HomeKarnatakaಕರ್ತವ್ಯದ ವೇಳೆ ಮಲಗಿದ್ದ ಇಬ್ಬರು ಕಾನ್ ಸ್ಟೇಬಲ್ ಗಳ ಅಮಾನತು!

ಕರ್ತವ್ಯದ ವೇಳೆ ಮಲಗಿದ್ದ ಇಬ್ಬರು ಕಾನ್ ಸ್ಟೇಬಲ್ ಗಳ ಅಮಾನತು!

ಬೆಂಗಳೂರು : ಬೆಂಗಳೂರಿನ ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯದ ವೇಳೆ ಮಲಗಿದ್ದ ಆರೋಪದ ಮೇಲೆ ಇಬ್ಬರು ಕಾನ್ ಸ್ಟೇಬಲ್ ಗಳನ್ನು ಡಿಸಿಪಿ ಎಸ್.ಗಿರೀಶ್ ಅಮಾನತು ಮಾಡಿದ್ದಾರೆ.

ರಾತ್ರಿ ಗಸ್ತಿನಲ್ಲಿದ್ದ ಡಿಸಿಎಪಿ ಎಸ್. ಗಿರೀಶ್ ಅವರು ಠಾಣೆಗೆ ಭೇಟಿ ನೀಡಿದ್ದ ವೇಳೆ ನಿದ್ರೆ ಮಾಡುತ್ತಿದ್ದ ಆರೋಪ ಮೇಲೆ ಮಹದೇವಪುರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಸೇರಿ ಇಬ್ಬರನ್ನು ಅಮಾನತು ಮಾಡಿ ಡಿಸಿಪಿ ಎಸ್. ಗಿರೀಶ್ ಅವರು ಆದೇಶ ಹೊರಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಾದೇವಪುರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಎ.ಎನ್. ಜಯರಾಮ್ ಹಾಗೂ ಕಾನ್ ಸ್ಟೇಬಲ್ ಈರಪ್ಪ ಉಂಡು ಅಮಾನತುಗೊಂಡಿದ್ದು, ಜು. 9 ರ ರಾತ್ರಿ ಠಾಣೆಯ ಎಸ್ ಎಚ್ ಒ ಪ್ರಭಾರ ಹೊತ್ತಿದ್ದ ಹೆಚ್.ಸಿ. ಜಯರಾಮ್ ಹಾಗೂ ಸೆಂಟ್ರಿಯಾಗಿ ಕಾನ್ ಸ್ಟೇಬಲ್ ಈರಪ್ಪ ಕರ್ತವ್ಯದಲ್ಲಿದ್ದರು. ಆಗ ರಾತ್ರಿ ಗಸ್ತಿನಲ್ಲಿದ್ದ ಸಿಎಆರ್ ಡಿಸಿಪಿ ಅವರು ಮಹದೇವಪುರ ಠಾಣೆಗೆ ಭೇಟಿ ನೀಡಿದ್ದ ವೇಳೆ ಇಬ್ಬರುಉ ನಿದ್ರೆ ಮಾಡುತ್ತಿದ್ದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular