HomeIndiaಮಾರ್ಚ್ ಅಂತ್ಯಕ್ಕೆ ಬರಲಿವೆ 2 ವಂದೇ ಭಾರತ್ ಸ್ಲೀಪರ್ ರೈಲು, ಯಾವ ಮಾರ್ಗದಲ್ಲಿ ಸಂಚಾರ?

ಮಾರ್ಚ್ ಅಂತ್ಯಕ್ಕೆ ಬರಲಿವೆ 2 ವಂದೇ ಭಾರತ್ ಸ್ಲೀಪರ್ ರೈಲು, ಯಾವ ಮಾರ್ಗದಲ್ಲಿ ಸಂಚಾರ?

ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಜನವರಿಯಲ್ಲಿ ಪ್ರಾರಂಭವಾಗಿದೆ. ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಈಗ ಇನ್ನಷ್ಟು ರೈಲುಗಳ ಸಂಚಾರಕ್ಕೆ ಭಾರತೀಯ ರೈಲ್ವೆ ಯೋಜನೆ ರೂಪಿಸುತ್ತಿದೆ. ಇದಕ್ಕಾಗಿ ರೈಲು ಬೋಗಿಗಳು ಆಗಮಿಸಬೇಕಿದೆ.

ಮಾಹಿತಿಗಳ ಪ್ರಕಾರ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್‌) ಮಾರ್ಚ್ ಅಂತ್ಯಕ್ಕೆ 16 ಬೋಗಿಯನ್ನು ಹೊಂದಿರುವ 2 ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ನೀಡಲಿದೆ. ಆದ್ದರಿಂದ ಎರಡು ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲು ರೈಲ್ವೆ ಇಲಾಖೆಗೆ ಸಹಾಯಕವಾಗಲಿದೆ.

ಪ್ರಸ್ತುತ ಹೌರಾ-ಗೌಹಾತಿ ನಡುವೆ 2 ವಂದೇ ಭಾರತ್ ಸ್ಲೀಪರ್ ರೈಲುಗಳು ಸಂಚಾರವನ್ನು ನಡೆಸುತ್ತಿವೆ. ಇದು ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸೇವೆಯಾಗಿದೆ. ಈಗ ಇನ್ನೂ ಎರಡು ರೈಲುಗಳು ಮಾರ್ಚ್ ಅಂತ್ಯಕ್ಕೆ ಸಿಗಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಮಾರ್ಚ್ ಅಂತ್ಯಕ್ಕೆ 2 ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಹೊರತರಲು ಯೋಜನೆ ರೂಪಿಸುತ್ತಿದೆ. ಐಸಿಎಫ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂ.ಜಿ. ಶಂಕರ್, “ಏಪ್ರಿಲ್‌ಗೂ ಮೊದಲು ಇನ್ನೂ 2 ರೈಲುಗಳನ್ನು ಹೊರತರಲಿದ್ದೇವೆ” ಎಂದು ಖಚಿತಪಡಿಸಿದ್ದಾರೆ.

ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ಐಸಿಎಫ್ ವಿನ್ಯಾಸಗೊಳಿಸಿದ್ದು, ಬಿಇಎಮ್‌ಎಲ್‌ನಲ್ಲಿ ಬೋಗಿ ತಯಾರಿಸಲಾಗಿದೆ. ಇದು 16 ಬೋಗಿಗಳನ್ನು ಒಳಗೊಂಡಿದ್ದು, ಅದರಲ್ಲಿ 11 ಥರ್ಡ್ ಎಸಿ, 4 ಸೆಕೆಂಡ್ ಎಸಿ ಮತ್ತು 1 ಫಸ್ಟ್ ಎಸಿ ಬೋಗಿಗಳಿವೆ. ಈ ರೈಲಿಗೆ ಜನವರಿ 17, 2026 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.

ಎಷ್ಟು ರೈಲು ತಯಾರಿಕೆ?: ಐಸಿಎಫ್ 24 ಬೋಗಿಗಳ ಸಾಮರ್ಥ್ಯದ 50 ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ತಯಾರಿಸಲಿದೆ. ಈ ಮಾದರಿಯ ಮೊದಲ ರೇಕ್‌ನ ಮೂಲ ಮಾದರಿ 2026ರ ಅಂತ್ಯದ ವೇಳೆಗೆ ಸಿದ್ಧಗೊಳ್ಳುವ ನಿರೀಕ್ಷೆಯಿದೆ.

ಈ ಹೊಸ ರೈಲುಗಳು ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಮತ್ತು ಉತ್ತಮ ಆನ್‌ಬೋರ್ಡ್ ಸೌಲಭ್ಯಗಳನ್ನು ಹೊಂದಿರಲಿವೆ. ಒಟ್ಟು 24 ಬೋಗಿಗಳ ರೈಲಿನಲ್ಲಿ, 17 ಥರ್ಡ್ ಎಸಿ, 5 ಸೆಕೆಂಡ್ ಎಸಿ ಮತ್ತು 1 ಫಸ್ಟ್ ಎಸಿ ಕೋಚ್‌ ಒಳಗೊಂಡಿರುತ್ತದೆ.

24 ಬೋಗಿಗಳ ವಂದೇ ಭಾರತ್ ಸ್ಲೀಪರ್ ರೈಲು 1,224 ಪ್ರಯಾಣಿಕರ ಸಾಮರ್ಥ್ಯವನ್ನು ಮತ್ತು ಒಂದು ಎಸಿ ಪ್ಯಾಂಟ್ರಿ ಕಾರ್ (ಅಡುಗೆ ಕೋಣೆ) ಹೊಂದಿರುತ್ತದೆ. ಆದರೆ ಸದ್ಯಕ್ಕೆ 16 ಬೋಗಿಯ ರೈಲುಗಳು ದೇಶದಲ್ಲಿ ಸಂಚಾರವನ್ನು ನಡೆಸುತ್ತಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular