HomeKarnatakaತುಂಗಭದ್ರಾ ಡ್ಯಾಂ ಕ್ರಸ್ಟ್‌ಗೇಟ್ ರಿಪೇರಿ: ರಾಯಚೂರಿಗೆ ಕುಡಿಯುವ ನೀರಿನ ಸಮಸ್ಯೆ?

ತುಂಗಭದ್ರಾ ಡ್ಯಾಂ ಕ್ರಸ್ಟ್‌ಗೇಟ್ ರಿಪೇರಿ: ರಾಯಚೂರಿಗೆ ಕುಡಿಯುವ ನೀರಿನ ಸಮಸ್ಯೆ?

ತುಂಗಭದ್ರಾ ಡ್ಯಾಂನ ಎಲ್ಲಾ ಕ್ರಸ್ಟ್‌ಗೇಟ್‌ಗಳನ್ನು ಬದಲಾವಣೆ ಮಾಡಲಾಗುತ್ತಿದೆ. ಈ ಕಾಮಗಾರಿ ಹಿನ್ನಲೆಯಲ್ಲಿ 2ನೇ ಬೆಳೆಗೆ ಈ ಬಾರಿ ನೀರು ನೀಡುವುದಿಲ್ಲ ಎಂದು ಸರ್ಕಾರ ಘೋಷಣೆ ಮಾಡಿದೆ. ಆದರೆ ಕುಡಿಯುವ ನೀರು?. ರಾಯಚೂರು ತುಂಗಾ ಕಾಲುವೆ ನೀರು ಅವಲಂಭಿಸಿರುವ ಪ್ರಮುಖ ಜಿಲ್ಲೆಯಾಗಿದೆ.

ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ. ನೂತನ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆಯನ್ನು ನಡೆಸಿದರು. ಬೇಸಿಗೆ ಆರಂಭವಾಗುತ್ತಿರುವ ಹೊತ್ತಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕುರಿತು ಚರ್ಚಿಸಿದರು.

“ಬೇಸಿಗೆ ಆಗಮನದ ಹಿನ್ನೆಲೆಯಲ್ಲಿ ಈಗಾಗಲೇ ಬಿಸಿಲು ಏರಲಾರಂಭಿಸಿದೆ. ಆದ್ದರಿಂದ ರಾಯಚೂರು ಜಿಲ್ಲೆಯಲ್ಲಿ ಮುಂಬರುವ ಬೇಸಿಗೆಯ ಸಮಯದಲ್ಲಿ ಸಮರ್ಪಕವಾದ ಕುಡಿಯುವ ನೀರಿನ ವ್ಯವಸ್ಥೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು” ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಈ ಭಾಗಕ್ಕೆ ನೀರು ಪೂರೈಸುವ ತುಂಗಭದ್ರಾ ಡ್ಯಾಂ ಕ್ರಸ್ಟ್‌ಗೇಟ್ ಅಳವಡಿಕೆ ಕಾಮಗಾರಿ ಹಿನ್ನೆಲೆಯಲ್ಲಿ ತುಂಗಾ ಕಾಲುವೆ ನೀರು ಅವಲಂಭಿಸಿರುವ ಸಿಂಧನೂರು, ಮಾನ್ವಿ, ಮಸ್ಕಿ, ಸಿರವಾರ ಮತ್ತು ರಾಯಚೂರು ತಾಲೂಕುಗಳಲ್ಲಿ ನೀರಿನ ಲಭ್ಯತೆ ಪರಿಸ್ಥಿತಿಯ ಬಗ್ಗೆ ಈಗಿನಿಂದಲೇ ಗಮನ ಹರಿಸಬೇಕು” ಎಂದರು.

“ಈ ಭಾಗದ ಕೆರೆಗಳಲ್ಲಿ ಈಗಿರುವ ನೀರಿನ ಪ್ರಮಾಣ ಎಷ್ಟು?. ಕೆರೆಗಳನ್ನು ಯಾವ ವೇಳೆಗೆ ತುಂಬಿಸಬೇಕು? ಎನ್ನುವಂತಹ ಅಂಶಗಳ ಬಗ್ಗೆ ಆಯಾ ತಾಲೂಕಿನ ತಹಸೀಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪುರಸಭೆ, ನಗರಸಭೆ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳು ಕಾರ್ಯಯೋಜನೆ ರೂಪಿಸಬೇಕು” ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಕೆರೆಗಳ ನೀರಿನ ಲಭ್ಯತೆ: ಸಿಂಧನೂರ ತಾಲೂಕಿನಲ್ಲಿ ಒಟ್ಟು 155 ಕೆರೆಗಳಿದ್ದು, ಈ ಪೈಕಿ 151 ಕೆರೆಗಳು ಸಹ ಭಾಗಶಃ ತುಂಬಿವೆ. ಮಾರ್ಚ ಕೊನೆಯ ವಾರದಲ್ಲಿ ನಮಗೆ ನೀರಿನ ಅವಶ್ಯಕತೆ ಬರುತ್ತದೆ ಎಂದು ಸಿಂಧನೂರ ತಹಸೀಲ್ದಾರು ಸಭೆಗೆ ಮಾಹಿತಿ ನೀಡಿದರು.

ಮಾನವಿ ತಾಲೂಕಿನಲ್ಲಿ ಒಟ್ಟು 18 ಕೆರೆಗಳಿದ್ದು ಎಲ್ಲ ಕೆರೆಗಳು ಭಾಗಶಃ ತುಂಬಿದ್ದು ಇನ್ನು 45 ದಿನಗಳವರೆಗೆ ನಮಗೆ ನೀರಿನ ಸಮಸ್ಯೆಯಾಗುವುದಿಲ್ಲ ಎಂದು ಮಾನ್ವಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಮಾಹಿತಿ ಕೊಟ್ಟರು.

ಸಿರವಾರ ತಾಲೂಕಿನಲ್ಲಿ ಒಟ್ಟು 43 ಕೆರೆಗಳಿವೆ. ಈ ಪೈಕಿ 4 ಕೆರೆಗಳು ಪೂರ್ಣ ತುಂಬಿವೆ. ಇನ್ನು 39 ಕೆರೆಗಳು ಭಾಗಶಃ ತುಂಬಿವೆ. ಅತ್ತನೂರ ಮತ್ತು ಕಲ್ಲೂರ ಪಂಚಾಯಿತಿಯ ವ್ಯಾಪ್ತಿಯ ಕೆರೆಗಳಿಗೆ ನೀರಿನ ಕೊರತೆ ಇದೆ ಎಂದು ಸಿರವಾರ ತಾಲೂಕು ಅಧಿಕಾರಿಗಳು ಮಾಹಿತಿ ನೀಡಿದರು.

ಮಸ್ಕಿ ತಾಲೂಕಿನಲ್ಲಿ ಒಟ್ಟು 21 ಕೆರೆಗಳಿದ್ದು, ಈ ಪೈಕಿ 16 ಕೆರೆಗಳಲ್ಲಿ ನೀರು ಇದೆ. ಇನ್ನುಳಿದ ಕೆರೆಗಳಿಗೆ ನೀರಿನ ಕೊರತೆಯಾಗಿದೆ ಎಂದು ಮಸ್ಕಿ ಪುರಸಭೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ರಾಯಚೂರು ತಾಲೂಕಿನಲ್ಲಿ 15 ಕೆರೆಗಳಿದ್ದು ಎಲ್ಲ ಕೆರೆಗಳು ಭಾಗಶಃ ತುಂಬಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಮುದಗಲ್ ಪಟ್ಟಣದಲ್ಲಿ ಸದ್ಯಕ್ಕೆ ನೀರಿನ ತೊಂದರೆ ಇಲ್ಲ. ನಾರಾಯಾಣಪುರ ಡ್ಯಾಂನಿಂದ ಅವಶ್ಯಕ ಸಂದರ್ಭದಲ್ಲಿ ನೀರು ಪಡೆದುಕೊಳ್ಳವುದಾಗಿ ಅಲ್ಲಿನ ಪುರಸಭೆ ಅಧಿಕಾರಿಗಳು ಮಾಹಿತಿ ನೀಡಿದರು.

ರಾಯಚೂರು ನಗರ: “ರಾಯಚೂರು ನಗರ ಮತ್ತು ರಾಯಚೂರು ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿನ ಪರಿಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿಗಳು ಪಾಲಿಕೆಯ ಅಧಿಕಾರಿಗಳು ಮತ್ತು ತಹಸೀಲ್ದಾರ್ ಅವರಿಂದ ಮಾಹಿತಿ ಪಡೆದುಕೊಂಡರು. ಗಣೇಕಲ್ ಜಲಾಶಯ ಮತ್ತು ಅಲ್ಲಿನ ನೀರಿನ ನಿರ್ವಹಣೆ ಕುರಿತು ಗಮನ ಹರಿಸಿ ರಾಯಚೂರು ನಗರಕ್ಕೆ ಸಮರ್ಪಕ ಕುಡಿವ ನೀರಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು” ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

“2025-2026ನೇ ವರ್ಷದಲ್ಲಿ ಸಾಕಷ್ಟು ಮಳೆಯಾಗಿ ಅಂತರ್ಜಲ ಮಟ್ಟ ಸುಧಾರಿಸಿದೆ. ಹಾಗಾಗಿ ನೀರಿನ ಸಮಸ್ಯೆ ಕಂಡು ಬಂದಲ್ಲಿ ಬೋರವೆಲ್ ಕೊರೆಯಿಸಲು ಕ್ರಮ ವಹಿಸಬೇಕು. ಕೊಳವೆಬಾವಿ ವಿಫಲವಾದಲ್ಲಿ ಹತ್ತಿರದ ಖಾಸಗಿ ಬೋರವೆಲ್‌ಗಳಿಂದಲೇ ನೀರು ಪೂರೈಕೆಗೆ ಹೆಚ್ಚಿನ ಒತ್ತು ಕೊಡಬೇಕು. ಟ್ಯಾಂಕರ್ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬಾರದು” ಎಂದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular