HomeIndiaBREAKING: ತಮಿಳುನಾಡಿನ ರಾಜ್ಯಪಾಲರ ವಿರುದ್ಧ ಸಿಡಿದೆದ್ದ ಟಿವಿಕೆ ಕಾರ್ಯಕರ್ತರು: ವಿಷ ಸೇವಿಸಲು ಯತ್ನಿಸಿದ ವಿಜಯ್ ಬೆಂಬಲಿಗ;...

BREAKING: ತಮಿಳುನಾಡಿನ ರಾಜ್ಯಪಾಲರ ವಿರುದ್ಧ ಸಿಡಿದೆದ್ದ ಟಿವಿಕೆ ಕಾರ್ಯಕರ್ತರು: ವಿಷ ಸೇವಿಸಲು ಯತ್ನಿಸಿದ ವಿಜಯ್ ಬೆಂಬಲಿಗ; ಲೋಕಭವನದ ಮುಂದೆ ಪ್ರತಿಭಟನೆ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಬಹುಮತ ಕೊರತೆ ಇರುವುದರಿಂದ ಸರ್ಕಾರ ರಚನೆಗೆ ಕಸರತ್ತು ನಡೆಸಿದೆ. ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ಘೋಷಿಸಿದ್ದರೂ ಇನ್ನೂ ಐದು ಶಾಸಕರ ಕೊರತೆಯಿದೆ.

ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ 108 ಸ್ಥಾನಗಳ ಅಗತ್ಯವಿದೆ. ಈಗಾಗಲೇ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ನೀಡಿದ್ದರೂ ಕೂಡ ಇನ್ನೂ ಐದು ಸ್ಥಾಗಳು ಬೇಕಿರುವುದರಿಂದ ಬಹುಮತ ಸಾಬೀತು ಪಡಿಸಿಯೇ ಸರ್ಕಾರ ರಚನೆ ಮಾಡುವಂತೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ವಿಜಯ್ ಗೆ ಸೂಚಿಸಿದ್ದಾರೆ. ಸರ್ಕಾರ ರಚನೆಗೆ ಅವಕಾಶ ಕೊಡಿ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವುದಾಗಿ ವಿಜಯ್ ಮನವಿಗೂ ಒಪ್ಪದ ರಾಜ್ಯಪಾಲರು 118 ಶಾಸಕರ ಸ್ಪಷ್ಟ ಬೆಂಬಲದೊಂದಿಗೆ ಸರ್ಕಾರ ರಚಿಸಲು ಸೂಚಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯಪಾಲರ ಈ ನಡೆ ವಿರುದ್ಧ ಟಿವಿಕೆ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಲೋಕಭವನದ ಎದುರು ಜಮಾವಣೆಗೊಂಡಿರುವ ಟಿವಿಕೆ ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ವಿಜಯ್ ಗೆ ಸರ್ಕಾರ ರಚನೆಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಟಿವಿಕೆ ಮುಖ್ಯಸ್ಥ ವಿಜಯ್ ಗೆ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನಿಸದೇ ವಿಳಂಬ ಮಾಡುತ್ತಿರುವುದಕ್ಕೆ ಬೇಸತ್ತ ಟಿವಿಕೆ ಕಾರ್ಯಕರ್ತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ರಾಜ್ಯಪಾಲರ ಧೋರಣೆ ಬಗ್ಗೆ ಕಿಡಿಕಾರಿದ್ದಾನೆ. ತಕ್ಷಣ ಪೊಲೀಸರು ಆತನ ಕೈಲಿದ್ದ ವಿಷದ ಬಾಟಲ್ ಕಸಿದುಕೊಂಡು ಆತನನ್ನು ರಕ್ಷಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular