HomeKarnatakaBIG NEWS: ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ: ಹಸುವಿನ ಬಾಲ ಕತ್ತರಿಸಿದ ದುಷ್ಕರ್ಮಿ

BIG NEWS: ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ: ಹಸುವಿನ ಬಾಲ ಕತ್ತರಿಸಿದ ದುಷ್ಕರ್ಮಿ

ಉಡುಪಿ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಘಟನೆ, ಹೊನ್ನವರದಲ್ಲಿ ಗರ್ಭ ಧರಿಸಿದ್ದ ಹಸು ಕಡಿದ ಘಟನೆ ಬಳಿಕ ಇದೀಗ ಉಡುಪಿ ಜಿಲ್ಲೆಯಲ್ಲಿ ದುಷ್ಕರ್ಮಿಯೊಬ್ಬ ಕರುವಿನ ಬಾಲ ಕತ್ತರಿಸಿರುವ ಮತ್ತೊಂದು ಅಮಾನವೀಯ ಘಟನೆ ನಡೆದಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಗುಂಡ್ಮಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಸೇಲ್ಸ್ ಮ್ಯಾನ್ ಸೋಗಿನಲ್ಲಿ ಬಂದು ಕರುವಿನ ಬಾಲ ಕತ್ತರಿಸಿದ್ದಾನೆ. ಸೇಲ್ಸ್ ಮ್ಯಾಅನ್ ಸೋಗಿನಲ್ಲಿ ಮನೆಗೆ ಬಂದ ವ್ಯಕ್ತಿ ಮನೆಯವರನ್ನು ಕರೆದು ಕೆಲ ವಸ್ತುಗಳನ್ನು ಖರೀದಿಸುವಂತೆ ಹೇಳಿದ್ದಾನೆ. ಈ ವೇಳೆ ಮನೆಯ ಮಹಿಳೆ ವಸ್ತುಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದು, ತಮಗೆ ಬೇಡ ಎಂದು ಹೇಳಿ ಬಾಗಿಲು ಹಾಕಿದ್ದಾಳೆ. ಮಹಿಳೆ ಬಾಗಿಲು ಹಾಕಿ ಹೋಗುತ್ತಿದ್ದಂತೆ ದುರುಳ ಮನೆ ಬಳಿ ಇದ್ದ ಎರಡು ವರ್ಷದ ಕರುವಿನ ಬಾಲವನ್ನು ಕತ್ತರಿಸಿ ವಿಕೃತಿ ಮೆರೆದು ಪರಾರಿಯಾಗಿದ್ದಾನೆ.

ಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಘಟನೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular