HomeInternational76,00,000 ಕೋಟಿ ರೂಪಾಯಿ ಉಡೀಸ್, ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಟ ನೋಡಿದ ಝೆಲೆನ್ಸ್ಕಿ? Ukraine...

76,00,000 ಕೋಟಿ ರೂಪಾಯಿ ಉಡೀಸ್, ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಟ ನೋಡಿದ ಝೆಲೆನ್ಸ್ಕಿ? Ukraine Conflict

ದೇಶ ಅಥವಾ ರಾಜ್ಯ ಇಲ್ಲವೇ ಯಾವುದೋ ಸಾಮ್ರಾಜ್ಯ ಅಂದ ಮೇಲೆ ಅದಕ್ಕೆ ಒಬ್ಬ ಸರಿಯಾದ ನಾಯಕ ಬೇಕೆ ಬೇಕು. ಅಕಸ್ಮಾತ್ ನಾಯಕನೇ ಸರಿ ಇಲ್ಲ ಎಂದಾದರೆ ಅಂತಹ ದೇಶ ಅಥವಾ ಸಾಮ್ರಾಜ್ಯ ಉಳಿದಿರುವ ಉದಾಹರಣೆ ಇಲ್ಲವೇ ಇಲ್ಲ. ಉಕ್ರೇನ್ ಕೂಡ ಇಂತಹದ್ದೇ ದುರಂತಕ್ಕೆ ಸಾಕ್ಷಿ ಆಗಿದ್ದು, ವೊಲೊಡಿಮಿರ್ ಝೆಲೆನ್ಸ್ಕಿ ಎಂಬ ಹುಂಬ ನಾಯಕನ ಪರಿಣಾಮವಾಗಿ ಇಡೀ ದೇಶವೇ ನಲುಗಿ ಹೋಗಿದೆ. ಸಣ್ಣ ವಿಚಾರಕ್ಕೆ ರಷ್ಯಾ ಜೊತೆಗೆ ಕಿರಿಕ್ ಮಾಡಿಕೊಂಡು ದೊಡ್ಡ ಯುದ್ಧವನ್ನೇ ಸೃಷ್ಟಿ ಮಾಡಿಕೊಂಡ ಈ ಪುಣ್ಯಾತ್ಮ ಝೆಲೆನ್ಸ್ಕಿ ಲಕ್ಷಾಂತರ ಜನರ ಸಾವಿಗೆ ಪರೋಕ್ಷ ಕಾರಣ ಎಂಬ ಆರೋಪ ಕೂಡ ಇದೆ. ಹೀಗಿದ್ದಾಗಲೇ, 76,00,000 ಕೋಟಿ ರೂಪಾಯಿ ಉಡೀಸ್, ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಟ ನೋಡಿದ ಝೆಲೆನ್ಸ್ಕಿ? ಎಂಬ ಚರ್ಚೆ ಶುರು ಆಗಿದೆ. ಯಾಕೆ ಗೊತ್ತಾ? ಬನ್ನಿ ತಿಳಿಯೋಣ.

ಹೌದು, ಉಕ್ರೇನ್‌ ದೇಶ 1991 ಎಂದರೆ ಸುಮಾರು 35 ವರ್ಷಗಳ ಹಿಂದೆ ಸೋವಿಯತ್ ರಷ್ಯಾ ಭಾಗವಾಗಿತ್ತು. ಆದ್ರೆ ಯಾವಾಗ ಸೋವಿಯತ್ ರಷ್ಯಾ ವಿಭಜನೆ ಆಗಿ ರಷ್ಯಾ ಪ್ರತ್ಯೇಕ ದೇಶವಾಗಿ ರೂಪುಗೊಂಡಿತೋ ಅಲ್ಲಿಂದ ಮುಂದೆ ಉಕ್ರೇನ್ ಕೂಡ ಪ್ರತ್ಯೇಕ ದೇಶವಾಗಿ ಗುರುತಿಸಿಕೊಂಡಿದೆ. ಇಷ್ಟೆಲ್ಲಾ ಇದ್ದಾಗ, ಪ್ರಬಲ ಸೋವಿಯತ್ ಒಕ್ಕೂಟದಲ್ಲಿ ಕೈಗಾರಿಕಾ ಕ್ರಾಂತಿಯ ಭಾಗವಾಗಿದ್ದ ಉಕ್ರೇನ್ ಶ್ರೀಮಂತ ದೇಶಗಳ ಪೈಕಿ ಒಂದಾಗಿತ್ತು. ಆದರೆ ಯಾವಾಗ ಈ ದೇಶ ರಷ್ಯಾ ಜೊತೆಗೆ ಯುದ್ಧ ಶುರು ಮಾಡಿತ್ತೋ ಅಲ್ಲಿಂದ ಮುಂದೆ ಹೀನಾಯ ಪರಿಸ್ಥಿತಿ ತಲುಪುತ್ತಾ ಬಂದಿದೆ. ಈ ಪೈಕಿ 2026 ಫೆಬ್ರವರಿ ತಿಂಗಳಲ್ಲಿ ಉಕ್ರೇನ್‌ನ ಕೈಗಾರಿಕಾ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಶೇಕಡಾ 2.6ಕ್ಕೆ ಇಳಿಕೆ ಕಾಣುವ ಮೂಲಕ ಅತ್ಯಂತ ಭೀಕರ ಪರಿಸ್ಥಿತಿಗೆ ತಲುಪಿದೆ. ಒಂದು ಕಾಲದಲ್ಲಿ ಜಗತ್ತಿನ ಅತಿದೊಡ್ಡ ಕೈಗಾರಿಕಾ ದೇಶವಾಗಿದ್ದ ಉಕ್ರೇನ್ ಈಗ ಬದುಕಲು ಕೂಡ ಕಷ್ಟಪಡುತ್ತಿದೆ.

Ukraine Losing Everything And Explore Why Industrial Production Fell

ಪ್ರಪಂಚದಲ್ಲೇ ಅತಿದೊಡ್ಡ ಕಬ್ಬಿಣ ನಿಕ್ಷೇಪ
2026 ಜನವರಿ & ಫೆಬ್ರವರಿ ತಿಂಗಳಲ್ಲಿ ಉಕ್ರೇನ್ ಕೈಗಾರಿಕಾ ಉತ್ಪಾದನೆ ಸೂಚ್ಯಂಕ ವರ್ಷದಿಂದ ವರ್ಷಕ್ಕೆ ಶೇಕಡಾ 4.6ಕ್ಕೆ ಇಳಿಕೆ ಕಂಡಿದೆ. ಈ ಮೂಲಕ ದೊಡ್ಡ ಮಟ್ಟದಲ್ಲಿ ಆಘಾತ ಎದುರಿಸಿದೆ ಉಕ್ರೇನ್ ದೇಶ, ಜಾಗತಿಕವಾಗಿ ಈ ಉಕ್ರೇನ್ ಗುರುತಿಸಿಕೊಂಡಿದ್ದೇ ತನ್ನ ಗಣಿಗಾರಿಕೆ ಮೂಲಕ. ಏಕೆಂದರೆ ಉಕ್ರೇನ್‌ನಲ್ಲಿ ಭಾರಿ ಪ್ರಮಾಣದ ನೈಸರ್ಗಿಕ ಸಂಪತ್ತು ಇದೆ. ಕಬ್ಬಿಣದ ಅದಿರು ವಿಚಾರದಲ್ಲಿ ಪ್ರಪಂಚದಲ್ಲೇ 5ನೇ ಅತಿದೊಡ್ಡ ನಿಕ್ಷೇಪ ಉಕ್ರೇನ್ ನೆಲದಲ್ಲಿ ಇದ್ದು, ಟೈಟಾನಿಯಂ ಹಾಗೂ ಮ್ಯಾಂಗನೀಸ್ ಅದಿರು ಕೂಡ ಉಕ್ರೇನ್‌ನಲ್ಲಿ ಭಾರಿ ಪ್ರಮಾಣದಲ್ಲೇ ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲಿಥಿಯಂ ಮತ್ತು ಗ್ರ್ಯಾಫೈಟ್ ಸೇರಿದಂತೆ ಅಪರೂಪದ ಖನಿಜಗಳು, ಯುರೇನಿಯಂ & ಜಿರ್ಕೋನಿಯಮ್ ಕೂಡ ಉಕ್ರೇನ್‌ನಲ್ಲಿ ಗಣನೀಯ ಪ್ರಮಾಣದಲ್ಲಿ ಇದೆ. ಇಷ್ಟೆಲ್ಲಾ ಇದ್ದರೂ ರಷ್ಯಾ ಜೊತೆಗೆ ಯುದ್ಧ ಶುರು ಆದ ನಂತರ ಉಕ್ರೇನ್ ನಲುಗಿ ಹೋಗಿದೆ. ಅದರಲ್ಲೂ ತನ್ನ ಬಳಿ ಭಾರಿ ಪ್ರಮಾಣದ ಖನಿಜ ನಿಕ್ಷೇಪಗಳು ಇದ್ದರೂ ಕೈಗಾರಿಕೆ ಬೆಳವಣಿಗೆ ವಿಚಾರದಲ್ಲಿ ಹೀನಾಯ ಕುಸಿತ ಕಂಡಿದೆ ಉಕ್ರೇನ್.

76,00,000 ಕೋಟಿ ರೂಪಾಯಿ ಉಡೀಸ್
ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಶುರುವಾಗಿ 4 ವರ್ಷ ಮುಗಿದು ಈಗ 5ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆ ದೊಡ್ಡ ನಷ್ಟ ಅನುಭವಿಸಿರುವ ಉಕ್ರೇನ್ ಒದ್ದಾಡುತ್ತಿದೆ. ಈವರೆಗೂ ರಷ್ಯಾ ದಾಳಿ ಹಿನ್ನೆಲೆ ಉಕ್ರೇನ್ ಸುಮಾರು 76,00,000 ಕೋಟಿ ರೂಪಾಯಿ ಕಳೆದುಕೊಂಡಿದೆ ಎನ್ನಲಾಗಿದೆ. ಈ ಮೂಲಕ ರಷ್ಯಾ ಜೊತೆಯಲ್ಲಿ ಯುದ್ಧ ನಿಲ್ಲಿಸುವಲ್ಲಿ ವಿಫಲವಾಗಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಟ ನೋಡಿದ್ನಾ? ಎಂಬ ಆಕ್ರೋಶದ ಕಹಳೆ ಕೂಡ ಮೊಳಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular