HomeIndiaBREAKING: ಮಣಿಪುರದಲ್ಲಿ ಇಬ್ಬರು ವಲಸೆ ಕಾರ್ಮಿಕರ ಹತ್ಯೆ, ಉಗ್ರನ ಹೊಡೆದುರುಳಿಸಿದ ಪೊಲೀಸರು

BREAKING: ಮಣಿಪುರದಲ್ಲಿ ಇಬ್ಬರು ವಲಸೆ ಕಾರ್ಮಿಕರ ಹತ್ಯೆ, ಉಗ್ರನ ಹೊಡೆದುರುಳಿಸಿದ ಪೊಲೀಸರು

ಗುವಾಹಟಿ: ಮಣಿಪುರದಲ್ಲಿ ಅಪರಿಚಿತ ಬಂದೂಕುಧಾರಿಗಳು ಬಿಹಾರದ ಇಬ್ಬರು ವಲಸೆ ಕಾರ್ಮಿಕರನ್ನು ಕೊಂದಿದ್ದಾರೆ,

ಸುನಾಲಾಲ್ ಕುಮಾರ್(18) ಮತ್ತು ದಶರತ್ ಕುಮಾರ್(17) ಮೃತ ಕಾರ್ಮಿಕರು ಎಂದು ಗುರುತಿಸಲಾಗಿದೆ. ಅವರು ಕಾಕ್ಚಿಂಗ್ ಜಿಲ್ಲೆಯ ಕೈರಾಕ್‌ನಲ್ಲಿ ಸಂಜೆ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇಬ್ಬರೂ ಬಿಹಾರದ ಗೋಪಾಲಗಂಜ್ ಜಿಲ್ಲೆಯ ರಾಜವಾಹಿ ಗ್ರಾಮದ ನಿವಾಸಿಗಳಾಗಿದ್ದರು.

ಕಳೆದ ಮೇ 3 ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಈ ಹತ್ಯೆಗಳು ವಲಸೆ ಕಾರ್ಮಿಕರ ಮೇಲೆ ನಡೆದ ಎರಡನೇ ಮಾರಣಾಂತಿಕ ದಾಳಿಯಾಗಿದೆ. ಈ ವರ್ಷದ ಮೇ ತಿಂಗಳಲ್ಲಿ, ಅಪರಿಚಿತ ದುಷ್ಕರ್ಮಿಗಳು ಇಂಫಾಲ್‌ನಲ್ಲಿ ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯ 41 ವರ್ಷದ ವಲಸೆ ಕಾರ್ಮಿಕನನ್ನು ಗುಂಡಿಕ್ಕಿ ಕೊಂದು ಇಬ್ಬರು ಸಹ ಕಾರ್ಮಿಕರನ್ನು ಗಾಯಗೊಳಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶನಿವಾರ ನಡೆದ ಗುಂಡಿನ ಚಕಮಕಿಯ ನಂತರ ಪೊಲೀಸರು 18 ವರ್ಷದ ಉಗ್ರಗಾಮಿಯನ್ನು ಹೊಡೆದುರುಳಿಸಿದ್ದಾರೆ.

ನಿಷೇಧಿತ ಇಂಫಾಲ್ ಕಣಿವೆ ಮೂಲದ PREPAK ಗುಂಪಿನ ಏಳು ಶಸ್ತ್ರಸಜ್ಜಿತ ಉಗ್ರರು ಪೊಲೀಸ್ ಕಮಾಂಡೋಗಳ ತಂಡದ ಮೇಲೆ ಗುಂಡು ಹಾರಿಸಿದ್ದಾರೆ. ತೌಬಲ್ ಜಿಲ್ಲೆಯಲ್ಲಿ ಶನಿವಾರ ಮಣಿಪುರ ಪೊಲೀಸ್ ಕಮಾಂಡೋಸ್ ಮತ್ತು ಉಗ್ರಗಾಮಿ ಗುಂಪಿನ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಶಸ್ತ್ರಸಜ್ಜಿತ ಉಗ್ರನೊಬ್ಬ ಹತನಾಗಿದ್ದು, ಇತರ ಆರು ಮಂದಿಯನ್ನು ಬಂಧಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular