ಬೆಂಗಳೂರು: UGNEET-26ರ ವೈದ್ಯಕೀಯ (MBBS) ಮತ್ತು ದಂತ ವೈದ್ಯಕೀಯ (BDS) ಕೋರ್ಸ್ಗಳ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಿದೆ.
ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಸೆಪ್ಟೆಂಬರ್ 19ರೊಳಗೆ ನಿಗದಿತ ಶುಲ್ಕವನ್ನು ಪಾವತಿಸಿ, ಸೀಟು ಖಾತರಿ ಚೀಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಬಳಿಕ ನಿಗದಿತ ಅವಧಿಯೊಳಗೆ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.
ಅಭ್ಯರ್ಥಿಗಳು ತಮಗೆ ಸೀಟು ಹಂಚಿಕೆಯಾಗಿರುವ ಕಾಲೇಜಿಗೆ ಸೆಪ್ಟೆಂಬರ್ 21ರೊಳಗೆ ಕಡ್ಡಾಯವಾಗಿ ವರದಿ ಮಾಡಿಕೊಂಡು ಪ್ರವೇಶ ಪಡೆಯಬೇಕು ಎಂದು KEA ಸೂಚಿಸಿದೆ.
ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ, ಐಎಎಸ್ ಅವರು ಮಾಹಿತಿ ನೀಡಿದ್ದಾರೆ.
PGCET-2026: ಸೀಟು ಆಯ್ಕೆ ದಾಖಲಿಸಲು ಗಡುವು ವಿಸ್ತರಣೆ; ಸೆ.17ರ ಮಧ್ಯಾಹ್ನ 3ರವರೆಗೆ ಅವಕಾಶ
ಬೆಂಗಳೂರು: MBA, MCA, ME, M.Tech ಹಾಗೂ M.Arch ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಯುತ್ತಿರುವ PGCET-2026 ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಆಪ್ಷನ್ಸ್ ದಾಖಲಿಸಲು ನೀಡಲಾಗಿದ್ದ ಗಡುವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವಿಸ್ತರಿಸಿದೆ.
ಅಭ್ಯರ್ಥಿಗಳ ಕೋರಿಕೆಯ ಮೇರೆಗೆ, ಸೆಪ್ಟೆಂಬರ್ 17ರಂದು ಬೆಳಿಗ್ಗೆ 9 ಗಂಟೆಗೆ ಮುಕ್ತಾಯವಾಗಬೇಕಿದ್ದ ಆಪ್ಷನ್ಸ್ ದಾಖಲಿಸುವ ಗಡುವನ್ನು ಅದೇ ದಿನ ಮಧ್ಯಾಹ್ನ 3 ಗಂಟೆಯವರೆಗೆ ವಿಸ್ತರಿಸಲಾಗಿದೆ.ಅಭ್ಯರ್ಥಿಗಳು ಈ ಅವಧಿಯೊಳಗೆ ತಮಗೆ ಆದ್ಯತೆಯ ಕೋರ್ಸ್ ಹಾಗೂ ಕಾಲೇಜುಗಳ ಆಯ್ಕೆಗಳನ್ನು ದಾಖಲಿಸಬೇಕು. ಉಳಿದಂತೆ PGCET-2026 ಕೌನ್ಸೆಲಿಂಗ್ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು KEA ಸ್ಪಷ್ಟಪಡಿಸಿದೆ.
ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ, ಐಎಎಸ್ ಅವರು ಮಾಹಿತಿ ನೀಡಿದ್ದಾರೆ.
ಅಂಚೆ ಇಲಾಖೆಯಿಂದ ‘ಢಾಯಿ ಆಖರ್’ ರಾಷ್ಟ್ರೀಯ ಪತ್ರ ಬರವಣಿಗೆ ಸ್ಪರ್ಧೆ
ಬಳ್ಳಾರಿ : ಭಾರತ ಸರ್ಕಾರದ ಸಂವಹನ ಸಚಿವಾಲಯದ ಅಂಚೆ ಇಲಾಖೆಯ ವತಿಯಿಂದ 2026-27ನೇ ಸಾಲಿನ ರಾಷ್ಟ್ರೀಯ ಮಟ್ಟದ ‘ಢಾಯಿ ಆಖರ್’ ಪತ್ರ ಬರವಣಿಗೆ ಅಭಿಯಾನ ಆಯೋಜಿಸಲಾಗಿದೆ ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಕರ್ನಾಟಕ ಅಂಚೆ ವೃತ್ತದ ವತಿಯಿಂದ ರಾಜ್ಯದ ಎಲ್ಲ ನಾಗರಿಕರು, ವಿಶೇಷವಾಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಆಹ್ವಾನ ನೀಡಲಾಗಿದೆ.
ಸ್ಪರ್ಧೆಯ ವಿಷಯ ಮತ್ತು ಭಾಷೆ:
ಈ ವರ್ಷದ ಸ್ಪರ್ಧೆಯ ವಿಷಯ “ತಾಯಿ ಭೂಮಿಗೆ ಒಂದು ಪತ್ರ: ಪ್ರಕೃತಿಯನ್ನು ರಕ್ಷಿಸುವ ನನ್ನ ಪ್ರತಿಜ್ಞೆ” ಎಂಬುದಾಗಿದೆ.
ಪತ್ರವನ್ನು ಕನ್ನಡ, ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಕೈಬರಹದಲ್ಲಿ ಮಾತ್ರ ಬರೆಯಬೇಕು.
ಸ್ಪರ್ಧೆಯ ವಿಭಾಗಗಳು:
ಸ್ಪರ್ಧೆಯನ್ನು ಎರಡು ವಯೋಮಿತಿ ವಿಭಾಗಗಳಾಗಿ ವಿಂಗಡಿಸಲಾಗಿದೆ.
-
18 ವರ್ಷ ವಯಸ್ಸಿನವರೆಗೆ: ಇನ್ಲ್ಯಾಂಡ್ ಲೆಟರ್ ಕಾರ್ಡ್ ಹಾಗೂ ಲಕೋಟೆ ವಿಭಾಗ.
-
18 ವರ್ಷ ಮೇಲ್ಪಟ್ಟವರು: ಇನ್ಲ್ಯಾಂಡ್ ಲೆಟರ್ ಕಾರ್ಡ್ ಹಾಗೂ ಲಕೋಟೆ ವಿಭಾಗ.
ಪದಗಳ ಮಿತಿ:
ಲಕೋಟೆ ವಿಭಾಗದಲ್ಲಿ ಎ4 ಅಳತೆಯ ಬಿಳಿ ಹಾಳೆಯ ಮೇಲೆ ಗರಿಷ್ಠ 1,000 ಪದಗಳ ಮಿತಿಯಲ್ಲಿ ಪತ್ರ ಬರೆಯಬೇಕು. ಇನ್ಲ್ಯಾಂಡ್ ಲೆಟರ್ ಕಾರ್ಡ್ ವಿಭಾಗದಲ್ಲಿ ಗರಿಷ್ಠ 500 ಪದಗಳ ಮಿತಿ ನಿಗದಿಪಡಿಸಲಾಗಿದೆ.
ವಯಸ್ಸಿನ ಸ್ವಯಂ ದೃಢೀಕರಣ ಕಡ್ಡಾಯ:
ಭಾಗವಹಿಸುವವರು ಪತ್ರದ ಮೇಲೆ ‘01/01/2026ರಂದು ನನಗೆ 18 ವರ್ಷಕ್ಕಿಂತ ಕಡಿಮೆ/ಹೆಚ್ಚು ವಯಸ್ಸು ಇದೆ ಎಂದು ಪ್ರಮಾಣೀಕರಿಸುತ್ತೇನೆ’ ಎಂದು ಕಡ್ಡಾಯವಾಗಿ ನಮೂದಿಸಬೇಕು.
ನಗದು ಬಹುಮಾನ:
ಪ್ರತಿ ವಿಭಾಗದಲ್ಲೂ ವೃತ್ತ ಮಟ್ಟ (ರಾಜ್ಯ ಮಟ್ಟ) ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕ ನಗದು ಬಹುಮಾನಗಳನ್ನು ನೀಡಲಾಗುತ್ತದೆ.
ಬಹುಮಾನವೃತ್ತ ಮಟ್ಟರಾಷ್ಟ್ರೀಯ ಮಟ್ಟಪ್ರಥಮ₹25,000₹50,000ದ್ವಿತೀಯ₹10,000₹25,000ತೃತೀಯ₹5,000₹10,000
ಪತ್ರ ಕಳುಹಿಸಲು ಕೊನೆಯ ದಿನಾಂಕ:
ಪತ್ರಗಳನ್ನು ಅಂಚೆ ಮೂಲಕ ಕಳುಹಿಸಲು ಅಕ್ಟೋಬರ್ 31, 2026 ಕೊನೆಯ ದಿನವಾಗಿದೆ. ಈ ದಿನಾಂಕದ ನಂತರ ಸ್ವೀಕರಿಸಲಾದ ಪತ್ರಗಳನ್ನು ಪರಿಗಣಿಸಲಾಗುವುದಿಲ್ಲ.
ಪತ್ರದ ಮೇಲೆ ಕಡ್ಡಾಯವಾಗಿ “Entry for Dhai Akhar 2026-27” ಎಂದು ನಮೂದಿಸಿ, ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
ಅಂಚೆ ಅಧೀಕ್ಷಕರು,
ಬಳ್ಳಾರಿ ವಿಭಾಗ,
ಬಳ್ಳಾರಿ–583102.
ಸ್ಪರ್ಧಿಗಳು ಪತ್ರಗಳನ್ನು ಅಂಚೆ ಕಚೇರಿಯ ಪ್ರತ್ಯೇಕ ಅಂಚೆ ಪೆಟ್ಟಿಗೆಯಲ್ಲಿ ಹಾಕಬಹುದು ಅಥವಾ ಸ್ಥಳೀಯ ಅಂಚೆ ಕಚೇರಿಯ ಪೋಸ್ಟ್ಮಾಸ್ಟರ್ ಅವರಿಗೆ ನೇರವಾಗಿ ಹಸ್ತಾಂತರಿಸಬಹುದು. ವೃತ್ತ ಮಟ್ಟದ ಫಲಿತಾಂಶಗಳನ್ನು ಡಿಸೆಂಬರ್ 31, 2026ರೊಳಗೆ ಅಂಚೆ ಇಲಾಖೆಯ ಅಧಿಕೃತ ಜಾಲತಾಣ karnatakapost.gov.in ನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

