HomeCrimeShocking News: ಕುಡಿದ ಅಮಲಿನಲ್ಲಿ ಅರೆಬೆಂದ ಮೃತದೇಹ ತಿಂದ ಪಾಪಿ....!

Shocking News: ಕುಡಿದ ಅಮಲಿನಲ್ಲಿ ಅರೆಬೆಂದ ಮೃತದೇಹ ತಿಂದ ಪಾಪಿ….!

ಪ್ರಾಣಿ ಮಾಂಸವನ್ನು ತಿನ್ನುವವರು ಅನೇಕರಿದ್ದಾರೆ. ಆದರೆ ಇಲ್ಲಿಬ್ಬರು ಕುಡುಕರು ಅರೆಬೆಂದ ಮೃತದೇಹವನ್ನೇ ತಿಂದಿದ್ದು ಇಬ್ಬರನ್ನು ಒಡಿಶಾದ ಪೊಲೀಸರು ಬಂಧಿಸಿದ್ದಾರೆ. ಮಯೂರ್​ಭಂಜ್​ ಜಿಲ್ಲೆಯಲ್ಲಿ ಮೃತದೇಹವೊಂದರ ಅಂತ್ಯಕ್ರಿಯೆ ನಡೆದ ಬಳಿಕ ಅರ್ಧ ಸುಟ್ಟಿದ್ದ ಮನುಷ್ಯನ ಶವದಲ್ಲಿದ್ದ ಮಾಂಸವನ್ನು ಇಬ್ಬರು ತಿನ್ನುತ್ತಿರೊದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬುಡಕಟ್ಟು ಗ್ರಾಮವಾದ ಬಂಧಸಾಹಿ ಎಂಬಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದೆ. ಬಂಧಿತ ಆರೋಪಿಗಳನ್ನು ಸುಂದರ್​ ಮೋಹನ್​ ಸಿಂಗ್​ ಹಾಗೂ ನರೇಂದ್ರ ಸಿಂಗ್​ ಎಂದು ಗುರುತಿಸಲಾಗಿದೆ.

ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ, ಬಂಧಸಾಹಿ ಗ್ರಾಮದ ಮಧುಸ್ಮಿತಾ ಸಿಂಗ್ ಎಂಬವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಆಕೆಯ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಆಕೆಯ ಕುಟುಂಬ ಸದಸ್ಯರು ಅಂತಿಮ ವಿಧಿವಿಧಾನಗಳನ್ನು ನಡೆಸಲು ಶವವನ್ನು ಸ್ಮಶಾನಕ್ಕೆ ಕೊಂಡೊಯ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ, ಶವಸಂಸ್ಕಾರದ ವೇಳೆ ಅದೇ ಜಾಗದಲ್ಲಿದ್ದ ಈ ಇಬ್ಬರು ಕುಡುಕರು, ಮಧುಸ್ಮಿತಾ ದೇಹದ ಒಂದು ಭಾಗವನ್ನು ಮೂರು ತುಂಡುಗಳಾಗಿ ಕತ್ತರಿಸಿದ್ದಾರೆ. ಒಂದು ತುಂಡನ್ನು ತಮ್ಮ ಬಳಿ ಇಟ್ಟುಕೊಂಡು ಇತರೆ ಭಾಗವನ್ನು ಬೆಂಕಿಯಲ್ಲಿ ಕಾಯಿಸಿದರು. ಕತ್ತರಿಸಿದ ದೇಹವನ್ನು ತಿನ್ನುತ್ತಿದ್ದ ವೇಳೆ ಮೃತ ಮಧುಸ್ಮಿತಾ ಚಿಕ್ಕಪ್ಪ ಈ ದೃಶ್ಯವನ್ನು ನೋಡಿದ್ದಾರೆ.

ಈ ಮಾಂಸವನ್ನು ನೀವು ಏನು ಮಾಡುತ್ತೀರಿ ಎಂದು ಕೇಳಿದ್ದಾರೆ. ಇದಕ್ಕೆ ಅವರು ನಿಮಗೆ ವಾಮಾಚಾರದ ಬಗ್ಗೆ ಗೊತ್ತೇ ಎಂದು ಮರು ಪ್ರಶ್ನೆ ಮಾಡಿದ್ದಾರೆ. ಬಳಿಕ ಅರೆಬೆಂದ ಮಾಂಸವನ್ನು ತಿನ್ನಲು ಆರಂಭಿಸಿದ್ದಾರೆ.

ಇದರಿಂದ ಕೋಪಗೊಂಡ ಗ್ರಾಮಸ್ಥರು ಈ ಅಮಾನವೀಯ ಕೃತ್ಯ ಎಸಗಿದ ಇಬ್ಬರಿಗೂ ಥಳಿಸಿದ್ದಾರೆ ಹಾಗೂ ಸ್ಥಳೀಯ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular