HomeLatest NewsBIG NEWS: ತುಮಕೂರು ಲೋಕಸಭಾ ಕ್ಷೇತ್ರದಿಂದ ವಿ.ಸೋಮಣ್ಣ ಕಣಕ್ಕೆ? ಮಾಜಿ ಸಚಿವ ಹೇಳಿದ್ದೇನು?

BIG NEWS: ತುಮಕೂರು ಲೋಕಸಭಾ ಕ್ಷೇತ್ರದಿಂದ ವಿ.ಸೋಮಣ್ಣ ಕಣಕ್ಕೆ? ಮಾಜಿ ಸಚಿವ ಹೇಳಿದ್ದೇನು?

ಬೆಂಗಳೂರು: ಮಾಜಿ ಸಚಿವ ವಿ.ಸೋಮಣ್ಣ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದ್ದು, ಸೋಮಣ್ಣಗೆ ತುಮಕೂರು ಕ್ಷೇತ್ರದ ಟಿಕೆಟ್ ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿ.ಸೋಮಣ್ಣ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಬಂದ ಬಳಿಕ ಮಾತನಾಡುತ್ತೇನೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಸೋಮಣ್ಣ, ಸುಳ್ಳು ಹೇಳಲು ನನಗೆ ಬರಲ್ಲ. ಚುನಾವಣೆಗೆ ಈವರೆಗೆ ಯಾವುದೇ ತಯಾರಿ ಮಾಡಿಕೊಂಡಿಲ್ಲ. ಆಕಾಂಕ್ಷಿ ಆಗಿ ಸುತ್ತಾಡುತ್ತಿದ್ದೇನೆ ಎಂದರು.

ಇನ್ನೂ ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿಗೆ ಕಾಲಿಟ್ಟಿಲ್ಲ. ನನಗೂ ತುಮಕೂರಿಗೂ ಅವಿನಾಭಾವ ಸಂಬಂಧವಿದೆ. ಅಲ್ಲಿ ನನ್ನದೇ ಆದ ನೆಟ್ವರ್ಕ್ ಇದೆ. ಅಲ್ಲಿನ ಎಲ್ಲಾ ಜಾತಿವಾರು ಮಾಹಿತಿಯೂ ನನಗೆ ಇದೆ. ಜಾತಿ ಒಂದು ನಿಮಿತ್ತ ಮಾತ್ರ ಹಾಗಂತ ಅದೇ ಪ್ರಾಮುಖ್ಯತೆ ಅಲ್ಲ. ಸಮಾನತೆ ಇರಬೇಕು ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular