ಅಮೆರಿಕ ಸೇನೆಗೆ ಉಕ್ರೇನ್ ಸಹಾಯ!
ರಷ್ಯಾ ಜೊತೆ ನಡೆದ ಯುದ್ಧದ ಅನುಭವದಿಂದ ಶಾಹೀದ್ ಡ್ರೋನ್‌ಗಳ ವಿರುದ್ಧ ಹೋರಾಡುವಲ್ಲಿ ಉಕ್ರೇನ್‌ಗೆ ಈಗ 4 ವರ್ಷಗಳ ಅನುಭವವಿದೆ. ಕಡಿಮೆ ವೆಚ್ಚದಲ್ಲಿ ‘ಸ್ಟಿಂಗ್’ & ‘ಬುಲೆಟ್’ ಎಂಬ ಇಂಟರ್‌ಸೆಪ್ಟರ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಿರುವ ಉಕ್ರೇನ್ ಈಗ ಗಲ್ಫ್ ರಾಷ್ಟ್ರಗಳಿಗೆ ಸಹಾಯ ಮಾಡುತ್ತಿದೆ. ಕೆಲವೇ ವಾರಗಳ ಹಿಂದೆ ಪರಿಸ್ಥಿತಿ ಪೂರ್ತಿ ಬೇರೆ ಆಗಿತ್ತು. ಯುದ್ಧದ ಆರಂಭಿಕ ಹಂತದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೇನ್ ಅಧ್ಯಕ್ಷ ವೋಲೊಡಿಮಿರ್ ಝೆಲೆನ್ಸ್ಕಿ ಬಳಿ ಸಹಾಯ ಕೇಳುವುದೇ ಇಲ್ಲ ಎಂದು ಹೇಳಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೂ ಈಗ ಪರಿಸ್ಥಿತಿ ಬದಲಾಗಿ ಮಧ್ಯಪ್ರಾಚ್ಯದಲ್ಲಿ ಇರಾನ್ ದಾಳಿ ಹೆಚ್ಚಾಗಿದೆ, ಅಮೆರಿಕ ಸೇನಾ ನೆಲೆಗಳು ಮತ್ತು ಇಂಧನ ಸೌಕರ್ಯಕ್ಕೆ ಹಾನಿ ಉಂಟಾಗಿದೆ. ಯುದ್ಧ ವೆಚ್ಚವೂ ದಶಕೋಟಿ ಡಾಲರ್‌ ಮೀರುತ್ತಿದೆ. ಈ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳು ಶಾಹೀದ್ ಡ್ರೋನ್‌ಗಳನ್ನ ಎದುರಿಸುವಲ್ಲಿ ಉಕ್ರೇನ್‌ನ ಅನುಭವಕ್ಕೆ ಮೊರೆ ಹೋಗಿವೆ. ಉಕ್ರೇನ್‌ನ ಸೇನೆ ಈಗಾಗಲೇ ನೂರಾರು ಡ್ರೋನ್ ತಜ್ಞರನ್ನು ಕತಾರ್, ಯುಎಇ ಮತ್ತು ಸೌದಿ ಅರೇಬಿಯಾಗೆ ರವಾನಿಸಿ, ಅಲ್ಲಿ ಇರಾನ್ ಡ್ರೋನ್‌ಗಳನ್ನ ಎದುರಿಸಲು ತರಬೇತಿ ಕೊಡಿಸುತ್ತಿದೆ.

2.41 ಲಕ್ಷ ಕೋಟಿ ರೂಪಾಯಿ ನಷ್ಟ?
ಅಂದಹಾಗೆ ಇರಾನ್‌ನ ಶಾಹೀದ್-136 ಡ್ರೋನ್ ಬೆಲೆ ಸುಮಾರು 20,000 ಅಥವಾ 30,000 ಡಾಲರ್ ಆಗಿದೆ ಅಷ್ಟೇ. ಅಂದರೆ ಸುಮಾರು 18 ಲಕ್ಷ ರೂಪಾಯಿಯಿಂದ 28 ಲಕ್ಷ ರೂಪಾಯಿ ವೆಚ್ಚ ಆಗುತ್ತಿದೆ. ಆದರೆ ಇಷ್ಟು ಕಡಿಮೆ ವೆಚ್ಚದ ಡ್ರೋನ್‌ಗಳು ಕೊಡುತ್ತಿರುವ ಕಾಟ ಅಷ್ಟಿಷ್ಟಲ್ಲ, ಅಮೆರಿಕ ಸೇನೆ ಈ ಡ್ರೋನ್‌ಗಳನ್ನ ಹೊಡೆಯಲು ಭಾರಿ ವೆಚ್ಚ ಮಾಡುತ್ತಿದೆ. ಲಕ್ಷ ರೂಪಾಯಿ ಮೌಲ್ಯದ ಡ್ರೋನ್ ಹೊಡೆಯಲು ಕೋಟಿ, ಕೋಟಿ ರೂಪಾಯಿ ಖರ್ಚು ಮಾಡಿ ಮಿಸೈಲ್ ಹಾರಿಸುವ ಅನಿವಾರ್ಯತೆಗೆ ಸಿಲುಕಿದೆ ಅಮೆರಿಕ. ಇದೇ ಕಾರಣಕ್ಕೆ ಮೊದಲ 3 ವಾರದಲ್ಲಿಯೇ ಸುಮಾರು 2.9 ಬಿಲಿಯನ್ ಡಾಲರ್ ಅಂದರೆ ಸುಮಾರು 2.41 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದೆಯಂತೆ ಅಮೆರಿಕ. ಹೀಗಿದ್ದಾಗ ನೆರವಿಗೆ ಬಂದಿರುವ ಉಕ್ರೇನ್ ಸೇನೆ, ಸುಮಾರು 200ಕ್ಕೂ ಹೆಚ್ಚು ಡ್ರೋನ್ ತಜ್ಞರ ಮೂಲಕ ಅಮೆರಿಕ ಹಾಗೂ ಅರಬ್ ದೇಶಗಳ ಸೇನೆಯ ಸೈನಿಕರಿಗೆ ತರಬೇತಿ ನೀಡುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular