ಜೈಪುರ: ಸಿಇಒ ಹುಟ್ಟುಹಬ್ದವೆಂದು ಕರೆದೊಯ್ದು ಮಹಿಳಾ ಐಟಿ ಉದ್ಯೋಗಿ ಮೇಲೆ ಸಿಸಿಒ ಸೇರಿಇ ಮೂವರು ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ.
ಉದಯಪುರದಲ್ಲಿ ಕಾರಿನಲ್ಲಿಯೇ ಮಹಿಳೆಯ ಮೇಲೆ ಕಂಪನಿ ಸಿಇಒ ಸೇರಿ ಮೂವರು ಅಟ್ಟಹಾಸ ಮೆರೆದಿದ್ದಾರೆ. ಜಿಕೆ ಎಂ ಸಿಇಒ ಜಿತೇಶ್ ಪ್ರಕಾಶ್ ಸಿಸೋಡಿಯಾ ಹಾಗೂ ಇನ್ನಿಬ್ಬಿರ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ. ಕಾರಿನ ಡ್ಯಾಶ್ ಕ್ಯಾಮ್ ಸಾಕ್ಷ್ಯ ಹಾಗೂ ರೆಕಾರ್ಡ್ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಂಪನಿ ಸಿಇಒ ಜಿತೇಶ್ ಪ್ರಕಾಶ್ ಸಿಸೋಡಿಯಾ ಹುಟ್ಟುಹಬ್ಬವಿದ್ದುದರಿಂದ ಡಿಸೆಂಬರ್ 20ರಂದು ಸಂತ್ರಸ್ತೆ ಉದಯಪುರದ ಶೋಬಾಗ್ ಪುರ ಹೋಟೆಲ್ ನಲ್ಲಿ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಪಾರ್ಟಿ ಬೆಳಗಿನ ಜಾವ 1:30ರವರೆಗೂ ನಡೆದಿದೆ. ಮಹಿಳೆ ಸೇರಿ ಎಲ್ಲರೂ ಮದ್ಯಸೇವನೆ ಮಾಡಿದ್ದರು. ಜಿತೇಶ್ ಹಾಗೂ ಗೌರವ್ ಸಿರೋಹಿ ಪಾರ್ಟಿಯಿಂದ ಹೊರಡಲು ಸಿದ್ಧರಾದಾಗ ಅವರ ಆರೋಗ್ಯ ಹದಗೆಡಲಾರಂಭಿಸಿತ್ತು. ಗೌರವ್ ಕಾರು ಚಲಾಯಿಸುತ್ತಿದ್ದರು. ಸಂರಸ್ತ ಮಹಿಳೆ, ಜಿತೇಶ್ ಹಾಗೂ ಇನ್ನೋರ್ವ ಕಾರಿನ ಹಿಂಭಾಗದಲ್ಲಿ ಕುಳಿತಿದ್ದರು. ಮಾರ್ಗಮಧ್ಯೆ ಕಾರನ್ನು ಅಂಗಡಿಯೊಂದರ ಬಳಿ ನಿಲ್ಲಿಸಿದ್ದರು. ಈ ವೇಳೆ ಸಿಗರೇಟ್ ಹೋಲುವಂತಹ ವಸ್ತುವೊಂದನ್ನು ಜಿತೇಶ್ ಖರೀದಿಸಿದ್ದಾರೆ ಅದನ್ನು ಸೇವಿಸುತ್ತಿದಂತೆ ಮಹಿಳೆಗೆ ಪ್ರಜ್ಞೆ ತಪ್ಪಿದೆ.
ಪ್ರಜ್ಞೆ ಮರಳಿದಾಗ ಮಹಿಳೆಯ ಸ್ಥಿತಿ ಗಂಭೀರ ಹಾಗೂ ಭಯಾನಕವಾಗಿತ್ತು. ಮೈತುಂಬ ಅಗಾಯಗಳಾಗಿದ್ದವು, ಒಳ ಉಡುಪಿ, ಸಾಕ್ಸ್ ಗಳು ಇರಲಿಲ್ಲ. ಮೈಮೇಲೆ ಇದ್ದ ಆಭರಣಗಳು ನಾಪತ್ತೆಯಾಗಿತ್ತು. ಘಟನೆ ಬಳಿಕ ಮಹಿಳೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಕೆಯ ಮೇಲೆ ಅತ್ಯಾಚಾರವಾಗಿರುವುದು ದೃಢಪಟ್ಟಿದೆ. ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಸಿಇಒ ಜಿತೇಶ್, ಗೌರವ್ ಸೇರಿ ಮೂವರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.

