ಉಡುಪಿ: ಸಾರ್ವಜನಿಕ ಸ್ಥಳದಲ್ಲೇ ಯುವ ಜೋಡಿಯೊಂದು ಕಿಸ್ಸಿಂಗ್, ಸರಸ-ಸಲ್ಲಾಪದಲ್ಲಿ ತೊಡಗಿ ಅಸಭ್ಯವಾಗಿ ವರ್ತಿಸಿರುವ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲ ಶಿಕ್ಷಣ ಕ್ಷೇತ್ರದ ಹಬ್ ಆಗಿದ್ದು, ದೇಶದ ಮೂಲೆ ಮೂಲೆಗಳಿಂದ ಶಿಕ್ಷಣಕ್ಕಾಗಿ ಮಣಿಪಾಲಕ್ಕೆ ಬರುತ್ತಾರೆ. ಆದರೆ ತಡರಾತ್ರಿ ಯುವ ಪ್ರೇಮಿಗಳಿಬ್ಬರು ರಸ್ತೆಯಲ್ಲಿಯೇ ಪರಸ್ಪರ ಚುಂಬಿಸುತ್ತಾ ಸರಸ-ಸಲ್ಲಾಪದಲ್ಲಿ ತೊಡಗಿದ್ದು, ಅದೇ ಮಾರ್ಗದಲ್ಲಿ ಓಡಾಡುತ್ತಿದ್ದ ಜನರಲ್ಲಿ ಮುಜುಗರವನ್ನುಂಟು ಮಾಡಿದ್ದಾರೆ.
ಇದರಿಂದ ಸ್ಥಳೀಯರು ಯುವಜೋಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಯುವ ಜೋಡಿ ಸ್ಥಳೀಯರೊಂದಿಗೆ ವಾಗ್ವಾದಕ್ಕೆ ಇಳಿದಿದೆ. ಯುವ ಜೋಡಿಯ ವಿಕೃತಿಯನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೊಲೀಸರು ಇಂತಹ ಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಪಬ್ಲಿಕ್ ನಲ್ಲಿ ಯುವ ಪ್ರೇಮಿಗಳ ಅಸಭ್ಯವರ್ತನೆ ನಿಲ್ಲಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

