HomeLatest NewsBREAKING: ಪ್ರೇಯಸಿಯ ಕಿಡ್ನ್ಯಾಪ್: ಚಾಕು ಇರಿತ: ಕಾರಿನ ಸಮೇತ ತನ್ನನ್ನೇ ತಾನು ಸ್ಫೋಟಿಸಿಕೊಂಡ ಪಾಗಲ್ ಪ್ರೇಮಿ

BREAKING: ಪ್ರೇಯಸಿಯ ಕಿಡ್ನ್ಯಾಪ್: ಚಾಕು ಇರಿತ: ಕಾರಿನ ಸಮೇತ ತನ್ನನ್ನೇ ತಾನು ಸ್ಫೋಟಿಸಿಕೊಂಡ ಪಾಗಲ್ ಪ್ರೇಮಿ

ತುಮಕೂರು: ಸಿನಿಮಾ ಕಥೆಯನ್ನೂ ಮೀರಿಸುವಂತಹ ಕ್ರೈಂ ಥಿಲ್ಲರ್ ಸ್ಟೋರಿ ತುಮಕೂರಿನಲ್ಲಿ ನಡೆದಿದೆ. ಯುವತಿಯನ್ನು ಕಿಡ್ನ್ಯಾಪ್ ಮಾಡಿದ್ದ ಪಾಗಲ್ ಪ್ರೇಮಿಯೊಬ್ಬ ಆಕೆಗೆ ಚಾಕುವಿನಿಂದ ಇರಿದು ಬಳಿಕ ಕಾರಿನ ಸಮೇತ ಸ್ಫೋಟಿಸಿಕೊಂಡಿರುವ ಘಟನೆ ಕಳ್ಳಂಬೆಳ್ಳ ಬಳಿ ನಡೆದಿದೆ.

ಯುವಕನೊಬ್ಬ ಕಾರಿನೊಖಗೆ ಕುಳಿತು ತನ್ನನ್ನು ತಾನೇ ಸ್ಫೋಟಿಸಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಅಲೂಕಿನ ಕಳ್ಳಂಬೆಳ್ಳ ಗ್ರಮದಲ್ಲಿ ನಡೆದಿದೆ. ನಾಗೇಂದ್ರ ಮೃತ ಯುವಕ. ನಾಗೇಂದ್ರ ಬೆಂಗಳೂರಿನಿಂದ ಕಾರಿನಲ್ಲಿ ಯುವತಿಯನ್ನು ಕರೆದೊಯ್ದಿದ್ದ, ಮಾರ್ಗ ಮಧ್ಯೆ ನಾಗೇಂದ್ರ ಹಾಗೂ ಯುವತಿ ನಡುವೆ ಜಗಳವಾಗಿತ್ತು. ಜಗಳದ ನಡುವೆ ಯುವತಿಗೆ ನಾಗೇಂದ್ರ ಚಾಕುವಿನಿಂದ ಇರಿದಿದ್ದಾನೆ. ಹಲ್ಲೆಗೊಳಗಾದ ಯುವತಿ ತಕ್ಷಣ ಕಾರಿನ ಡೋರ್ ತೆಗೆದು ಹೊರಗಿಳಿದಿದ್ದಾಳೆ.

ಯುವತಿ ಕಾರಿನಿಂದ ಇಳಿದಾಗ ಕಾರು ಚಾಲಕ ಸಹಾಯಕ್ಕೆ ತೆರಳಿದ್ದ. ಚಾಲಕ ಕಾರಿನಿಂದ ಇಳಿಯುತ್ತಿದ್ದಂತೆ ಕಾರಿನ ಡೋರ್ ಲಾಕ್ ಮಾಡಿಕೊಂಡ ನಾಗೇಂದ್ರ ಏಕಾಏಕಿ ಕಾರನ್ನು ಸೊಹೋಟಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಫೋಟದ ತೀವ್ರತೆಗೆ ಕಾರು ಧಗ ಧಗನೆ ಹೊತ್ತಿ ಉರಿದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಡಬಾಂಬ್ ಬಳಸಿ ಕಾರು ಸ್ಫೋಟಿಸಿರುವ ಶಂಕೆ ವ್ಯಕ್ತವಾಗಿದೆ. ನಾಗೇಂದ್ರ ಯುವತಿಯನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಬಂದಿದ್ದ ಎನ್ನಲಾಗಿದೆ. ರಾಷ್ಟ್ರೀಯ ಹೆದ್ದರಿ 48ರಲ್ಲಿ ಇಂದು ಮಧ್ಯಾಹ್ನ 1:30 ರ ಸುಮಾರಿಗೆ ಈ ಘಟನೆ ನಡೆದಿದೆ. ನಾಗೇಂದ್ರ ಕಾರಿನಲ್ಲೇ ಸುಟ್ಟು ಕರಕಲಾಗಿದ್ದಾನೆ.

ಮೃತ ನಾಗೇಂದ್ರ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದವನು ಎಂದು ತಿಳಿದುಬಂದಿದೆ. ಯುವತಿ ಬೆಂಗಳೂರಿನ ಪಿಜಿಯಲ್ಲಿ ವಾಸವಾಗಿದ್ದಳು. ಇಂದು ಬೆಳಿಗ್ಗೆ ಪಿಜಿ ಬಳಿ ಬಂದಿದ್ದ ನಾಗೇಂದ್ರ ಆಕೆಯನ್ನು ಕಿಡ್ನ್ಯಾಪ್ ಮಾಡಿ ಕಾರಿನಲ್ಲಿ ಕರೆದೊಯ್ದಿದ್ದ. ಯುವತಿ ಕಿಡ್ನ್ಯಾಪ್ ಆಗುತ್ತಿದ್ದಂತೆ ಆಕೆಯ ಸ್ನೇಹಿತೆ ಬೆಂಗಳೂರಿನ ಸಿದ್ದಾಪುರ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕೂಡ ತಕ್ಷಣ ಕಾರಿನ ಪತ್ತೆಗೆ ಮುಂದಾಗಿದ್ದರು.

ಘಟನಾ ಸ್ಥಳಕ್ಕೆ ತುಮಕೂರು ಎಸ್ ಪಿ ವೆಂಕಟ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಮತ್ತೊಂದು ಜೀವಂತ ಬಾಂಬ್ ಕೂಡ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular