HomeKarnatakaಹೋಟೆಲ್ ನಲ್ಲಿ ಅಪ್ರಾಪ್ತ ಹಿಂದೂ ಯುವತಿಯೊಂದಿಗೆ ಸಿಕ್ಕಿಬಿದ್ದ ಮುಸ್ಲಿಂ ಯುವಕ: ಪ್ರಶ್ನೆ ಮಾಡಿದ್ದ 8 ಬಜರಂಗದಳ...

ಹೋಟೆಲ್ ನಲ್ಲಿ ಅಪ್ರಾಪ್ತ ಹಿಂದೂ ಯುವತಿಯೊಂದಿಗೆ ಸಿಕ್ಕಿಬಿದ್ದ ಮುಸ್ಲಿಂ ಯುವಕ: ಪ್ರಶ್ನೆ ಮಾಡಿದ್ದ 8 ಬಜರಂಗದಳ ಕಾರ್ಯಕರ್ತರು ಅರೆಸ್ಟ್

ಕೊಪ್ಪಳ: ಹುಬ್ಬಳ್ಳಿ ಬಳಿಕ ಕೊಪ್ಪಳ ಜಿಲ್ಲೆಯಲ್ಲಿ ಸಾಲು ಸಾಲು ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇದೀಗ ಮತ್ತೊಂದು ಲವ್ ಜಿಹಾದ್ ಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದೆ. ಅಪ್ರಾಪ್ತ ಹಿಂದೂ ಯುವತಿ ಹಾಅಗೂ ಮುಸ್ಲಿಂ ಯುವಕ ಹೋಟೆಲ್‌ನಲ್ಲಿ ಸಿಕ್ಕಿಬಿದ್ದಿದ್ದು, ಇದನ್ನು ಪ್ರಶ್ನಿಸಿದ ಬಜರಂಗದಳ ಕಾರ್ಯಕರ್ತರನ್ನೇ ಬಂಧಿಸಿರುವ ಘಟನೆ ನಡೆದಿದೆ.

ಕೊಪ್ಪಳ ನಗರದ ಖಾಸಗಿ ಹೋಟೆಲ್‌ನಲ್ಲಿ ಅಪ್ರಾಪ್ತ ಹಿಂದೂ ಯುವತಿಯ ಜೊತೆಗೆ ಮುಸ್ಲಿಂ ಯುವಕ ಸಿಕ್ಕಿಬಿದ್ದಿದ್ದ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಭಜರಂಗದಳದ ಕಾರ್ಯಕರ್ತರು ಪ್ರಶ್ನೆ ಮಾಡಿದ್ದರು. ಈ ವೇಳೆ ಯುವಕ ಸಮೀರ್ ಹಾಗೂ ಭಜರಂಗದಳದ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಲಾಟೆ ವಿಕೋಪಕ್ಕೆ ತಿರುಗಿ ಹಲ್ಲೆ, ಹೊಡೆದಾಟವೂ ನಡೆದಿದೆ. ಈ ಸಂಬಂಧ ಸಮೀರ್ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ದೂರಿನನ್ವಯ ಪೊಲೀಸರು 8 ಜನ ಭಜರಂಗದಳದ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ವಿಷಯ ತಿಳಿದು್ ಹಿಂದೂ ಪರ ಸಂಘಟನೆ ಕಾರ್ಯಕರ್ತರು, ಠಾಣೆಗೆ ಆಗಮಿಸಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಅಲ್ಲದೇ ಅಪ್ರಾಪ್ತ ಹಿಂದೂ ಬಾಲಕಿಯನ್ನು ಪುಸಲಾಯಿಸಿ ಲವ್ ಜಿಹಾದ್‌ಗೆ ಯತ್ನಿಸಿದ ಆರೋಪಿ ಸಮೀರ್‌ನನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

ಘಟನೆಗಳ ಬಗ್ಗೆ ವಿಷಯ ತಿಳಿಯುತ್ತಲೇ ನಗರ ಪೊಲೀಸ್ ಠಾಣೆಗೆ ಎಸ್ಪಿ ಡಾಕ್ಟರ್ ರಾಮ್ ಅರಸಿದ್ದಿ ಭೇಟಿ ನೀಡಿದ್ದಾರೆ. ಬಳಿಕ ಬಿಜೆಪಿ ನಾಯಕರು ಹಾಗೂ ನೂರಾರು ಹಿಂದೂ ಕಾರ್ಯಕರ್ತರು ಸಹ ಠಾಣೆಗೆ ಆಗಮಿಸಿದ್ದರು. ಈ ವೇಳೆ ಠಾಣೆಯಲ್ಲಿ ಬಿಜೆಪಿ ನಾಯಕರು ಎಸ್ಪಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಲವ್ ಜಿಹಾದ್ ನಡೆದ್ರೂ ಪೊಲೀಸರು ವಿನಾಕಾರಣ ಹಿಂದೂ ಕಾರ್ಯಕರ್ತರಿಗೆ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಘಟನೆ ಬಗ್ಗೆ ದೂರು ಪ್ರತಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂಡುವರೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular