HomeInternationalಮದುವೆಗೆ ಹೋಗಲಾರದೇ ಪರದಾಡಿದ ವಧು; ಸಹಾಯಕ್ಕೆ ಬಂದ ಪೊಲೀಸರು....!

ಮದುವೆಗೆ ಹೋಗಲಾರದೇ ಪರದಾಡಿದ ವಧು; ಸಹಾಯಕ್ಕೆ ಬಂದ ಪೊಲೀಸರು….!

ಮದುವೆಯ ದಿನವನ್ನು ದಂಪತಿಗೆ ಅತ್ಯಂತ ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ. ಆದರೆ ಈ ದಿನ ಏನಾದರೂ ಎಡವಟ್ಟು ಆದರೆ ಮಾತ್ರ ಜೀವನ ಪರ್ಯಂತ ನೆನಪಿನಲ್ಲಿ ಉಳಿಯುತ್ತದೆ. ಅಂಥದ್ದೇ ಒಂದು ಎಡವಟ್ಟಿನ ಕಥೆ ವೈರಲ್‌ ಆಗಿದೆ.

ಲಂಡನ್‌ನಲ್ಲಿ ಮದುವೆ ಸ್ಥಳಕ್ಕೆ ತೆರಳುತ್ತಿದ್ದ ವಧು ಮತ್ತು ಕುಟುಂಬದವರ ವಾಹನ ಕೆಟ್ಟು ನಿಂತಿದ್ದರಿಂದ ಪರದಾಡುವಂತಾಯಿತು. ಆದರೆ, ಪೊಲೀಸರು ಅವರನ್ನು ಕರೆದುಕೊಂಡು ಮದುವೆ ಮನೆಯನ್ನು ತಲುಪಿಸಿದ್ದಾರೆ. ಇದು ಅಂತರ್ಜಾಲದಲ್ಲಿ ಅನೇಕರ ಹೃದಯವನ್ನು ಗೆದ್ದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಘಟನೆಯನ್ನು ಹೆಡ್ಜ್ ಎಂಡ್ ಪೊಲೀಸರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ಪೋಸ್ಟ್‌ನಲ್ಲಿ, “ಈ ಬೆಳಿಗ್ಗೆ ನಾವು ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿದ್ದೆವು, ಏಕೆಂದರೆ ಹೆಡ್ಜ್ ಎಂಡ್‌ನಲ್ಲಿರುವ ಸೇಂಟ್ ಜಾನ್ಸ್ ರಸ್ತೆಯಲ್ಲಿ ವಧು ಹೋಗುತ್ತಿದ್ದ ವಾಹನ ಕೆಟ್ಟು ನಿಂತಿತ್ತು.

ಈ ಸಂದರ್ಭದಲ್ಲಿ ಅವರು ತುಂಬಾ ಚಿಂತಿತರಾಗಿದ್ದರು. ನಾವು ಅವರಿಗೆ ಪೊಲೀಸ್ ಕಾರಿಗೆ ಹೋಗುವಂತೆ ಹೇಳಿದೆವು. ಸರಿಯಾದ ಸಮಯಕ್ಕೆ ವಧು ಸ್ಥಳ ತಲುಪಿದಳು ಮತ್ತು ಅವರ ಕುಟುಂಬಸ್ಥರೂ ಸ್ಥಳಕ್ಕೆ ಹೋದರು ಎಂದು ಹೇಳಿಕೊಂಡಿದ್ದಾರೆ.

ವಧುವಿನ ಜೊತೆಯಿರುವ ಫೋಟೋವನ್ನು ಅವರು ಶೇರ್‌ ಮಾಡಿದ್ದು, ಸರಿಯಾದ ಸಮಯಕ್ಕೆ ವಧು ಹಾಗೂ ಆಕೆಯ ಕುಟುಂಬವನ್ನು ಮದುವೆ ಸ್ಥಳಕ್ಕೆ ತಲುಪಿಸಿದ ಪೊಲೀಸರಿಗೆ ಅಭಿನಂದನೆಗಳ ಸುರಿಮಳೆಯಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular